ನಮ್ಮ ಬಗ್ಗೆ

ನಾವು, ನಮ್ಮದು, ನಮ್ಮ ಬದ್ಧತೆ……

೧೯೭೪ ರ ಸಂದರ್ಭದಲ್ಲಿ (ಮೈಸೂರು ವಿವಿ) ಪದವಿಯಲ್ಲಿ ಪತ್ರಿಕೋದ್ಯಮ ವಿಷಯವನ್ನು ಅಭ್ಯಸಿಸಿರುವ ಹಿನ್ನೆಲೆಯೊಂದಿಗೆ ೧೯೭೯ ರಿಂದ ‘ಜಿಲ್ಲೆ ಸಮಾಚಾರ’ ಹೆಸರಿನ ಪತ್ರಿಕೆಯನ್ನು ದಾವಣಗೆರೆ ನಗರದಲ್ಲಿ ಆರಂಭಿಸಿದ್ದೆನು. ಮೊದಲಿಗೆ ವಾರಪತ್ರಿಕೆಯಾಗಿದ್ದುದನ್ನು ಅದೇ ಹೆಸರಿನಲ್ಲಿ ೨೦೦೫ ರಿಂದ ದಿನಪತ್ರಿಕೆಯನ್ನಾಗಿ ರೂಪಾಂತರಿಸಿಕೊಳ್ಳಲಾಯಿತು. ಮೊದಲಿಗೆ ಎರಡು ಪುಟ, ಒಂದು ವರ್ಷದ ಅವಧಿಯೊಳಗೇ ೬ ಪುಟಗಳೊಂದಿಗೆ ಪ್ರಕಟವಾಗುತ್ತಿರುವ ದಾವಣಗೆರೆ ಜಿಲ್ಲೆಯ ಮಟ್ಟಿಗೆ ಏಕೈಕ ಹಾಗೂ ಪ್ರಥಮ ದೈಹಿಕ ಎನ್ನುವ ಹೆಗ್ಗಳಿಕೆ ಇದೆ.

ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಪುಟಗಳೊಂದಿಗೆ ವಿಶೇಷಾಂಕವಾಗಿ ಪ್ರಕಟವಾಗುವುದುಂಟು. ವಿಶೇಷವಾಗಿ ಪ್ರತಿ ಶನಿವಾರ ( ವಾರದ ಕೊನೆಯ ದಿನ) ‘ಸಾಪ್ತಾಹಿಕ ಶನಿವಾರದ’ ಪುಟವನ್ನು ರೂಪಿಸುವ ಮೂಲಕ ವಿಶೇಷ ಬರಹಗಳಿಗೆ ಆದ್ಯತೆ/ಅವಕಾಶ ನೀಡಲಾಗುತ್ತಿದೆ, ಪ್ರತಿಕೋದ್ಯಮವು ಭಾನುವಾರವನ್ನು ಸಾಪ್ತಾಹಿಕ ವಿಶೇಷವಾಗಿ ಆಯ್ದುಕೊಂಡಿರುವಾಗ ‘ಜಿಲ್ಲೆ ಸಮಾಚಾರ’ ಮಾತ್ರ “ಶನಿವಾರದ ಸ್ಪೆಷಲ್” ಆಗಿ ಪ್ರಕಟಣೆಗೆ ನಾಂದಿ ಹಾಡಿದೆ.

ಪತ್ರಿಕಾ ಬಳಗವನ್ನು ರೂಪಿಸಿಕೊಳ್ಳುವ ಮೂಲಕ ಪ್ರತಿವರ್ಷ ಜನವರಿಯಲ್ಲಿ ಹಿಂದಿನ ವರ್ಷದ ಆಯ್ಕೆ ಪ್ರಕಟಿಸುವುದರೊಂದಿಗೆ ವಿವಿಧ ಕ್ಷೇತ್ರದ ಸಾಧಕರನ್ನು ಸ್ವತಃ ಗುರುತಿಸಿ (ಅರ್ಜಿ ಸ್ವೀಕಾರದ ಸಂಪ್ರದಾಯವನ್ನು ದೂರವಿಟ್ಟು) ಸನ್ಮಾನಿಸುವ ಪರಿಪಾಠವು ೨೦೦೭ ರಿಂದ ಚಾಲನೆಗೆ ಬಂದಿದೆ. ಇಡೀ ರಾಜ್ಯದಲ್ಲಿ ಜಿಲ್ಲಾ ಮಟ್ಟದ ಪತ್ರಿಕೆಯೊಂದು ಈ ತರಹದ ಕಾರ್ಯಕ್ರಮವನ್ನು ಮುಂದುವರಿಸಿರುವುದು ಕೂಡ ಈ ಪತ್ರಿಕೆಯ ವೈಶಿಷ್ಟಗಳಲ್ಲೊಂದು ಎನ್ನಬಹುದು.

ಅತ್ಯಾಧುನಿಕ ಮಾಧ್ಯಮಕ್ಕೂ ಸ್ಪಂದಿಸುವ ನಿಟ್ಟಿನಲ್ಲಿ ಇದೀಗ ವೆಬ್ಸೈಟ್ನ್ನು ಲಾಂಚ್ ಮಾಡಿದ್ದು, ಜಗತ್ತಿನಾದ್ಯಂತ ಇರುವ ಕನ್ನಡದ ಓದುಗರಿಗೆ ‘ಜಿಲ್ಲೆ ಸಮಾಚಾರ” ದೊಂದಿಗೆ ನ್ಯೂಸ್ ಓದುವ ಸದವಕಾಶ ದೊರೆತಂತಾಗಿದೆ ಎನ್ನಬಹುದು.

ವೈವಿಧ್ಯತೆ ಹಾಗೂ ಲೇಖನಗಳನ್ನು ಪ್ರಕಟಿಸುವುದರೊಂದಿಗೆ ಮುಖಪುಟ ಹಾಗೂ ಒಳಪುಟಗಳಲ್ಲೂ ವಿನೂತನ ವಿನ್ಯಾಸವನ್ನು ರೂಪಿಸುವುದು ಕೂಡ “ಜಿಲ್ಲೆ ಸಮಾಚಾರ” ದ ಗಮನಾರ್ಹ ಸಂಗತಿಗಳಲ್ಲೊಂದಾಗಿದೆ. ಯಾವುದೇ ” ಇಸಂ”, ಯಾವುದೇ ನಿರ್ದಿಷ್ಟ ಪಕ್ಷ ಹಾಗೂ ಧರ್ಮದ ‘ಲೇಬಲ್’ ಗಳಿಂದ ದೂರವಿದ್ದುಕೊಂಡು ಸರ್ವ ಜನಾದರಣಿಯ, ದಿಟ್ಟ, ನಿಲುವಿನ, ವೃತ್ತಿ ಬದ್ಧತೆಯ ಪತ್ರಿಕೆಯಾಗಿ ಕಾರ್ಯನಿರತವಾಗಿರುವುದೇ ‘ಜಿಲ್ಲೆ ಸಮಾಚಾರ’ ದಿನಪತ್ರಿಕೆಯ ಯಶಸ್ಸಿನ ಗುಟ್ಟು ಎನ್ನಬಹುದು.

ವಿ.ಹನುಮಂತಪ್ಪ, ಸಂಪಾದಕ