ಕನ್ನಡ ಭಾಷೆ ನಿತ್ಯೋತ್ಸವವಾಗಬೇಕು : ಓಂಕಾರ ಶಿವಾಚಾರ್ಯ ಶ್ರೀ

Share
  • 5
    Shares

ದಾವಣಗೆರೆ-ಕನ್ನಡದ ಭಾಷೆ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ, ನಿತ್ಯೋತ್ಸವವಾಗಬೇಕು ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀ ಹೇಳಿದರು.

ಇಲ್ಲಿನ ಆಲೂರು ಕನ್ವೇನ್ಷನಲ್ ಹಾಲ್ನಲ್ಲಿ ಲುಂಬಿನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜ್ ವತಿಯಿಂದ ೬೨ನೇ ಕನ್ನಡ ರಾಜ್ಯೋತ್ಸವ ಹಾಗೂ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಹಾಗೂ ೫ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕನ್ನಡ ರಾಜ್ಯೋತ್ಸವ ವರ್ಷಪೂರ್ತಿ ಆಚರಿಸುವ ಹಬ್ಬವಾಗಬೇಕು. ರಾಜ್ಯದ ಗಡಿಭಾಗಗಳಲ್ಲಿ ಇಂದು ಕನ್ನಡ ನಲುಗುತ್ತಿದೆ. ಈ ಹಿಂದೆ ನೆಲ, ಜಲ, ಭಾಷೆಗಾಗಿ ಅನೇಕ ಮಹನೀಯರ ಹೋರಾಡಿದ ಫಲವಾಗಿ ಉಳಿದಿರುವ ಕನ್ನಡವನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ ಎಂದ ಅವರು ನಾಡಿನ ಸಾಹಿತಿಗಳು, ಕವಿಗಳು ಕನ್ನಡ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದು, ಕನ್ನಡವನ್ನು ಬಳಸುವ ಮೂಲಕ ಅದನ್ನು ಉಳಿಸಿ-ಬೆಳಸಬೇಕಾಗಿದೆ ಎಂದರು.
ವೈದ್ಯಕೀಯ ಕ್ಷೇತ್ರವು ಇಂದು ವ್ಯಾಪಾರೀಕರಣವಾಗಿದ್ದು, ರೋಗಿಗಳು ವೈದ್ಯರ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಹ ಶೋಚನೀಯ ಸ್ಥಿತಿಯಾಗಿದೆ ಎಂದ ಅವರು ವೈದ್ಯರು ರೋಗಿಗಳಿಗೆ ಧೈರ್ಯ ತುಂಬುವುದರೊಂದಿಗೆ ಅವರಲ್ಲಿ ವಿಶ್ವಾಸ ಮೂಡಿಸಿ, ಪ್ರಮಾಣಿಕತೆ ಸೇವೆ ಮಾಡಿದಾಗ ಆರೋಗ್ಯವಂತ ಸಮಾಜ ಕಟ್ಟುವಂತ ಕೆಲಸ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಂಸದ ಜಿ.ಎಂ. ಸಿದ್ದೇಶ್ವರ್ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂಬ ಆದೇಶವಿದ್ದರೂ ಸಹ ಇದುವರೆಗೂ ಆದೇಶ ಜಾರಿಯಾಗಿಲ್ಲ ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಗಡಿಭಾಗಗಳಲ್ಲಿ ಕನ್ನಡ ಭಾಷೆ ಸೊರಗುತ್ತಿದ್ದು, ಅದರೆ ರಾಜ್ಯದ ಮಧ್ಯಕರ್ನಾಟಕ ಎನಿಸಿಕೊಂಡಿರುವ ದಾವಣಗೆರೆಯಲ್ಲಿ ಕನ್ನಡ ಭಾಷೆ ಉತ್ತಮ ಭಾಷೆಯಾಗಿದೆ ಎಂದ ಅವರು ಪೋಷಕರು ಮನೆಯಲ್ಲಿ ಕನ್ನಡ ಭಾಷೆಯನ್ನು ಮಾತನಾಡಿದಾಗ ಮಕ್ಕಳು ಸಹ ಮಕ್ಕಳು ಮೊದಲ ಆದ್ಯತೆ ನೀಡಲಿದ್ದಾರೆ ಎಂದ ಅವರು ದಾವಣಗೆರೆಯಲ್ಲಿ ಕನ್ನಡ ಭಾಷೆ ಗಟ್ಟಿಯಾಗಿ ಬೇರೂರಿದೆ. ಆದರೆ, ಬೇರೆ ಜಿಲ್ಲೆಗಳಲ್ಲಿ ಅನ್ಯ ಭಾಷೆಗಳ ಬಳಕೆ ಹೆಚ್ಚಾಗಿದೆ. ಕನ್ನಡ ನಾಡು, ನುಡಿಯ ಜೊತೆಗೆ ನಮ್ಮ ನೆಲ, ಜಲ, ಸಂಪತ್ತುಗಳನ್ನು ಉಳಿಸಿ, ಬೆಳೆಸುವ ಮೂಲಕ ಅಭಿವೃದ್ಧಿ ಕಾಣಬೇಕಿದೆ ಎಂದರು.

ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ಕನ್ನಡದ ಸೊಗಡು ದಾವಣಗೆರೆಯಲ್ಲಿ ಕಾಣುತ್ತಿದೆ. ದಾವಣಗೆರೆ ಜವಾರಿ ಭಾಷೆಯಾಗಿ ಎಲ್ಲರಲ್ಲೂ ನೆಲೆಯೂರಿದ್ದು, ರಾಜ್ಯದ ಗಡಿಭಾಗಗಳಲ್ಲಿ ಭಾಷೆಯ ಉಚ್ಛಾರ ಬದಲಾದರೂ ದಾವಣಗೆರೆಯಲ್ಲಿ ಮಾತ್ರ ಕನ್ನಡ ಭಾಷೆ ಹಚ್ಚ ಹಸಿರಾಗಿ ಉಳಿದಿದೆ ಎಂದ ಅವರು ನರ್ಸಿಂಗ್ ವಿದ್ಯಾರ್ಥಿಗಳು ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹಣಕ್ಕಾಗಿ ಜೊತು ಬೀಳದೆ ಸಮಾಜದಲ್ಲಿ ಉನ್ನತ ಹೆಸರನ್ನು ಪಡೆಯುವಂತೆ ಶುಭಹಾರೈಸಿದರು.ವಿಪ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿದರು.

ವಿಶ್ವ ಕರ್ನಾಟಕ ವೇದಿಕೆಯ ಕೆ.ಜಿ. ಯಲ್ಲಪ್ಪ, ಡಿಎಚ್ಓ ತ್ರಿಪುಲಾಂಬ, ಡಿಎಂಎಸ್ ಯೂತ್ ವಿಂಗ್ ಸಂಸ್ಥಾಪಕ ಅಧ್ಯಕ್ಷ ಜಿ. ವೀರಭದ್ರಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಂಗಪ್ಪ, ಪಾಲಿಕೆ ಸದಸ್ಯ ಡಿ.ಕೆ. ಕುಮಾರ್, ಡಿಎಂಎಸ್ ಯೂತ್ ವಿಂಗ್ ಕಾರ್ಯದರ್ಶಿ ಜಿ.ವಿ.ಗಂಗಾಧರ್, ಎನ್.ಜೆ. ನಿಂಗಪ್ಪ, ಜಿ.ವಿ. ಪ್ರಶಾಂತ್, ರೇಣುಕಾ ಮತ್ತಿತರರು ಇದ್ದರು.

Be the first to comment on "ಕನ್ನಡ ಭಾಷೆ ನಿತ್ಯೋತ್ಸವವಾಗಬೇಕು : ಓಂಕಾರ ಶಿವಾಚಾರ್ಯ ಶ್ರೀ"

Leave a comment

Your email address will not be published.


*