ಗ್ರಂಥಾಲಯ ಮೇಲ್ವಿಚಾರಕರಿಗೆ ಹಾವೇರಿಯಲ್ಲಿ ಪುನಶ್ಚೇತನ ಶಿಬಿರ

Share

ಹಾವೇರಿ-ಗ್ರಾಮ ಪಂಚಾಯತ ಗ್ರಂಥಾಲಯಗಳ  ಮೇಲ್ವಿಚಾರಕರ ಪುನಶ್ಚೇತನ  ಶಿಬಿರದ  ಉದ್ಘಾಟನೆಯನ್ನು ಮಂಗಳವಾರ ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಶಾಂತಾ ಹುಲ್ಮನಿ ಅವರು ನೆರವೇರಿಸಿದರು.ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಡಾ. ಸತೀಶಕುಮಾರ ಎಸ್ ಹೊಸಮನಿ  ಅವರು ಅಧ್ಯಕ್ಷತೆ ವಹಿಸಿದ್ದರು.   ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಬಿ.ಡಿ.ಕುಂಬಾರ, ಜಿ.ಪಂ.ಉಪಕಾರ್ಯದರ್ಶಿ ಗಳಾದ ಗೋವಿಂದಸ್ವಾಮಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕರಾದ ಕೆ.ಜಿ ವೆಂಕಟೇಶ,  ಡಾ.ಎನ್.ಎನ್ ಅರಬಗೊಂಡ ಅಸೋಸಿಯೇಟ್ಸ ಗ್ರಂಥಪಾಲಕರು, ಗ್ರಂಥಾಪಲಕರಾದ ಡಾ.ಮಲ್ಲಿಕಾರ್ಜುನ ಮೂಲಿಮನಿ, ಡಾ. ರಾಜೇಶ ತುರುಮುರಿ, ಶಿವಾನಂದ ಬುಳ್ಳಾ, ಡಾ. ಎ.ವಿ.ಬಾಳಿಗಾ  ಅವರು ಭಾಗವಹಿಸಿದ್ದರು.ಜಿಲ್ಲಾ ಕೇಂದ್ರ  ಗ್ರಂಥಾಲಯ ಮುಖ್ಯ  ಗ್ರಂಥಾಲಯಾಧಿಕಾರಿ ಶ್ರೀಮತಿ. ವೆಂಕಟೇಶ್ವರಿ. ಜಿ.ಎಸ್.  ಅವರು ಸ್ವಾಗತಿಸಿದರು.  ಮಹಾರಾಜ ಬಿ.ಕೆ ಅವರು  ನಿರೂಪಿಸಿದರು.

Be the first to comment on "ಗ್ರಂಥಾಲಯ ಮೇಲ್ವಿಚಾರಕರಿಗೆ ಹಾವೇರಿಯಲ್ಲಿ ಪುನಶ್ಚೇತನ ಶಿಬಿರ"

Leave a comment

Your email address will not be published.


*