ಜಗಳೂರಿನಲ್ಲಿ ಸಂವಿಧಾನ ದಿನಾಚರಣೆ

Share

ಜಗಳೂರು-ಸಂವಿಧಾನ ರಚನೆಯಿಂದ ಸಮಾಜದಲ್ಲಿ ಪ್ರತಿಯೊಬ್ಬರು  ಸಮಾನತೆಯಿಂದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ತಹಶಿಲ್ದಾರ್ ಶ್ರೀಧರ್ ಮೂರ್ತಿ ಹೇಳಿದರು

ಸೋಮವಾರ ಪಟ್ಟಣದ ತಾಲೂಕು ಕಛೇರಿ ಆವರಣದಲ್ಲಿ ಸಂವಿಧಾನ ದಿನದ ಅಂಗವಾಗಿ ಕಛೇರಿಯ ಎಲ್ಲಾ ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿಯನ್ನು ಬೋದಿಸಿದ ನಂತರ ಕಾರ್ಯಕ್ರಮವನ್ನು ಉದೇಶಿಸಿ ಮಾತನಾಡಿದರು ೧೯೪೯ ನವಂಬರ್ ೨೬ ರಂದು  ಸಂವಿಧಾನ ರಚನ ಸಭೆಯು ಭಾರತ ಸಂವಿಧಾನವನ್ನ ಅಂಗಿಕರಿಸಿತು ಈ ದಿನವನ್ನು ಸಂವಿಧಾನ ದಿನವನ್ನಾಗಿ ಆಚರಿಸಿಕೊಂಡ ಬರಲಾಗುತ್ತಿದೆ ಅಂಬೇಡ್ಕರ್ ರವರು ಸಂವಿಧಾನ ರಚಿಸುವಾಗ  ತಮಗೆ ಎದುರಾದ  ಸಮಸ್ಯೆಗಳನ್ನು ಎದುರಿಸಿ ಇಡೀ ವಿಶ್ವಕ್ಕೆ ಮಾದರಿ ಯಗುವಂತ ದೊಡ್ಡ ಸಂವಿಧಾನವನ್ನು ರಚಿಸಿರುವುದರಿ ಂದಲೇ ಎಲ್ಲಾ ಸಮಾಜದವರು ಸಮಾನತೆಯಿಂದ ಜೀವನ ಸಾಗಿಸಲು  ಸಹಕಾರಿಯಾಗಿದೆ , ಸಿಬ್ಬಂದಿಗಳು ಸಹ ಇದರ ಮಹತ್ವವನ್ನು ಅರಿತು ತಮ್ಮ ಕೆಲಸಕಾರ್ಯಗಳನ್ನು ಮಾಡುವುದರ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದರು

ಈ ಸಂದರ್ಭದಲ್ಲಿ ಗ್ರೇಡ್ ೨ ತಹಶಿಲ್ದಾರ್ ರಾದ ರವಿ, ದಿವಾಕರ್ ರೆಡ್ಡಿ, ಆರ್‌ಐ ಅಜ್ಜಪ್ಪ ಪತ್ರಿ,  ರಾಮಚಂದ್ರ , ಸಿಬ್ಬಂದಿಗಳಾದ ಅಶೋಕ್ ,ನೇತ್ರವತಿ , ಸುನಿಲ್ ಕುಮಾರ , ಗ್ರಾಮ ಲೆಕ್ಕಾಧಿಕಾರಿಗಳಾದ ವಿನಯ್, ದುರುಗೇಶ್ ,ವಿಜಯಜ ,ಸೇರಿದಂತೆ ಮತ್ತಿತರು ಹಾಜರಿದ್ದರು.

Be the first to comment on "ಜಗಳೂರಿನಲ್ಲಿ ಸಂವಿಧಾನ ದಿನಾಚರಣೆ"

Leave a comment

Your email address will not be published.


*