ಡಯಬಿಟಿಸ್ ಎಚ್ಚರಿಸುವ ಸ್ನೇಹಿತ!

Share

ಡಯಬಿಟಿಸ್ ಇದೆಯೆಂದು ಅಧೈರ್ಯಪಡಬೇಡಿ. ಅದನ್ನು ಕೆಳಕ್ಕೆ ಬೀಳಿಸಿ ದಿಟ್ಟತನದಿಂದ ಮೆಟ್ಟಿಲನ್ನೇರುವ ನಿರ್ಧಾರ ಮಾಡಿ.ಡಯಾಬಿಟೀಸ್ ಇದ್ದವರು ಬಹಳಷ್ಟು ಸಂಖ್ಯೆಯಲ್ಲಿ ಅವರ ಜೀವನವನ್ನು ಸಂತೋಷಕವಾಗಿರುವಂತೆ ರೂಪಿಸಿಕೊಂಡಿದ್ದಾರೆ.ಅನಿವಾರ್ಯವಾಗಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಅದರಿಂದ ಪೂರ್ಣ ಮುಕ್ತರಾಗಲು ಸಾಧ್ಯವಿಲ್ಲವಾದ್ದರಿಂದ ಕ್ರಿಯಾಶೀಲರಾಗುತ್ತಿದ್ದಾರೆ.ತಿನ್ನುವುದು ಅಗತ್ಯವಾಗಿರುವುದರಿಂದ ‘ಮಿತಿ’ಯನ್ನು ಪಾಲಿಸುತ್ತಿದ್ದಾರೆ.ಹೆಲ್ತಿಯಾಗಿ ಆಕ್ಟೀವ್ ಆಗಿ  ಇರುವುದಕ್ಕೆ ಪ್ರಯತ್ನ ನಡೆಸಿದ್ದಾರೆ. ಸಕ್ಕರೆಯನ್ನು ಶಾಪ ಎಂದುಕೊಳ್ಳುವುದರ ಬದಲು ಎಚ್ಚರಿಸುವ ಒಬ್ಬ ಸ್ನೇಹಿತ ಎಂದು ತಿಳಿಯಿರಿ.ಜೀವನವನ್ನು ನಮ್ಮ ಹತೋಟಿಗೆ ತರುವ ಸಂಗಾತಿ ಎಂದುಕೊಳ್ಳಬಹುದು.

ದೇಹಕ್ಕೆ ಯಾವ ರೀತಿಯಲ್ಲೂ ಸುಸ್ತನ್ನು ಉಂಟು ಮಾಡದಿರುವ ಆಧುನಿಕ ಸೌಕರ್ಯಗಳಲ್ಲಿ ಲಿಫ್ಟ್ ಕೂಡಾ ಒಂದು. ಒಮ್ಮೊಮ್ಮೆ ಇದೇ ನಮ್ಮ ಆರೋಗ್ಯಕ್ಕೆ ರಿಸ್ಕ್‌ನ್ನು ಸೃಷ್ಟಿಸುತ್ತದೆ. ಮೆಟ್ಟಿಲುಗಳು  ಮಾಡುವಂತಹ

ಒಳ್ಳೆಯದನ್ನು ಮರೆಯುವಂತೆ  ಮಾಡುವುದು.ಹೌದು, ಮೆಟ್ಟಿಲುಗಳನ್ನು ನಂಬಿದರೆ ನಮ್ಮ ಫೇಸ್,ಫೇಟ್ ಉತ್ತಮವಾಗುತ್ತವೆ. ಆರೋಗ್ಯ  ಸಂಪತ್ತು ಕೂಡ ವೃದ್ಧಿಸುತ್ತದೆ. ನಾನಾ ಸಮಸ್ಯೆಗಳಿಗೆ ಕಾರಣವಾಗುವ

ಡಯಬಿಟಿಸ್‌ನಂತಹ ಕಾಯಿಲೆಗಳು ಹತೋಟಿಯಲ್ಲಿರುತ್ತವೆ.

ನೀವು ಈ ಲೇಖನವನ್ನು ಒಂದೇ ಕಡೆ ಕೂತುಕೊಂಡು ಓದುತ್ತಿರುವಿರೆ? ಸ್ವಲ್ಪ ಆಚೆ ಈಚೆ ನಡೆಯುತ್ತಾ ಓದಿರಿ. ಹತ್ತಿರದಲ್ಲೇ ಇರುವ ಮಾರ್ಕೆಟ್‌ಗೆ ಬೈಕ್‌ನಲ್ಲಿ ಹೋಗಿ ಬರುವಿರಾ? ನಡೆದುಕೊಂಡು ಹೋಗುವುದ್ದನ್ನು ರೂಢಿಸಿಕೊಳ್ಳಬಹುದಲ್ಲವೆ? ದೇಹಕ್ಕೆ ಕೆಲಸ ಕೊಡಿ; ಸಕ್ಕರೆ ಕಾಯಿಲೆಗೆ ಗುಡ್‌ಬೈ ಹೇಳಿ.

ಡಯಬಿಟಿಸ್ ಮನುಷ್ಯ ಅಸ್ತಿತ್ವದೊಂದಿಗೇ ಅಂಟಿಕೊಂಡಿದೆ. ಪ್ರಾಚೀನ ಈಜಿಪ್ಟಿನಿಯರು, ಭಾರತೀಯ ಆಯುರ್ವೇದ ವೈದ್ಯರು ಕ್ರಿ.ಪೂ.೧೫೦೦ರ ಅವಧಿಯಲ್ಲೇ ಈ ಕಾಯಿಲೆತನ್ನು ಗುರ್ತಿಸಿದರು. ಭಾರತೀಯರು ಇದಕ್ಕೆ ‘ಮಧುಮೇಹ’ ಎಂದು ಹೆಸರಿಸಿದರು.

ಆಸ್ಕಾರ್ ಮಿನ್‌ಕೊವ್‌ಸ್ಕಿ, ಜೋಸೆಫ್ ವಾನ್ ಮೆರಿಂಗೆಂಬ ತಜ್ಞರು ತಮ್ಮ ಸಂಶೋಧನೆಯಲ್ಲಿ ಪಾಂಕ್ರಿಯಾಸ್ ಕೆಲಸದಲ್ಲಿನ ಲೋಪವೇ ಮಧುಮೇಹಕ್ಕೆ ಕಾರಣ ಎಂದು ಗುರ್ತಿಸಿದರು. ತಮ್ಮ ಪ್ರಯೋಗದಲ್ಲಿ ಒಂದು ನಾಯಿಗೆ ಪಾಂಕ್ರಿಯಾಸ್ನ್ನು ತೊಲಗಿಸಿ ಅದರ ಮೂತ್ರವನ್ನು ಪರೀಕ್ಷಿಸಿದಾಗ ಅದರಲ್ಲಿ ಸಕ್ಕರೆ ಹೆಚ್ಚು ಇರುವುದು ತಿಳಿದುಬಂದದ್ದರಿಂದ  ಈ ನಿರ್ಧಾರಕ್ಕೆ ಬರಲಾಯಿತು.

ವಂಶಪಾರಂಪರ್ಯ ಕಾರಣದಿಂದಲೂ,ಆಧುನಿಕ ಜೀವನದಲ್ಲಿನ ಒತ್ತಡಗಳಿಂದ,ವ್ಯಾಯಾಮ ಇಲ್ಲದಿರುವುದು, ಮಿತಿಮೀರಿ ತಿನ್ನುವುದರಿಂದಲೂ ಮಧುಮೇಹಕ್ಕೆ  ಕಾರಣವಾಗಬಹುದು.ರಸಗುಲ್ಲಾ, ಗುಲಾಬ್‌ಜಾಮ್‌ನಂತಹ ಸಿಹಿಪದಾರ್ಥಗಳಲ್ಲೂ ಸಕ್ಕರೆ ಪಾಕ ಹೆಚ್ಚುವರಿ ರುಚಿಗೆ ಕಾರಣವಾಗುತ್ತದೆ. ಅದೇ ರೀತಿ ಮಧುವೇಹ ಇರುವವರಲ್ಲೂ ಸಹ ರಕ್ತಪ್ರಸರಣ ಸರಾಗವಾಗಿ ಇರುವುದಿಲ್ಲ. ಅದು ಪಾರ್ಶ್ವವಾಯು, ಹೃದ್ರೋಗದಂತಹ ಪ್ರಾಣಾಂತಿಕ ಕಾಯಿಲೆಗೆಗಳಿಗೆ ಅವಕಾಶವಾಗುತ್ತದೆ. ಶರೀರದಲ್ಲಿನ ಕ್ಲೋಮಗ್ರಂಥಿ (ಪಾಂಕ್ರಿಯಾಸ್) ಅಗತ್ಯದಷ್ಟು ಕಾರ್ಯವಿಧಾನ ಕಡಿಮೆಯಾಗಿ, ಅದು ಉತ್ಪತ್ತಿ ಮಾಡುವ ಇನ್ಸುಲಿನ್‌ಗೆ ಶರೀರದಲ್ಲಿನ ಜೀವಕಣಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೂ ಮಧುಮೇಹ ಬರುತ್ತದೆ.

ಮಧುಮೇಹದಲ್ಲಿ ಬಹಳಷ್ಟು ವಿಧಗಳಿವೆ. ಆದರೆ ಹೆಚ್ಚಿನವರು ನೋವನ್ನು ಅನುಭವಿಸುವದು ಮಾತ್ರ ಮೂರು ರೀತಿಯ ಮಧುಮೇಹದೊಂದ. ಅವು, ಟೈಪ್-೧,ಟೈಪ್-೨. ಜೆಸ್ಟೇಷನಲ್  ಡಯಾಬಿಟಿಸ್. ಆದರೆ ಜೀವನಶೈಲಿಯ ಲೋಪದಿಂದ ಹೆಚ್ಚು ಮಂದಿ ತೊಂದರೆಪಡುವುದು ಮಾತ್ರ ಟೈಪ್-೨ ಡಯಾಬಿಟಿಸ್. ಈ ಬಗ್ಗೆ ಹೆಚ್ಚಿನ ಸಂಗತಿಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ.

ಟೈಪ್-೨ ಮಧುಮೇಹವು ದೀರ್ಘಕಾಲ ಮುಂದುವರಿಯುವುರಿಂದ ಶರೀರದಲ್ಲಿ ಇನ್ಸುಲಿನ್ ಉತ್ಪತ್ತಿ ತನ್ನಷ್ಟಕ್ಕೆ ಅದೇ ಬಂದ್ ಆಗುವ ಪರಿಸ್ಥಿತಿ ಎದುರಾಗುತ್ತದೆ. ಅದರಿಂದಾಗಿ ಮೆಲಿಟಸ್ ಇಲ್ಲವೇ ಅಡಲ್ಟ್ ಅನ್‌ಸೆಟ್  ಡಯಾಬಿಟಿಸ್ ಮೆಲಿಟಸ್ ಇಲ್ಲವೇ ಅಡಲ್ಟ್ ಅನ್‌ಸೆಟ್ ಡಯಬಿಟಿಸ್ ಎನ್ನುತ್ತಾರೆ. ಮಧುಮೇಹಿಗಳಲ್ಲಿ ಸರಾಸರಿ ಶೇ.೯೦ ರಷ್ಟು ಮಂದಿ ಈ ಲಕ್ಷಣಗಳನ್ನು ಹೊಂದಿರುತ್ತಾರೆ.

ಸಕ್ಕರೆ ಕಾಯಿಲೆ ಲಕ್ಷಣಗಳು, ಸಮಸ್ಯೆಗಳು: ತಲೆನೋವು,ಕಣ್ಣು ಮಸಕಾಗುವುದು, ಕಣ್ಣು ತಿರುಗಿದಂತಾಗುವುದು,ಮೆದುಳಿಗೆ ಅಗತ್ಯವಾದ ಸಕ್ಕರೆ ದೊರಕದಿರುವುದರಿಂದ ಬೇಗನೆ ಸುಸ್ತು ಎನಿಸುವುದು,ಸ್ವಲ್ಪ ಅವಧಿಯಲ್ಲೇ ತೂಕ ಹೆಚ್ಚುವುದು ಇಲ್ಲವೇ ಕಡಿಮೆಯಾಗುವುದು. ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗುವಿಕೆಯಂತಹ ಲಕ್ಷಣಗಳು ಬಹಳ ಮಂದಿಯಲ್ಲಿ ಕಾಣೆಸುತ್ತವೆ.

* ಮಧುಮೇಹಕ್ಕೊಳಗಾಗಿದ್ದರೂ, ಕೆಲವರಲ್ಲಿ ಕಾಯಿಲೆಯ ಲಕ್ಷಣಗಳು ಕಂಡುಬರುವುದಿಲ್ಲ.ಪ್ರತಿ ಆರು ತಿಂಗಳಿಗೊಮ್ಮೆ ರಕ್ತಪರೀಕ್ಷೆಯನ್ನು ಮಾಡಿಸಿಕೊಂಡರೆ ಮಾತ್ರ ನಿಜವಾದ ಸ್ಥಿತಿಯು ಅರಿವಿಗೆ ಬರುತ್ತದೆ.

*  ಯಾವುದೇ ಜಾಗರೂಕ ಕ್ರಮಗಳನ್ನು ಅನುಸರಿಸದೆ, ಸೂಕ್ತ ಪರೀಕ್ಷೆಗಳನ್ನೂ ಮಾಡಿಸಿಕೊಳ್ಳದೆ ಅಲಕ್ಷಿಸಿದರಡ ಸಕ್ಕರೆ ಕಾಯಿಲೆಯಿಂದಾಗಿ  ಹೃದ್ರೋಗ, ಪಾರ್ಶ್ವವಾಯು,ಅಂಧತ್ವದಂತಹ ಪ್ರಮಾದಕರ ಪರಿಸ್ಥಿತಿಯೊಂದಿಗೆ ಮೂತ್ರ ವ್ಯವಸ್ಥೆಯಲ್ಲಿ ಇನ್‌ಫೆಕ್ಷನ್ ಮತ್ತಿತರ ಸಮಸ್ಯೆಗಳು ಕಾಡುವುದುಂಟು.

* ಸಕ್ಕರೆ ಕಾಯಿಲೆಯಿದ್ದವರಿಗೆ ಆಕಸ್ಮಿಕವಾಗಿ ಗಾಯಗಳಾದರೆ ತಕ್ಷಣ ವಾಸಿಯಾಗುವುದಿಲ್ಲ. ಇಂತಹ ಸಂದರ್ಭದಲ್ಲಿ  ನಿರ್ಲಕ್ಷ್ಯ ಮಾಡಿದರೆ ಗಾಯವಾಗಿರುವ ಭಾಗವನ್ನು ಪೂರ್ತಿಯಾಗಿ ತೊಲಗಿಸಬೇಕಾದ ಪರಿಸ್ಥಿತಿ ಉಂಟಾಗಬಹುದು.

Be the first to comment on "ಡಯಬಿಟಿಸ್ ಎಚ್ಚರಿಸುವ ಸ್ನೇಹಿತ!"

Leave a comment

Your email address will not be published.


*