ಯುವತಿ ಆತ್ಮಹತ್ಯೆ ; ಪ್ರತಿಭಟನೆ

Share

ಹರಪನಹಳ್ಳಿ-ಶೌಚಾಲಯ ನಿರ್ಮಾಣಕ್ಕೆ ಅಡ್ಡಿ ಪಡಿಸಿ ಅವಮಾನಗೊಳಿಸಿದ್ದಕ್ಕಾಗಿ ಬೇಸರಗೊಂಡ ಮಹಿಳೆಯೊಬ್ಬರು ಮೈಮೇಲೆ ಸೀಮೆಎಣ್ಣೆ ಸುರಿದು ಕೊಂಡು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಪೋಷಕರು ಗ್ರಾ.ಪಂ.ಮುಂದೆ ಶವವಿಟ್ಟು ಪ್ರತಿಭಟನೆ ಮಾಡಿದ ಘಟನೆ  ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ ಜರುಗಿದೆ

ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದ ಅನ್ನಪೂರ್ಣ (೨೧) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು ಗ್ರಾಮ ಪಂಚಾಯಿತಿ ವತಿಯಿಂದ ಶೌಚಾಲಯ ಮಂಜೂರಾಗಿದ್ದು ಇನ್ನೇನು ಶೌಚಾಲಯದ ನಿರ್ಮಾಣಕ್ಕೆ ಗುಂಡಿ ತೆಗೆಯಲು ಹೋದ ಮೃತಳ ತಂದೆ ಸುರೇಶಪ್ಪನಿಗೆ ಜಂಡಾಕಟ್ಟ್ಟೆಯ ಸಮಿತಿಯವರು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರ ಹಾಗೂ ಗ್ರಾಮ ಪಂಚಾಯಿತಿಯವರು ಮತ್ತು ಗ್ರಾಮದ ಕೆಲ ಮುಖಂಡರು ಇಲ್ಲಿ ದೇವರ ಜಾಗವಿದ್ದು ಈ ಸ್ಥಳದಲ್ಲಿ ಶೌಚಾಲಯ ನಿರ್ಮಾಣ ಮಾಡಬೇಡಿ ಎಂದು ಕೆಲಸಕ್ಕೆ ಅಡ್ಡಿ ಪಡಿಸಿ ನಮ್ಮ ತಂದೆಯವರಿಗೆ ಅವಮಾನಗೊಳಿಸಿದರೆಂದು ಮನನೊಂದ ಯುವತಿ ಸೀಮೆಎಣ್ಣೆ ಮೈಮೇಲೆ ಸುರಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಆ ಯುವತಿಯನ್ನು ಹೆಚ್ಚಿನ ಚಿಕಿತ್ಸೆ ಗಾಗಿ ದಾವಣಗೆರೆ ಸಾರ್ವಜಿನಿಕ ಆಸ್ಪತ್ರೆ ದಾಖಲು ಮಾಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ   ಅನ್ನಪೂರ್ಣ ಮೃತ ಪಟ್ಟಿದ್ದು ನನ್ನ ಮಗಳ ಸಾವಿಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಗ್ರಾಮದ ಕೆಲ ಮುಖಂಡರು ಕಾರಣವಾಗಿದ್ದಾರೆ ಎಂದು ಮೃತಳ ಪೋಷಕರು ತಪ್ಪಿಸ್ಥರಿಗೆ ಶಿಕ್ಷೆ ಯಾಗಬೇಕು ಎಂದು ಗ್ರಾಮ ಪಂಚಾಯಿತಿ  ಮುಂದೆ ಶವವಿಟ್ಟು ಪ್ರತಿಭಟನೆ ನಡೆಸಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಪೋಷಕರು ಆಕ್ರೋಶ ವ್ಯಕ್ತ ಪಡಿಸಿದರು.  ಈ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Be the first to comment on "ಯುವತಿ ಆತ್ಮಹತ್ಯೆ ; ಪ್ರತಿಭಟನೆ"

Leave a comment

Your email address will not be published.


*