ವರ್ತೂರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ; ವೈ.ಎನ್. ಮಹೇಶ್

Share

ಹರಿಹರ-ಮಾಜಿ ಶಾಸಕ ಆರ್. ವರ್ತೂರು ಪ್ರಕಾಶ್ ರವರ ಮಾರ್ಗದರ್ಶನದಲ್ಲಿ ಡಿ.೧೯ ರಂದು ವಿಜಯಪುರದಲ್ಲಿ ಪ್ರಾರಂಭಿಸಲಾಗುತ್ತಿರುವ ನಮ್ಮ ಕಾಂಗ್ರೆಸ್ ಪಕ್ಷದ (ವರ್ತೂರು ಕಾಂಗ್ರೆಸ್ ಪಕ್ಷ) ಅಭ್ಯರ್ಥಿಯಾಗಲು ನನಗೆ ಒತ್ತಾಯವಿದ್ದು, ನಾನು ಹರಿಹರದ ಜನರೊಂದಿಗೆ ಸಮಾಲೋಚನೆ ನಡೆಸಿ ನಿರ್ಣಯ ತೆಗೆದುಕೊಳ್ಳುತ್ತೇನೆ ಎಂದು ಮಾಜಿ ಸಚಿವ ಹಿರಿಯ ಕಾಂಗ್ರೆಸ್ ನಾಯಕ ಡಾ.ವೈ. ನಾಗಪ್ಪನವರ ಪುತ್ರ ವೈ.ಎನ್. ಮಹೇಶ್ ಹೇಳಿದರು.

ನಗರದ ರಚನಾ ಕ್ರೀಡಾ ಟ್ರಸ್ಟ್‌ನಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಮತ್ತು ನನ್ನ ತಂದೆಯವರು ಕಳೆದ ೪೦ ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದು, ನಮ್ಮ ತಂದೆಯವರು ಶಾಸಕರು, ಸಚಿವರಾಗಿ ಹರಿಹರ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡಿದ್ದು, ಇಂದು ಕಾಂಗ್ರೆಸ್ ಪಕ್ಷದಲ್ಲಿ ನಮ್ಮನ್ನು ಗಣನೆಗೆ ತೆಗೆದುಕೊಳ್ಳದೆ ಇರುವ ಸಂದರ್ಭದಲ್ಲಿ ನಾನೇಕೆ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಬಾರದು ಎಂದು ಯೋಚಿಸಿದ್ದೇನೆ. ಈಗಾಗಲೇ ನಮ್ಮ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಲು ನನಗೆ ಸೂಚನೆ ನೀಡಲಾಗಿದ್ದು, ನಾನು ಕ್ಷೇತ್ರದ ನನ್ನ ಮತ್ತು ನನ್ನ ತಂದೆಯವರ ಅನುಯಾಯಿಗಳು ಮತ್ತು ಜನತೆಯಲ್ಲಿ ಸಮಾಲೋಚನೆ ನಡೆಸಿ ಎಲ್ಲರೂ ಒಪ್ಪಿಗೆ ನೀಡಿದರೆ, ಖಂಡಿತವಾಗಿಯೂ ಸ್ಪರ್ಧಿಸುವುದಾಗಿ ತಿಳಿಸಿದರು. ಗುತ್ಯಪ್ಪ ಜೋಗಪ್ಪನವರ್ ಮಾತನಾಡಿ, ಆರ್. ವರ್ತೂರು ಪ್ರಕಾಶ್ ರವರು ಯಾವುದೇ ಪಕ್ಷದ ಬೆಂಬಲವಿಲ್ಲದೆ ಎರಡು ಬಾರಿ ಸ್ವಾತಂತ್ರ ಅಭ್ಯರ್ಥಿಯಾಗಿ ಜಯಗಳಿಸಿ ಶಾಸಕ ಹಾಗೂ ಸಚಿವರಾಗಿ ಸೇವೆ ಸಲ್ಲಿಸಿ ಈ ಬಾರಿ ಕಾಂಗ್ರೆಸ್‌ನ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಬೇಕೆಂದು ಮೊಟ್ಟಮೊದಲಿಗೆ ಧ್ವನಿ ಎತ್ತಿದ್ದ ನಾಯಕರಾಗಿದ್ದರು. ಇವರು ವರ್ತೂರು ಪ್ರಕಾಶ್ ರವರು ೨೦೧೨ರಲ್ಲಿ ನೂತನ ಪಕ್ಷವನ್ನು ನೋಂದಾಯಿಸಿ ಅದಕ್ಕೆ ವರ್ತೂರು ಕಾಂಗ್ರೆಸ್ ಪಕ್ಷ ಎಂದು ಹೆಸರಿಸಿದ್ದು, ಇಂದು ಅದೇ ಪಕ್ಷವು ನಮ್ಮ ಕಾಂಗ್ರೆಸ್ ಪಕ್ಷ ಎಂಬ ನೂತನ ಹೆಸರಿನಿಂದ ೧೯.೧೨.೨೦೧೭ರಂದು ವಿಜಯಪುರದಲ್ಲಿ ರಾಜ್ಯಾಧ್ಯಕ್ಷರಾಗಿ ಮಲ್ಲೇಶ್ ಎಸ್. ಬಣಕಾರ, ರಾಜ್ಯಪ್ರಧಾನ ಕಾರ್ಯದರ್ಶಿ ಯಾಗಿ ಜಿ.ಎಚ್. ಚಿದಾನಂದ್, ರಾಜ್ಯ ಉಪಾಧ್ಯಕ್ಷರುಗಳಾಗಿ ಮಾಲತೇಶ್ ಗುಡದಪ್ಪನವರ್, ನೀಲಕಂಠ ಬೇವಿನ್ ಕಲ್ಮಲ್ ಹಾಗೂ ಅಲಿ ಅಹಮ್ಮದ್ ಖಾನ್, ರಾಜ್ಯ ಖಜಾಂಚಿಯಾಗಿ ಎಮ್. ಕೋಲ್ದಂಡ ಇವರನ್ನೊಳಗೊಂಡಂತೆ ಪಕ್ಷವನ್ನು ಸ್ಥಾಪನೆ ಮಾಡಲಾಗುವುದು ಎಂದರು.ಇದರ ನೇತೃತ್ವವನ್ನು ಸಂಸ್ಥಾಪಕರಾದ ವರ್ತೂರು ಪ್ರಕಾಶ್ ರವರು ವಹಿಸಲಿದ್ದು, ರಾಜ್ಯ ವಿವಿಧ ಭಾಗಗಳಿಂದ ವಿವಿಧ ಜನಾಂಗದ ಅಭಿಮಾನಿಗಳು ಆಗಮಿಸಲಿದ್ದಾರೆ. ಇದರ ಸಂಬಂಧವಾಗಿ ದಾವಣಗೆರೆ ಜಿಲ್ಲಾ ಪೂರ್ವಬಾವಿ ಸಭೆಯನ್ನು ನ.೨೯ರ ಬುಧವಾರದಂದು ಹರಿಹರ ನಗರದ ಜೆ.ಸಿ. ಬಡಾವಣೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆಯಲಾಗಿದ್ದು, ಸಭೆಗೆ ಪಕ್ಷದ ಸಂಸ್ಥಾಪಕರಾದ ವರ್ತೂರು ಪ್ರಕಾಶ್ ರವರು ಮತ್ತು ರಾಜ್ಯದ ಪದಾಧಿಕಾರಿಗಳು ಆಗಮಿಸುವರು. ಜಿಲ್ಲಾ ಗೌರವಾ ಧ್ಯಕ್ಷರಾದ ವೈ.ಎನ್. ಮಹೇಶ್‌ರವರು ಉಪಸ್ಥಿತರಿದ್ದು, ಕಾರ್ಯಕರ್ತರ ಸಲಹೆ ಮತ್ತು ಸಹಕಾರ ದಂತೆ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.ಗೋಷ್ಠಿಯಲ್ಲಿ ಬಿ. ಗುಡ್ಡಪ್ಪ, ಪರುಶುರಾಮ ದಾವಣಗೆರೆ, ಹೊನ್ನಾಳಿ ಬಸವರಾಜ ಉಪಸ್ಥಿತರಿದ್ದರು.

Be the first to comment on "ವರ್ತೂರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ; ವೈ.ಎನ್. ಮಹೇಶ್"

Leave a comment

Your email address will not be published.


*