ವಿಜಯೋಲ್ಲಂಘನಕ್ಕೆ ಮತ್ತೊಂದು ಹೆಸರೇ ವಿಜಯಲಕ್ಷ್ಮಿ

Share

ವಿಜಯ ಮತ್ತು ಎರಡೂ ಹೆಸರುಗಳ ಸಮ್ಮೀಳನವಾಗಿರುವ ವಿಜಯಲಕ್ಷ್ಮಿಯವರಿಗೆ ಮನೆತನದ ಬಳುವಳಿಯಾಗಿರುವ ವೀರಮಾಚನೇನಿಯೂ ಜೊತೆಯಾಗಿದೆ. ಹೀಗಾಗಿ ಹೆಸರಿಗೆ ಅನ್ವರ್ಥವಾಗಿ ಅವರು ತಮ್ಮ ಬದುಕಿನ ಪ್ರಯತ್ನಗಳಲ್ಲಿ ವಿಜಯಗಳನ್ನು ಸಾಧಿಸುವುದರೊಂದಿಗೆ ಲಕ್ಷ್ಮಿ ಕಟಾಕ್ಷವನ್ನೂ ಹೊಂದಿದ್ದಾರೆ. ಎಂತಹುದೇ ಕ್ಲಿಷ್ಟ ಸಂದರ್ಭದಲ್ಲೂ ಎದೆಗುಂದದೆ ವಿರೋಚಿತ ಹೆಜ್ಜೆಯನ್ನಿಡುವುದು ಕೂಡ ಇವರಿಗೆ ಸಾಧ್ಯವಾಗಿದೆ.

ದೂರದ ಆಂಧ್ರಪ್ರದೇಶದ ಗ್ರಾಮವೊಂದರಿಂದ ಪತಿಯೊಂದಿಗೆ ನೆಲೆಯೂರಲು ದಾವಣಗೆರೆ ಸೇರಿದ ವಿಜಯಲಕ್ಷ್ಮಿಯವರಿಗೆ ಶಿಕ್ಷಣ ಕೇಂದ್ರವೊಂದನ್ನು ಸ್ಥಾಪಿಸುವ ಆಲೋಚನೆ ಬಂದದ್ದು ಒಂದು ರೀತಿಯಲ್ಲಿ

ಅನಿವಾರ್ಯ ಹಾಗೂ ಛಲದ ತೀರ್ಮಾನವಾಗಿತ್ತೆನ್ನಬಹುದು. ಅದು ೧೯೮೬ರ ಸಂದರ್ಭ. ರಾಷ್ಟ್ರಕವಿ ಕುವೆಂಪು ಅವರಿಂದ ಪ್ರೇರೇಪಿತರಾಗಿ ‘ವಿಶ್ವಚೇತನ ವಿದ್ಯಾನಿಕೇತನ’ ಸಂಸ್ಥೆಗೆ ಬೀಜಾಂಕುರ ಮಾಡಿಯೇ ಬಿಟ್ಟರು.

ಗ್ರಾಮೀಣ ಭಾಗದ, ಆರ್ಥಿಕವಾಗಿ ಸಬಲರಲ್ಲದವರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಚಿಕ್ಕ ಪ್ರಮಾಣದಲ್ಲಿಯೇ ಹೈಸ್ಕೂಲು ಆರಂಭವಾಯಿತು. ವಸತಿಯುತ ಶಾಲೆ, ಪದವಿಪೂರ್ವ ಶಿಕ್ಷಣ ಹೀಗೆ ಒಂದೊಂದೇ ಹಂತದ ಮೆಟ್ಟಿಲೇರಿದ ವಿಜಯಲಕ್ಷ್ಮಿಯವರಿಂದು ಬೃಹತ್ ವಿದ್ಯಾಸಂಸ್ಥೆಯಾಗಿ ರೂಪುಗೊಳ್ಳುವುದರ ಹಿಂದೆ ಅಪಾರ ಬದ್ಧತೆ ಹಾಗೂ ಛಲವಂತಿಕೆಯಿಂದ ಮುನ್ನುಗ್ಗಿದ್ದಾರೆ.

ದಾವಣಗೆರೆಯಂತಹ ನಗರದಲ್ಲಿ ಬಲಾಢ್ಯ ವಿದ್ಯಾಸಂಸ್ಥೆಗಳ ಪೈಪೋಟಿಯಲ್ಲೂ ನಗರದ ಹೊರವಲಯದಲ್ಲಿ, ಓರ್ವ ಮಹಿಳೆಯಾಗಿ ಮಾಮೂಲಿ ಜಾತಿ ಅಥವಾ ರಾಜಕೀಯ ಪ್ರಭಾವದ ಬೆಂಬಲವಿಲ್ಲದೆ ಆದರ್ಶಪೂರ್ಣ ಶಿಕ್ಷಣವೊಂದನ್ನೇ ಬಂಡವಾಳವನ್ನಾಗಿಸಿಕೊಂಡಿದ್ದು ಒಂದು ಮಹತ್ವದ ಮೈಲಿಗಲ್ಲು ಎನ್ನುವಂತಾಯಿತು.

ಪ್ರತಿವರ್ಷವೂ ಚೇತನ ಉತ್ಸವದ ಏರ್ಪಾಡು, ಕ್ರೀಡೆ, ಸಂಸ್ಕೃತಿ ಹಾಗೂ ಪ್ರತಿಭಾವಂತಿಕೆಯ ಸ್ಪರ್ಧೆಗಳಲ್ಲಿ ಈ ಸಂಸ್ಥೆಯ ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಹೆಮ್ಮೆಯ ಪ್ರತಿಭಾ ಪ್ರದರ್ಶನ ನೀಡುವಂತಹ ತರಬೇತಿ ಹಾಗೂ ಮಾರ್ಗದರ್ಶನದ ಏರ್ಪಾಡನ್ನು ಮಾಡುವಲ್ಲಿ ಯಶಸ್ಸು ಕಂಡು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ರ್ಯಾಂಕ್ ಪಡೆಯುವ ಸಾಧನೆಗಳನ್ನು ದಾಖಲು ಮಾಡಿದ್ದಾರೆ. ನಂತರದ ದಿನಗಳಲ್ಲಿ ವಿವಿಧ ಕೋರ್ಸ್ಗಳಿಗೂ ಇಲ್ಲಿ ಅವಕಾಶ ದೊರಕುವಂತಾಯಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಇಲ್ಲಿನ ವಿದ್ಯಾರ್ಥಿಗಳ ಪ್ರಯತ್ನ ಬಹುಮಂದಿಯ ಗಮನ ಸೆಳೆದಿದೆ.

ಶಿಕ್ಷಣದ ಜೊತೆಜೊತೆಯಲ್ಲೇ ಮಹಿಳಾ ಸೇವಾ ಚಟುವಟಿಕೆ,ಇತರ ಸ್ವಯಂ ಸೇವಾ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕ ಹಾಗೂ ಸೇವಾ ಚಟುವಟಿಕೆಗಳನ್ನು ಮುಂದುವರಿಸಿರುವ ಇವರಿಗೆ ೨೦೦೭ರಲ್ಲಿ “ಜಿಲ್ಲೆ ಸಮಾಚಾರ” ಪ್ರತಿಕಾ ಬಳಗದ ‘ವರ್ಷದ ವ್ಯಕ್ತಿ’ ಪ್ರಶಸ್ತಿಯು ಪ್ರಪ್ರಥಮವಾಗಿ ದೊರೆಯಿತು. ನಗರಸಭೆ, ವಿವಿಧ ಸಂಸ್ಥೆಗಳಿಂದಲೂ ಸನ್ಮಾನಗಳನ್ನು ಹೌದು.ಪತಿ ರಾಘವೇಂದ್ರ ರಾವ್,ಪುತ್ರಿ ವಿ.ಜ್ಯೋತಿ,ಪುತ್ರಿ ಕಿರಣ್ ಹಾಗೂ ಸೊಸೆ  ಲೇಖಾ ಕಿರಣ್ ಮತ್ತು ಮೊಮ್ಮಕ್ಕಳ ಸಂತೃಪ್ತ ಬದುಕಿನೊಂದಿಗೆ ಶಿಕ್ಷಣದಲ್ಲೇ ಇನ್ನಷ್ಟು ಉನ್ನತ ಅವಕಾಶಗಳಿಗೆ ದಾವಣಗೆರೆ ಕೇಂದ್ರವಾಗಬೇಕೆಂಬ ಮಹಾದಾಸೆಯನ್ನು ಇವರು ಹೊಂದಿರುವುಂಟು. ಪಿ.ಯು.ಸಿ. ಹಂತದ  ಶಿಕ್ಷಣದೊಂದಿಗೆ ಡಿಗ್ರಿಯ ಅವಕಾಶ ಇನ್ನಷ್ಟು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳಿಗೆ ಲಭ್ಯವಾಗಬೇಕೆಂಬ ಸದಾಶಯದೊಂದಿಗೆ ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಚೇತನಾ ವಿದ್ಯಾಸಂಸ್ಥೆಯ ಬಿಳಲುಗಳು ಹರಡುಲು
ಕಾರಣಕರ್ತರಾಗಿದ್ದಾರೆ.

ಇನ್ನೂ ಅರವತ್ತರ ಗಡಿಗೂ ದೂರವಿರುವ ಈ ವಿಜಯೋತ್ಸಾಯಿ ಮಹಿಳೆಯಿಂದ ವಿಜಯೋಲ್ಲಂಘನದ ಮಹತ್ಕಾರ್ಯಗಳು ದಾಖಲಾಗಲಿ ಎಂಬುದು ಅವರ ಸಮೀಪವರ್ತಿಗಳ ಸದಾಶಯವಾಗಿದೆ. ದಟೀಸ್

ವಿಜಯಲಕ್ಷ್ಮಿ ವೀರಮಾಚನೇನಿ!

Be the first to comment on "ವಿಜಯೋಲ್ಲಂಘನಕ್ಕೆ ಮತ್ತೊಂದು ಹೆಸರೇ ವಿಜಯಲಕ್ಷ್ಮಿ"

Leave a comment

Your email address will not be published.


*