ಸಕ್ಕರೆ ಕಾಯಿಲೆಯನ್ನು ಪರೀಕ್ಷೆಯ ಮೂಲಕ ತಿಳಿಯುವುದು ಹೇಗೆ?

Share

ಮಧುಮೇಹವನ್ನು ಗುರ್ತಿಸಲು ಮುಖ್ಯವಾಗಿ ಮೂರು ರೀತಿಯ ರಕ್ತಪರೀಕ್ಷೆಗಳನ್ನು ಮಾಡುತ್ತಾರೆ. ಅವುಗಳ ವಿವರ ಹೀಗಿದೆ.

ಫಾಸ್ಟಿಂಗ್ ಶುಗರ್ ಟೆಸ್ಟ್: ಕನಿಷ್ಠ ಎಂಟು ಗಂಟೆಗಳು ಏನನ್ನೂ ತಿನ್ನದಂತೆ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯಲ್ಲಿ ರಕ್ತದಲ್ಲಿ ಸಕ್ಕರೆ ೭೦-೧೦೦ರ ಹಂತದಲ್ಲಿದ್ದರೆ ಸಾಧಾರಣ ಪರಿಸ್ಥಿತಿ ಇದೆ ಎಂದರ್ಥ. ಫಾಸ್ಟಿಲ್ ರಕ್ತದಲ್ಲಿ ಸಕ್ಕರೆ ೧೦೦-೨೨೬ ರೊಳಗೆ ಊಟದ ನಂತರ ೧೪೦-೧೮೦ರ ಒಳಗೆ ಇದ್ದರೆ ಅದು ಮಧುಮೇಹ ಬರುವ ಮೊದಲ ಹಂತ (ಪ್ರೀಡಯಬಿಟಿಕ್ ಸ್ಟೇಜ್) ಎನ್ನುತ್ತಾರೆ.

ಪೋಸ್‌ಫುಡ್ ಶುಗರ್ ಟೆಸ್ಟ್

ಆಹಾರವನ್ನು ತೆಗೆದುಕೊಂಡ ಒಂದೂವರೆ ಗಂಟೆಯ ನಂತರ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಯಲ್ಲಿ ರಕ್ತದಲ್ಲಿನ ಸಕ್ಕರೆ ೧೪೦ ನ್ನು ದಾಟಬಾರದು.

ರ್‍ಯಾಂಡಮ್ ಶುಗರ್ ಟೆಸ್ಟ್:

ತಿಂದರೂ, ತಿನ್ನದಿದ್ದರೂ ಯಾವುದಾದರೂ ಒಂದು ವೇಳೆ ಈ ಪರೀಕ್ಷೆ ಮಾಡಿಸುತ್ತಾರೆ. ಇವಿಷ್ಟೇ ಅಲ್ಲದೆ ಬ್ಲಡ್ ಶುಗರ್ ಪರಿಸ್ಥಿತಿ ತೀವ್ರವಾಗಿ ಇರುವವರಿಗೆ ಗ್ಲೂಕೋಸ್ ಟಾಲರೆನ್ಸ್ ಟೆಸ್ಟ್ (ಜಿಟಿಟಿ) ಕೂಡ ಮಾಡಿಸುತ್ತಾರೆ. ಎಚ್‌ಬಿಎ೧ಸಿ ಎಂಬ ಪರೀಕ್ಷೆಯ ಮೂಲಕ ಸಕ್ಕರೆಯ ಹಂತವನ್ನು ಇನ್ನಷ್ಟು ಖಚಿತವಾಗಿ ತಿಳಿದುಕೊಳ್ಳಬಹುದು.

*ಈಗ ಮನೆಯಲ್ಲೇ ರಕ್ತ ಪರೀಕ್ಷೆಗಳನ್ನು ಕೈಯಲ್ಲೇ ಸಾಗಿಸಬಹುದಾದ ಕಿಟ್ ಕೂಡ ಲಭ್ಯವಾಗುತ್ತದೆ.

ಕಡಿಮೆ ಖರ್ಚು: ಕೇವಲ ಲಕ್ಷಣಗಳ ಆಧಾರದಿಂದ ಮಧುಮೇಹವನ್ನು ಗುರ್ತಿಸಲಾಗದು. ಆದ್ದರಿಂದ ಸಮೀಪದ ಲ್ಯಾಬ್‌ನಲ್ಲಾಗಲಿ, ಆಸ್ಪತ್ರೆಗಳಲ್ಲಾಗಲಿ ಕನಿಷ್ಠ ಆರು ತಿಂಗಳಿಗೊಮ್ಮೆಯಾದರು ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು.

ಜೀವನಶೈಲಿಯಲ್ಲೂ ಬದಲಾಗಬೇಕು

ಡಯಬಿಟಿಸ್ ಇರುವುದು ಪರೀಕ್ಷೆಯಲ್ಲಿ ದೃಢವಾದರೆ ತಕ್ಷಣವೇ ಜೀವನಶೈಲಿಯಲ್ಲಿ ಬದಲಾವಣೆಯನ್ನು ಅನುಸರಿಸಬೇಕು. ಒತ್ತಡದಿಂದ ದೂರವಿರಲು ಯೋಗ, ಧ್ಯಾನಗಳು ಕೂಡ ಸಕ್ಕರೆ ಕಾಯಿಲೆಯನ್ನು ಹತೋಟಿಯಲ್ಲಿಡುತ್ತವೆ.

*ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ಸಾಮಾನ್ಯ ಸ್ಥಿತಿಯಲ್ಲಿರಿಸಲು ವೈದ್ಯರ ಸಲಹೆ ಮೇರೆಗೆ ತಪ್ಪದೇ ಔಷಧಿಯನ್ನು ಉಪಯೋಗಿಸಬೇಕು.

*ಹೆಚ್ಚುವರಿಯಾಗಿ ತೂಕವಿದ್ದರೆ ಹತೋಟಿಗೆ ತಂದುಕೊಳ್ಳಬೇಕು. ಪ್ರಶಾಂತವಾಗಿ ಕಣ್ತುಂಬಾ ನಿದ್ರಿಸಬೇಕು.

*ಅಪರೂಪದ ಪರಿಸ್ಥಿತಿಯಲ್ಲಿ ವಿನಃ ಸಾಮಾನ್ಯವಾಗಿ ಬರುವ ಮಧುಮೇಹವನ್ನು ಗುಣಪಡಿಸಲು ಸಾಧ್ಯವಾಗುದಿಲ್ಲ. ಡಯಬಿಟಿಸ್ ಬಂದಾಗ ಆರೋಗ್ಯಕರವಾದ ಹವ್ಯಾಸಗಳಿಂದ ಇದನ್ನು ನಿಯಂತ್ರಿಸಿಕೊಳ್ಳುವುದನ್ನು ಬಿಟ್ಟರೆ ಬೇರೆ ಮಾರ್ಗವಿಲ್ಲ.

 

Be the first to comment on "ಸಕ್ಕರೆ ಕಾಯಿಲೆಯನ್ನು ಪರೀಕ್ಷೆಯ ಮೂಲಕ ತಿಳಿಯುವುದು ಹೇಗೆ?"

Leave a comment

Your email address will not be published.


*