ಹರಪನಹಳ್ಳಿಯಲ್ಲಿ ಎಐಟಿಯುಸಿಯಿಂದ ಪ್ರತಿಭಟನೆ

Share

ಹರಪನಹಳ್ಳಿ-ಮಾತೃಪೂರ್ಣ ಯೋಜನೆಗೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಒದಗಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಷನ್ ವತಿಯಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ  ಫೆಡರೇಷನ್ ಖಜಾಂಚಿ ಎಂ. ಸುಮಾ ರಾಜ್ಯ ಸರ್ಕಾರದ ಮಹತ್ವಪೂರ್ಣ ಮಾತೃಪೂರ್ಣ ಯೋಜನೆಗೆ ವಿವಿಧ ಸಂಘಟನೆಗಳ ವಿರೋಧದಲ್ಲೂ  ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲೂ ತೆರೆದಿದ್ದು ಸ್ವಾಗತಾರ್ಹವಾಗಿದೆ. ಆದರೆ ಮೂಲಭೂತ ಸೌಲಭ್ಯಗಳು ಸಮರ್ಪಕವಾಗಿ ಒದಗಿಸುತ್ತಿಲ್ಲ ಸರ್ಕಾರ ಜಂಟಿ ಖಾತೆ ತೆರೆಯಲು ಮುಂದಾಗಿರುವುದನ್ನು ನಾವು ವಿರೋಧಿಸುತ್ತೇವೆ. ಮಾತೃಪೂರ್ಣ ಯೋಜನೆಗೆ ಫಲಾನುಭವಿಗಳ ಸಂಖ್ಯೆ ಹೆಚ್ಚಳವಾಗಿದ್ದು ಅವಶ್ಯಕತೆಗೆ ತಕ್ಕಂತೆ  ಗ್ಯಾಸ್, ಕುಕ್ಕರ್, ದೊಡ್ಡಪ್ರಮಾಣದ ಸ್ಟವ್, ಇತರೆ ವಸ್ತುಗಳನ್ನು ಒದಗಿಸದೇ ಇರುವುದು ತುಂಬಾ ತೊಂದರೆಯಾಗಿದೆ. ಸಹಾಯಕಿಯರಿಗೆ ೫೦೦ ಮಾಸಿಕ ಸಂಬಳ ನಿಗದಿ ಮಾಡಿದೆ. ಆದರೆ ಅಷ್ಟು ಕಡಿಮೆ ಹಣಕ್ಕೆ ಸಹಾಯಕಿಯರು ಕಾರ್ಯ ನಿರ್ವಹಿಸುವುದು ದುಸ್ತರವಾಗಿದೆ. ಇಂತಹ ಸಣ್ಣ ಪುಟ್ಟ ಸೌಲಭ್ಯಗಳೂ ಇಲ್ಲದೇ ಮಾತೃಪೂರ್ಣ ಯೋಜನೆ ನಿರ್ವಹಣೆ ಅಂಗನವಾಡಿ ಕಾರ್ಯಕರ್ತೆಯರಿಗೆ ನಿಭಾಯಿಸುವುದು ಕಷ್ಟಕರವಾಗಿದೆ ಎಂದರು.

ಕಾರ್ಯದರ್ಶಿ ಪಿ.ಜಯಲಕ್ಷ್ಮಿ ಮಾತನಾಡಿ  ಬಹುತೇಕ ಸ್ವಂತ ಕಟ್ಟಡಗಳಿಲ್ಲದೇ ಇರುವ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕೂಡ ಒದಗಿಸುತ್ತಿಲ್ಲ. ಮೂಲಭೂತ ಸೌಲಭ್ಯಗಳ ಕುರಿತು ಸಾಕಷ್ಟು ಬಾರಿ ಮನವಿ ದೂರು ಸಲ್ಲಿಸಿದರು ಪ್ರಯೋಜನವಾಗಿಲ್ಲ. ಮಾತೃಪೂರ್ಣ ಯೋಜನೆ ಸಫಲವಾಗಬೇಕಾದರೆ ಮೂಲಭೂತ ಸೌಕರ್ಯಗಳಾದ ಸುಸಜ್ಜಿತ ಕಟ್ಟಡ, ಶುದ್ದಕುಡಿವ ನೀರು, ಉಗ್ರಾಣ, ಅಡಿಗೆ ಮನೆ, ಮೊಟ್ಟೆ ಮತ್ತು ತರಕಾರಿಗಳು, ಸಹಾಯಕಿಯರ ವ್ಯವಸ್ಥೆ ಮುಂಗಡವಾಗಿ ಕಲ್ಪಿಸದಿದ್ದರೆ ಸಾಧವಿಲ್ಲ ಎಂದರು.

 ಇದೇ ಸಂದರ್ಭದಲ್ಲಿ ಭಾರತಿ, ವೀರಮ್ಮ, ತ್ರಿವೇಣಿ, ಬಸಮ್ಮ, ಗೌರಮ್ಮ, ಯಶೋಧ, ಪ್ರಭಾ, ದೇವಿಕಾ, ಮಂಜುಳಾ, ಅನುಸೂಯ ಸೇರಿದಂತೆ ಅನೇಕ ಕಾರ್ಯಕರ್ತೆಯರು ಭಾಗವಹಿಸಿದ್ದರು.

Be the first to comment on "ಹರಪನಹಳ್ಳಿಯಲ್ಲಿ ಎಐಟಿಯುಸಿಯಿಂದ ಪ್ರತಿಭಟನೆ"

Leave a comment

Your email address will not be published.


*