ಹಲ್ಲುಜ್ಜುವುದಕ್ಕೂ ಉಂಟು ವಿಧಾನ

Share

ಹಲ್ಲನ್ನು ಸಾಮಾನ್ಯವಾಗಿ ಕಾಡುವುದು ವಸಡು ರೋಗ. ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವ ಮೂಲಕ, ಊಟಗಳ ನಡುವೆ ಏನನ್ನೂ ತಿನ್ನದೇ ಇರುವ ಮೂಲಕ, ಹಸಿ ತರಕಾರಿಗಳನ್ನೂ, ಹಣ್ಣನ್ನೋ, ಚೀಸನ್ನೋ ತಿನ್ನುವ ಮೂಲಕ ಹಲ್ಲನ್ನು ಕಾಡುವ ಬ್ಯಾಕ್ಟೀರಿಯಾಗಳನ್ನೂ ಹತೋಟಿಯಲ್ಲಿ ಇರಿಸಬಹುದು. ದಿನವೂ ಕ್ರಮಬದ್ದವಾಗಿ ಹಲ್ಲುಜ್ಜುವುದು ಎಲ್ಲಕ್ಕಿಂತ ಮುಖ್ಯ. ಇಲ್ಲಿ ಗಮನಿಸಬೇಕಾದ ಶಬ್ದ-ಕ್ರಮಬದ್ದ. ಎಲ್ಲರೂ ದಿನಕ್ಕೆರಡು ಬಾರಿ ಹಲ್ಲುಜ್ಜುತ್ತಾರೆ ನಿಜ. ಆದರೆ ಕ್ರಮಬದ್ದವಾಗಿ ಹಲ್ಲುಜ್ಜುವುದಕ್ಕೂ ತರಬೇತಿ ಬೇಕು. ಹಲ್ಲುಜ್ಜುವುದು ಹಲ್ಲು ಫಳಫಳ ಹೊಳೆಯುವುದಕ್ಕೆ ಅಲ್ಲ. ಹಲ್ಲುಗಳ ನಡುವೆ ಇರುವ ಆಹಾರದ ಕೊಳೆತ ಚೂರುಗಳುನ್ನು ಹೋಗಲಾಡಿಸಲು.

ದಿನಕ್ಕೆ ಎರಡು ಸಲ ಹಲ್ಲುಜ್ಜಿ ಅನ್ನುತ್ತಾರೆ ದಂತವೈದ್ಯರು. ಪ್ರತಿಸಲ ಊಟ ಮಾಡಿದ ನಂತರವೂ ಹಲ್ಲುಜ್ಜಿ ಅನ್ನತ್ತೇವೆ ಜಾಹೀರಾತುಗಳು, ದಿನಕ್ಕೆ ಒಂದೇ ಸಲ ಹಲ್ಲುಜ್ಜಿದರೆ ಸಾಕು ಅನ್ನುತ್ತದೆ ಆಯುರ್ವೇದ.

ಹಲ್ಲಿನ ಆರೋಗ್ಯದ ಬಗ್ಗೆ ಖಚಿತವಾಗಿ ಹೀಗೇ ಅಂತ ಹೇಳುವುದು ಕಷ್ಟ ಅನ್ನುವುದನ್ನು ಆಧುನಿಕ ದಂತವೈದ್ಯ ಶಾಸ್ತ್ರ ಕೂಡ ಒಪ್ಪಿಕೊಂಡಿದೆ.

ಹೀಗಾಗಿಯೇ ಇಡೀ ದೇಹಕೊಬ್ಬ ವೈದ್ಯನಾದರೆ, ಹಲ್ಲಿಗೊಬ್ಬ ಪ್ರತ್ಯೇಕ ವೈದ್ಯ. ಒಂದು ಪ್ರತ್ಯೇಕ ವೈದ್ಯಶಾಸ್ತ್ರ.

ಹಲ್ಲಿನ ರೋಗಕ್ಕೆ ಮೋರೇ ಸೂತ್ರ

೧.ದಿನಾ ಹಲ್ಲುಜ್ಜಿ

೨.ದಿನವೂ ಪ್ಲಾಸ್ ಮಾಡಿ

೩.ಆರು ತಿಂಗಳಿಗೊಮ್ಮೆ ದಂತವೈದ್ಯರನ್ನು ನೋಡಿ.

ಹಲ್ಲುಜ್ಜದೇ ಹೋದರೆ ಏನಾಗುತ್ತದೆ?

ಹಲ್ಲನ್ನು ಕಾಡುವ ಸಾಮಾನ್ಯ ಕಾಯಿಲೆಗಳು ಯಾವುವು? ಹಲ್ಲಿನ ಬಗ್ಗೆ ಅಷ್ಟೇಕೆ ಎಚ್ಚರಿಕೆಯಿಂದ ಇರಬೇಕು. ಒಂದೆರಡು ಹಲ್ಲು ಬಿದ್ದು ಹೋದರೆ ಏನಂತೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡು ಹಲ್ಲಿನ ಸಮಸ್ಯೆ ಇರುವವರು ದಂತವೈದ್ಯರನ್ನು ಭೇಟಿಯಾಗುವುದುಂಟು. ಹಲ್ಲಿಗೆ ರೂಟ್‌ಕೆನಾಲ್ ಟ್ರೀಟ್‌ಮೆಂಟ್ ಮಾಡಲು ತುಂಬಾ ಖರ್ಚಾಗುತ್ತದೆ ಅನ್ನುವ ಕಾರಣಕ್ಕೇ ಹಲ್ಲು ಕೀಳಿ ಅನ್ನುವವರಿದ್ದಾರೆ. ದಂತವೈದ್ಯ ನಾಗೇಶ್ ಅವರ ಅಭಿಪ್ರಾಯದಂತೆ ಇತ್ತೀಚೆಗೆ ಹಲ್ಲಿನ ಆರೋಗ್ಯದ ಬಗ್ಗೆ ಎಚ್ಚರ ವಹಿಸುವವರು ಸಂಖ್ಯೆ ಹೆಚ್ಚಾಗಿದೆ. ಐದಾರು ವರುಷಗಳ ಹಿಂದೆ ಹಲ್ಲು ಕಿತ್ತು ಬಿಡಿ ಅನ್ನುವವರ ಸಂಖ್ಯೆಯೇ ಹೆಚ್ಚಾಗಿತ್ತು.

ಹಲ್ಲನ್ನು ಕಾಡುವ ಸಾಮಾನ್ಯ ಸಮಸ್ಯೆಯೆಂದರೆ ದಂತಕ್ಷಯ. ನಾವು ಇನ್ನುವ ಬಹುತೇಕ ಆಹಾರಗಳನ್ನು ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಆಮ್ಲವನ್ನು ಪರಿವರ್ತಿಸುತ್ತೆವೆ. ಕೇವಲ ಸಿಹಿತಿಂಡಿ, ಚಾಕಲೇಟುಗಳಷ್ಟೇ ಅಲ್ಲ, ಬ್ರೆಡ್, ಕಡಲೆಕಾಯಿ, ಧಾನ್ಯಗಳಿಂದಲೂ ದಂತಕ್ಷಯ ಉಂಟಾಗುತ್ತದೆ. ಇದು ಕ್ರಮೇಣ ಹಲ್ಲಿನ ಮೇಲೆ ದುಷ್ಪರಿಣಾಮ ಬೀರುತ್ತದೆ.

ದಂತಕ್ಷಯದಿಂದಾಗುವ ದೊಡ್ಡ ಹಾನಿಯೆಂದರೆ ಅದು ವಸಡುಗಳ ಮೇಲೆ ಕ್ರಮೇಣ ಪರಿಣಾಮ ಮಾಡುತ್ತದೆ. ವಸಡುಗಳು ಕ್ಷಯಿಸುತ್ತಾ ಬಂದು, ಮೃದುವಾಗುತ್ತಾ, ರಕ್ತ ಒಸರಲು ಆರಂಭವಾಗುತ್ತದೆ. ನಿಧಾನವಾಗಿ ಹಲ್ಲು ಒಸಡುಗಳಿಂದ ಬೇರ್ಪಡುತ್ತಾ ಹೋಗುತ್ತದೆ. ಕುಳಿಗಳು ಉಂಟಾಗಿ ಕ್ರಮೇಣ ಮತ್ತಷ್ಟು ಬ್ಯಾಕ್ಟೀರಿಯಾ ತುಂಬುತ್ತಾ ಹೋಗುತ್ತದೆ. ನಿಧಾನವಾಗಿ ವಸಡುಗಳಿಂದ ಇದು ಹಲ್ಲಿಗೂ ಹಬ್ಬುತ್ತದೆ. ಹಲ್ಲು ಕ್ಷಯಿಸುತ್ತಾ ಒಂದು ದಿನ ಬಿದ್ದು ಹೋಗುತ್ತದೆ. ಇಲ್ಲದೇ ಹೋದರೆ ನೋವು ಕೊಡಲು ಆರಂಭಿಸುತ್ತದೆ.

ಹಲ್ಲನ್ನು ಸಾಮಾನ್ಯವಾಗಿ ಕಾಡುವುದು ವಸಡು ರೋಗ. ಪದೇ ಪದೇ ತಿನ್ನವುದನ್ನು ಕಡಿಮೆ ಮಾಡು ಮೂಲಕ, ಊಟಗಳ ನಡುವೆ ಏನನ್ನೂ ತಿನ್ನದೇ ಇರುವ ಮೂಲಕ, ಹಸಿ ತರಕಾರಿಗಳನ್ನೋ ಹಣ್ಣನ್ನೋ, ಚೀಸನ್ನೋ ತಿನ್ನುವ ಮೂಲಕ ಹಲ್ಲನ್ನು ಕಾಡುವ ಬ್ಯಾಕ್ಟಿರಿಯಾಗಳನ್ನು ಹತೋಟಿಯಲ್ಲಿ ಇರಿಸಬಹುದು.

ದಿನವೂ ಕ್ರಮಬದ್ದವಾಗಿ ಹಲ್ಲುಜ್ಜುವುದು ಎಲ್ಲಕ್ಕಿಂತ ಮುಖ್ಯ. ಇಲ್ಲಿ ಗಮನಿಸಬೇಕಾದ ಶಬ್ದ-ಕ್ಮಬದ್ದ. ಎಲ್ಲರೂ ದಿಮಕ್ಕೆರಡು ಬಾರಿ ಹಲ್ಲುಜ್ಜುತ್ತಾರೆ ನಿಜ. ಆದರೆ ಕ್ರಮಬದ್ದವಾಗಿ ಹಲ್ಲುಜ್ಜುವುದಕ್ಕು ತರಬೇತಿ ಬೇಕು. ಹಲ್ಲುಜ್ಜವುದು ಹಲ್ಲು ಫಳಫಳ ಹೊಳೆಯುವುದಕ್ಕಾಗಿ ಅಲ್ಲ. ಹಲ್ಲುಗಳ ನಡುವೆ ಇರುವ ಆಹಾರದ ಕೊಳೆತ ಚೂರುಗಳನ್ನು ಹೋಗಲಾಡಿಸುವುದಕ್ಕೆ.

ದಂತ ಕತೆ

ಹಲ್ಲು ನೋವು ಬಂದಾಗ ನೀವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಇವು:

*ಕೇವಲ ಒಂದೇ ಹಲ್ಲು ನೋಯುತ್ತಿದೆಯಾ?

* ಆ ಹಲ್ಲಿನ ಸುತ್ತಮುತ್ತಲಿನ ವಸಡು ಕೆಂಪಗಾಗಿ ಊದಿಕೊಂಡಿದೆಯಾ? ಮುಖದಲ್ಲೂ ಆ ಊತ ಕಾಣಿಸುತ್ತಿದೆಯಾ?

-ಹಲ್ಲಿಗೆ ಸೋಂಕು ತಗಲಿದೆ ಎಂದೇ ಅರ್ಥ. ತಕ್ಷಣವೇ ನೋವು ನಿವಾರಕ ಮಾತ್ರೆ ಉಪಯೋಗಕ್ಕೆ ಬರುತ್ತದೆ.

*ಅಪಘಾತದಲ್ಲಿ ಏಟು ಬಿದ್ದು ಹಲ್ಲು ಉದುರಿದೆಯೇ?

– ವೈದ್ಯರನ್ನು ನೋಡುವ ತನಕ ಆ ಹಲ್ಲನ್ನು ತೇವ ಪ್ರದೇಶದಲ್ಲಿ ಇಡಿ. ಬಾಯಿಯೊಳಗೇ ಇಟ್ಟುಕೊಳ್ಳುವುದು ಎಲ್ಲಕ್ಕೂ ಒಳ್ಳೆಯದು.

*ತಣಗಿನ ಪಾನೀಯಗಳನ್ನೋ ತಿಂಡಿಯನ್ನೋ ತಿನ್ನುವಾಗ ಹಲ್ಲು ನೋಯುತ್ತದೆಯಾ?

-ದಂತಕುಳಿಯ ಪರಿಣಾಮ ಇದು. ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ. ಇದನ್ನು ತಡೆಯುವುದಕ್ಕೆ ಅವರು ಕ್ರಮ ಸೂಚಿಸುತ್ತಾರೆ.

*ವಸಡುಗಳು ಕೆಂಪಾಗಿ ಬಾಯಿ ಹುಣ್ಣಾಗಿದೆಯಾ?

-ಅದು ಪೆರಿಯೋಡಾಂಟಿಟಿಸ್ ಆಗಿರಬಹುದು. ತಕ್ಷಣವೇ ಸಂಪರ್ಕಿಸಿ.

*ಕಿವಿಯ ಸುತ್ತಮುತ್ತ ನೋವು, ತಲೆನೋವು,ತಿನ್ನುವಾಗ ಕರಕರ ಸದ್ದು ಕೇಳಿಸುತ್ತಿದೆಯಾ?

– ಒತ್ತಡದಿಂದ ಹೀಗಾಗಿರುತ್ತದೆ. ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳಿ.

ಎಂಥಾ ಬ್ರಶ್ ಸೂಕ್ತ

ಮೃದುವಾದ ಕುಚ್ಚುಗಳಿರುವ ಮಧ್ಯಮ ಗಾತ್ರದ ಬ್ರಷ್ ಅನುಕೂಲಕರ. ಅದು ಬಾಯಿಯ ಎಲ್ಲಾಭಾಗವನ್ನು ಸುಲಭವಾಗಿ ತಲುಪುವಂತಿರಬೇಕು. ಇತ್ತೀಚೆಗೆ ಬಂದಿರುವ ಬ್ಯಾಟರಿ ಚಾಲಿತ ಟೂತ್‌ಬ್ರಷ್ ಶೋಕಿಗೇ ಹೊರತು ಆರೋಗ್ಯಕ್ಕಲ್ಲ.

ಟೂತ್‌ಪೇಸ್ಟಿನಲ್ಲಿ ಫ್ಲೋರೆಡ್ ಅಂಶ ಇದ್ದಷ್ಟೂ ಒಳ್ಳೆಯದು. ಅದು ದಂತಕ್ಷಯವನ್ನು ತಡೆಯುತ್ತದೆ.

ಹಲ್ಲುಜ್ಜುವುದರ ಜೋತೆಗೆ ದಿನಕ್ಕೊಂದು ಬಾರಿ ದಾರದಿಂದ ಹಲ್ಲುಗಳ ನಡುವಿನ ಭಾಗವನ್ನು ಕ್ಲೀನ್ ಫ್ಲಾಸಿಂಗ್ ಅನ್ನುತ್ತಾರೆ. ಭಾರತೀಯರ ಮಟ್ಟಿಗೆ ಇದು ಚಾಲ್ತಿಯಲ್ಲಿಲ್ಲದ ಅಭ್ಯಾಸ. ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ಕಾಲದಲ್ಲಿ ಈ ಫ್ಲಾಸಿಂಗ್ ಅಗತ್ಯ ಇರಲಿಲ್ಲ. ಆದರೆ ಬ್ರಷ್‌ನಿಂದ ಹಲ್ಲುಜ್ಜುವವರಿಗೆ ಇದು ಅತ್ಯಗತ್ಯ.

ಹಲ್ಲುಜ್ಜುವಾಗ ಬ್ರಷ್ ನ್ನು ವಸಡಿಗೆ ೪೫ ಡಿಗ್ರಿ ಕೋನದಲ್ಲಿ ಹಿಡಿದುಕೊಳ್ಳುವುದು ಸರಿಯಾದ ಕ್ರಮ. ನಿಧಾನವಾಗಿ ಸಣ್ಣ ಸಣ್ಣ ಸ್ಟ್ರೋಕ್‌ಗಳಲ್ಲಿ ಹಲ್ಲುಜ್ಜಬೇಕು. ಹಲ್ಲಿನ ಹೊರಭಾಗ, ಒಳಭಾಗ, ಮೇಲ್ಭಾಗವನ್ನು ಸರಿಯಾಗಿ ಬ್ರಷ್ ತಿಕ್ಕಬೇಕು. ಮುಂದುಗಡೆ ಹಲ್ಲಿನ ಹಿಂಭಾಗವನ್ನು ಬ್ರಷ್ ಹಿಂಭಾಗದಿಂದ ಸ್ಚಚ್ಚಗೊಳಿಸುವುದು ಒಳ್ಳೆಯದು. ನಾಲಗೆಯನ್ನೂ ಬ್ರಷ್ ಮಾಡುವುದರಿಂದ ದುರ್ವಾಸನೆ ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತದೆ.

Be the first to comment on "ಹಲ್ಲುಜ್ಜುವುದಕ್ಕೂ ಉಂಟು ವಿಧಾನ"

Leave a comment

Your email address will not be published.


*