೧೦ನೇ ವಾರ್ಡ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ

Share

ದಾವಣಗೆರೆ : ಬರುವ ದಿನಗಳಲ್ಲಿ ೧೦ನೇ ವಾರ್ಡ್ ಸೇರಿದಂತೆ ಅವಶ್ಯಕತೆ ಇರುವ ಕಡೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಎಂದು ಮಾಜಿ ಸಚಿವರೂ, ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪ ಅವರು ತಿಳಿಸಿದರು.

ಬುಧವಾರ ನಗರದ ೧೦ನೇ ವಾರ್ಡ್‌ನ ಜಾಲಿನಗರದಲ್ಲಿ ವಿವಿಧ ಅಭಿವೃದ್ಧಿ  ಕಾಮಗಾರಿಗಳಿಗೆ ಭೂಮಿ ಪೂಜೆ ನೇರವೇರಿಸಿ ನೀರಿನ ಟ್ಯಾಂಕ್ ಸಾರ್ವಜನಿಕರಿಗೆ ಸಮರ್ಪಿಸಿದ ನಂತರ ಅವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು.

ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ೧೭ಕಡೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದ್ದು, ಇನ್ನು ಅವಶ್ಯಕತೆ ಇರುವ ಕಡೆಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳನ್ನು ಸ್ಥಾಪಿಸಲಾಗುವುದು ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಲಕ್ಷ್ಮೀದೇವಿ ಬಿ.ವೀರಣ್ಣನವರ  ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾಪೌರರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್, ಸದಸ್ಯ ಎಂ.ಹಾಲೇಶ್, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ವಿನಾಯಕ ಪೈಲ್ವಾನ್, ಮುಖಂಡರುಗಳಾದ ಬಿ.ವೀರಣ್ಣ, ೧೦ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಂಜುನಾಥ್(ಡಿಶ್) ಬಸ್ ಉಮೇಶ್, ಬಂಡಿ ನಾಗರಾಜ್, ಬೆಲ್ಲದ್ ಶಂಕರ್, ರಮೇಶ್, ಮಂಜುನಾಥ್ ಸೊಸೈಟಿ, ಮಹೇಶ್, ಕುಮಾರ್, ಹಬೀಬ್, ಮಂಜುಳಾ, ಸುನೀತಾ ಎನ್.,ರಿಯಾಜ್, ಮುಷರಫ್, ವೃಷಬೇಂದ್ರಪ್ಪ, ಶೇಖರಪ್ಪ, ರಾಮನಗೌಡ್ರು, ನಾಗರಾಜ್, ವಿಶ್ವನಾಥ್, ಸೈಯದ್ ಹುಸೇನ್, ಗೌಸ್, ಸತೀಶ್, ದಾದು ಮತ್ತಿತರರಿದ್ದರು.

Be the first to comment on "೧೦ನೇ ವಾರ್ಡ್ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ"

Leave a comment

Your email address will not be published.


*