ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರಿಗೆ ರೈತರಿಂದ ಅಭಿನಂದನೆ

Share
  • 13
    Shares

ದಾವಣಗೆರೆ: ತುಂಗಭದ್ರಾ ನದಿಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆಭಾಗದ ನದಿಗಳೀಗೆ ನೀರು ತುಂಬಿಸುವ ಬಗ್ಗೆ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆಗೆ ಕಾರಣಕರ್ತರಾದ ದಾವಣಗೆರೆ ಜಿಲ್ಲಾ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಆ ಭಾಗದ ರೈತರು ಇಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗೀರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಕರಿಬಸಪ್ಪ, ಮಾಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಕೆ.ಪರಶುರಾಮ್, ದಾವಣಗೆರೆ ವಿ.ವಿ.ಸಿಂಡಿಕೇಟ್ ಸದಸ್ಯ ಡಾ||ನಾಗಭೂಷಣ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೇಕಾ ಮುರುಳಿಕೃಷ್ಣ, ಕಲಪನಹಳ್ಳಿ ಶೇಖರಪ್ಪ, ಪಿ.ಟಿ.ಭರತ್, ಹಿರೇಮೇಗಳಗೆರೆಯ ದೊಡ್ಡೇರಿ ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಅಂಜಿಬಾಬು, ಕಾಡಜ್ಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಣ್ಣ, ಮುರುಳಿಧರ್, ಎಪಿಎಂಸಿ ಮಾಜಿ ಅಧ್ಯಕ್ಷರುಗಳಾದ ರಾಘವೇಂದ್ರ ನಾಯ್ಕ, ಬಿ.ಪ್ರಭು, ಬೇತೂರು ಬಸವರಾಜಪ್ಪ, ಬೂದಾಳ್ ಬಾಬು, ಬಸಾಪುರದ ಸುರೇಂದ್ರಪ್ಪ, ಕೊಟ್ರಯ್ಯ, ಓಬಜ್ಜಿಹಳ್ಳಿ ಭೀಮಾನಾಯ್ಕ, ತಿರುಪತಿ, ಅರಸಾಪುರ ರವಿಕುಮಾರ್, ಸತ್ತಿಬಾಬು, ಕಾಡಜ್ಜಿ ಬಸವರಾಜಪ್ಪ, ಕಲಪನಹಳ್ಳಿ ಸೋಮಣ್ಣ ಸೇರಿದಂತೆ ಸಾವಿರಾರು ರೈತರು ಭಾಗವಹಿಸಿದ್ದರು.

Be the first to comment on "ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್‌ರಿಗೆ ರೈತರಿಂದ ಅಭಿನಂದನೆ"

Leave a comment

Your email address will not be published.


*