ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಣೆ

Share

ಹರಿಹರ: ಕರ್ನಾಟಕ ಹ್ಯೂಮನ್ ರೈಟ್ಸ್ ಪ್ಯಾನಲ್ ಸ್ಥಳೀಯ ಘಟಕದಿಂದ ನಗರ ಠಾಣೆ ಪೊಲೀಸ್ ಸಿಬ್ಬಂದಿಗೆ ಶನಿವಾರ ಧೂಳಿನಿಂದ ರಕ್ಷಿಸುವ ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್‌ಗಳನ್ನು ವಿತರಿಸಲಾಯಿತು.
ನಂತರ ಸಂಸ್ಥೆಯ ಜಿಲ್ಲಾಧ್ಯಕ್ಷ ನಾಗರಾಜ್ ಭಂಡಾರಿ ಮಾತನಾಡಿ, ನಗರದಲ್ಲಿ ಹಳೆ ಪಿ.ಬಿ.ರಸ್ತೆ ಹಾಗೂ ಇತರೆಡೆ ಯುಜಿಡಿ ಕಾಮಗಾರಿ ನಡೆಯುತ್ತಿವೆ. ಇದರಿಂದ ವಾಹನಗಳ ಸಂಚಾರದಿಂದ ದಟ್ಟವಾದ ಧೂಳು ಏಳುತ್ತಿದೆ.
ಇಂತಹ ಧೂಳು ಬಿಸಿಲಿನಲ್ಲಿ ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸ್ ಸಿಬ್ಬಂದಿ ಆರೋಗ್ಯ ಹದಗೆಡುತ್ತಿದೆ. ಇದನ್ನು ಮನಗಂಡು ಸಂಸ್ಥೆಯಿಂದ ಧೂಳಿನಿಂದ ರಕ್ಷಿಸಿಕೊಳ್ಳಲು ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಿಸಲಾಗುತ್ತಿದೆ. ಇದನ್ನು ಸಿಬ್ಬಂದಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಪಿಎಸ್‌ಐ ಶ್ರೀಧರ್ ಕೆ., ಮಾತನಾಡಿ, ಸಂಚಾರ ನಿಯಂತ್ರಣ ಮಾಡುವ ಸಿಬ್ಬಂದಿಗೆ ಈ ಮಾಸ್ಕ್‌ಗಳು ಅತ್ಯಂತ ಉಪಯೋU ಕಾರಿಯಾಗಿವೆ. ಈ ಸೌಲಭ್ಯವನ್ನು ನೀಡಿದ ಈ ಸಂಸ್ಥೆಯ ಕಾರ್ಯ ಆದರ್ಶಯುತವಾದದ್ದು. ಇಲಾಖೆ ಇದಕ್ಕೆ ಋಣಿಯಾಗಿ ರುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ೨೦ ವಾಶೇಬಲ್ ಮಾಸ್ಕ್ ಹಾಗೂ ಒಂದು ಬಾಕ್ಸ್ ಯೂಸ್ ಅಂಡ್ ಥ್ರೋ ಮಾಸ್ಕ್‌ಗಳನ್ನು ಈ ವಿತರಿಸಲಾಯಿತು.
ತಾಲೂಕು ಅಧ್ಯಕ್ಷ ಪ್ರವೀಣ್ ಕುಮಾರ್ ಜಿವಿ., ಯುವ ಘಟಕದ ಅಧ್ಯಕ್ಷ ಸಮೀರ್ ಅಹ್ಮದ್ ಕಚವಿ, ಕಾರ್ಯದರ್ಶಿ ಮಕ್ಸೂದ್ ಬೇಗ್, ಅರ್ಬಾಜ್, ಖಜಾಂಚಿ ಮೆಹಫೂ ಸ್‌ಉಲ್ಲಾ, ಜಿಲ್ಲಾ ನಿರ್ದೇಶಕರಾದ ಪ್ರತಾಪ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಗಡದ್, ಪದಾಧಿಕಾರಿಗಳಾದ ವಿದ್ಯಾರಾಣಿ ಗಡದ್, ಶಿವಾ ನಂದಪ್ಪ, ಜಾನ್ ಫರ್ನಾಂಡಿಸ್, ರಹಮಾನ್ ಪಟೇಲ್, ಜಿಶಾನ್, ಇಮ್ರಾನ್ ಹಾಗೂ ಪೊಲೀಸ್ ಸಿಬ್ಬಂದಿ ಇತರರಿದ್ದರು.

Be the first to comment on "ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ವಿತರಣೆ"

Leave a comment

Your email address will not be published.


*