ರಾಜ್ಯ ಕಾಂಗ್ರೆಸ್ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸಿ : ರವಿ

Share

ದಾವಣಗೆರೆ-ದೇಶಕ್ಕೆ ಮಾದರಿಯಾಗುವ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆಂದು ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಚುನಾವಣಾ ವೀಕ್ಷಕರಾದ ಎಸ್ ರವಿ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ನಡೆದ ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ವಹಿಸಿಕೊಂಡ ಮೇಲೆ ಕೈಗೊಂಡಿರುವ ಅಭಿವೃದ್ದಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ಸಜ್ಜಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಜಿಲ್ಲೆಯ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಗಳು ಸರ್ಕಾರ ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ತಲುಪಿಸುವಂತಹ ಕೆಲಸ ಮಾಡಬೇಕಾಗಿದೆ. ಈ ಮಾನದಂಡಗಳನ್ನಿಟ್ಟು ಕೊಂಡು ಜನರ ಬಳಿಗೆ ತೆರಳಿ ಎಂದು ಸಲಹೆ ನೀಡಿದರು.
ಚುನಾವಣಾ ವೀಕ್ಷಕರಾದ ಡೇವಿಡ್ ಸಿಮೆಯೋನ್ ಮಾತನಾಡಿ ಕೆಪಿಸಿಸಿ ಆದೇಶದ ಮೇರೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿಯನ್ನು ಸಿದ್ದಪಡಿಸಿ ಹೈಕಮಾಂಡ್‌ಗೆ ನೀಡಲಾಗುವುದು.ನಮ್ಮ ವರದಿ ಮತ್ತು ಸರ್ವೆ ನಡೆಸಿದ ವರದಿಯ ಅನ್ವಯ ಹೈಕಮಾಂಡ್ ಅಂತಿಮವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ರಾಜ್ಯದಾದ್ಯಂತ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದ ಮೂಲಕ ನಮ್ಮ ಪಕ್ಷ ೧ ಕೊಟಿ ೧೦ ಲಕ್ಷ ಜನರನ್ನು ನೇರವಾಗಿ ತಲುಪಿದೆ ಮತ್ತು ಸರ್ಕಾರದ ಹಲವಾರು ಜನಪರ ಯೋಜನೆಗಳನ್ನು ತಿಳಿಸಲಾಗಿದೆ ಈ ಹಿನ್ನೆಲೆಯಲ್ಲಿ ಪಕ್ಷ ಯಾರಿಗೆ ಟಿಕೇಟ್ ನೀಡಿದರೂ ಕಾರ್ಯಕರ್ತರು ಸಂಘಟಿತರಾಗಿ ಚುನಾವಣೆ ಯುದ್ದದಲ್ಲಿ ಗೆಲುವು ಪಡೆದು ರಾಜ್ಯದಲ್ಲಿ ಮತ್ತೋಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕೆಂದರು.
ಸಭೆಯಲ್ಲಿ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಶಾಸಕ ಡಿ.ಜಿ ಶಾಂತನಗೌಡ, ಜಿಲ್ಲಾಧ್ಯಕ್ಷ ಹೆಚ್.ಬಿ ಮಂಜಪ್ಪ, ಪಾಲಿಕೆ ಸದಸ್ಯ ದಿನೇಶ್ ಕೆ ಶೆಟ್ಟಿ ಮತ್ತಿತರಿದ್ದರು. ಈ ವೇಳೆ ವಿಧಾನಸಭಾವಾರು ಆಕಾಂಕ್ಷಿಗಳಿಂದ ಅರ್ಜಿಗಳನ್ನು ಪಡೆಯಲಾಯಿತು.
ಅರ್ಜಿ ಸಲ್ಲಿಸಿದ ಆಕಾಂಕ್ಷಿಗಳ ಪಟ್ಟಿ:
ಮಾಯಕೊಂಡ : ಬಿ.ಎಚ್.ವೀರಭದ್ರಪ್ಪ, ಡಿ.ಬಸವರಾಜ್, ವೈ.ರಾಮಪ್ಪ, ಬಿ.ಟಿ.ವಿಶ್ವನಾಥ್, ನಂಜಾನಾಯ್ಕ, ಡಿ.ತಿಪ್ಪಣ್ಣ, ಎಸ್.ಎನ್.ಬಾಲಾಜಿ, ನಾಗರಾಜನಾಯ್ಕ, ಈರಾನಾಯ್ಕ, ರಾಘವೇಂದ್ರ ನಾಯ್ಕ, ಓ.ನಾಗೇಂದ್ರಪ್ಪ, ಬಸವಂತಪ್ಪ, ಪಿ.ಜಿ.ಚಂದ್ರಶೇಖರ್.
ಹರಿಹರ ; ಮರಿಯೋಜಿರಾವ್, ಡಾ|| ಶೈಲೇಶ್ ಕುಮಾರ್, ಬಿ.ರೇವಣಸಿದ್ದಪ್ಪ, ಎಂ.ನಾಗೇಂದ್ರಪ್ಪ, ಎಚ್.ಮಹೇಶ್ವರಪ್ಪ, ಸೈಯದ್ ಓಜಾಜ್, ರಾಮಚಂದ್ರ ಕಲಾಲ್, ಟಿ.ಎಚ್.ಬಸವರಾಜ್, ಎಸ್.ರಾಮಪ್ಪ, ಕೆ.ಎನ್.ವೀರಣ್ಣ.
ಚನ್ನಗಿರಿ: ವಡ್ನಾಳ್ ರಾಜಣ್ಣ, ಸೈಯದ್ ಖಾಲಿದ್ ಅಹ್ಮದ್, ಯಾಹ್ಯೂಖಾನ್, ಹೊನ್ನಾಳಿ : ಡಿ.ಜಿ.ಶಾಂತನಗೌಡ, ಎಚ್.ಬಿ.ಮಂಜಪ್ಪ, ಬಿ.ಸಿದ್ದಪ್ಪ, ಎಚ್.ಎ.ಉಮಾಪತಿ.
ದಾವಣಗೆರೆ ದಕ್ಷಿಣ : ಡಾ|| ಶಾಮನೂರು ಶಿವಶಂಕರಪ್ಪ, ಸಾಧಿಕ್ ಪೈಲ್ವಾನ್, ಕೆಂಗೋ ಹನುಮಂತಪ್ಪ, ಸೈಯದ್ ಸೈಪುಲ್ಲಾ.ದಾವಣಗೆರೆ ಉತ್ತರ : ಎಸ್.ಎಸ್.ಮಲ್ಲಿಕಾರ್ಜುನ್.ಹರಪನಹಳ್ಳಿ : ಎಂ.ಪಿ.ರವೀಂದ್ರ, ಸಿ.ಚಂದ್ರಶೇಖರ್ ಭಟ್, ಎಂ.ರಾಜಶೇಖರ್, ಡಾ|| ಉಮೇಶ್ ಬಾಬು, ಎಂ.ಟಿ.ಸುಭಾಷ್ ಚಂದ್ರ,ಜಗಳೂರು : ಎಚ್.ಪಿ.ರಾಜೇಶ್, ಪುಷ್ಪಾ ಲಕ್ಷ್ಮಣಸ್ವಾಮಿ, ಪಿ.ಎಚ್.ಓಬಪ್ಪ.

Be the first to comment on "ರಾಜ್ಯ ಕಾಂಗ್ರೆಸ್ ಆಡಳಿತದ ಅಭಿವೃದ್ಧಿ ಕಾರ್ಯಗಳನ್ನು ಜನತೆಗೆ ತಿಳಿಸಿ : ರವಿ"

Leave a comment

Your email address will not be published.


*