60 ಕೆರೆಗಳಿಗೆ ನೀರು ತುಂಬಿಸೋ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಯೋಜನೆ : ಜಿ.ಎಂ.ಸಿದ್ದೇಶ್ವರ್

Share
  • 30
    Shares

ಹರಪನಹಳ್ಳಿ- ಬಿಜೆಪಿ ಆಡಳಿತಾವಧಿಯಲ್ಲಿ ಚುನಾವಣಾ ಪ್ರಣಾಳಿಕೆಯ ಶೇ. 95 ರಷ್ಟು ಪೂರೈಸಿದ ತೃಪ್ತಿ ಪಕ್ಷಕ್ಕಿದೆ. ಇಂದಿನ ಆಡಳಿತ ಸರ್ಕಾರ ಬೇಜವಾಬ್ದಾರಿಯಿಂದ ಕೂಡಿದೆ ಎಂದು ಮಾಜಿ ಕೇಂದ್ರ ಸಚಿವ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಹೇಳಿದರು.
ಪಟ್ಟಣದ ನಟರಾಜ ಕಲಾಭವನದಲ್ಲಿ ಚುನಾವಣಾ ಪ್ರಣಾಳಿಕೆ ಸಭೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸೋ ಯೋಜನೆ, ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗಳು ಬಿಜೆಪಿ ಸರ್ಕಾರದ ಯೋಜನೆಗಳಾಗಿದ್ದು. ಬ್ರಿಡ್ಜ್ ಕಂ ಬ್ಯಾರೇಜ್ ಯೋಜನೆಗೆ ಟೆಂಡರ್ ಹಂತದವರೆಗೂ ಶ್ರಮಿಸಿದ್ದೇವೆ. ಕೆಲವು ತಾಂತ್ರಿಕ ಕಾರಣಗಳಿಂದ ನೆನೆಗುದಿಗೆ ಬಿದ್ದಿತ್ತು. ಆದರೆ ಇಂದು ಆಡಳಿತ ಸರ್ಕಾರ ಅದನ್ನೇ ಮುಂದುವರಿಸಿದೆಯೇ ವಿನಹಃ ಸ್ವಂತ ಕಾಂಗ್ರೆಸ್ ಸರ್ಕಾರದ ಯೋಜನೆಗಳಲ್ಲ ಎಂದ ಅವರು. ತಾಲೂಕಿನ ಸಮಗ್ರ ಅಭಿವೃದ್ದಿಯನ್ನು ಮನದಲ್ಲಿಟ್ಟುಕೊಂಡು ಚುನಾವಣಾ ಪ್ರಣಾಳಿಕೆ ಅಂಶಗಳನ್ನು ಸೇರಿಸುವ ಕೆಲಸ ಮಾಡಬೇಕಿದೆ. ರೈತರ ಅನುಕೂಲ ಸಿಂಧುವಾಗುವಂತಹ ಪ್ರಣಾಳಿಕೆ ನಮ್ಮದಾಗಲಿದೆ ಎಂದರು.
ಮಾಜಿ ಕಂದಾಯ ಸಚಿವ ಜಿ.ಕರುಣಾಕರ ರೆಡ್ಡಿ ಮಾತನಾಡಿ. ಬುದ್ದಿ ಜೀವಿಗಳು, ಮುಖಂಡರು ಸಕ್ರಿಯ ಕಾರ್ಯಕರ್ತರನ್ನೊಳಗೊಂಡು ಸಾಮಾನ್ಯ ಜನರ ಹಾಗೂ ತಾಲೂಕಿನ ಅಭಿವೃದ್ದಿಗಾಗಿ ಚುನಾವಣಾ ಪ್ರಣಾಳಿಕೆ ಸಿದ್ದಗೊಳಿಸುವ ಸಲುವಾಗಿ ಸಭೆ ಕರೆಯಲಾಗಿದೆ. ಆಡಳಿತ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾಡದ ಯೋಜನೆಗಳನ್ನು ಚುನವಣೆಗೂ ಮುನ್ನ ಸಿಕ್ಕಾ ಪಟ್ಟೆ ಯೋಜನೆಗಳನ್ನು ಘೋಷಿಸುವುದು ಆಡಳಿತ ಸರ್ಕಾರದ ಸಾಧನೆಯಲ್ಲ. ಅಭಿವೃದ್ದಿ ಮಾಡಬೇಕೆಂದರೆ ಚುನಾವಣೆ ನಂತರದ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಾರಂಭದಲ್ಲೆ ಮಾಡಬೇಕಿತ್ತು ಎಂದರು.
ಚುನಾವಣಾ ಪ್ರಣಾಳಿಕೆಯ ಜಿಲ್ಲಾ ಉಸ್ತುವಾರಿ ಪ್ರಮುಖರಾದ ರಮೇಶ್ ನಾಯ್ಕ್, ಡಾ.ಪ್ರಿಯಾಂಕಾ ರವಿ ಅಧಿಕಾರ್ ಹಾಗೂ ಡಾ. ಮಲ್ಕಪ್ಪ ಅಧಿಕಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಲಕ್ಷ್ಮಣ್, ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ್, ತಾ ಉಪಾಧ್ಯಕ್ಷರಾದ ಕಣವಿಹಳ್ಳಿ ಮಂಜುನಾಥ್, ಸಣ್ಣ ಹಾಲಪ್ಪ, ಚುನಾವಣಾ ಉಸ್ತುವಾರಿ ಜೀವನ್ ಕುಮಾರ್, ಸಂಚಾಲಕರಾದ ಶಿವಕುಮಾರಸ್ವಾಮಿ, ಜಿಪಂ ಸದಸ್ಯೆ ಜಯಶೀಲ, ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಉಪಾಧ್ಯಕ್ಷ ಕೆ.ಸತ್ಯನಾರಾಯಣ, ತಾಪಂ ಉಪಾಧ್ಯಕ್ಷ ಮಂಜ್ಯಾನಾಯ್ಕ, ಪುರಸಭೆ ಸದಸ್ಯ ಮಾಬೂಸಾಬ್, ತಾಪಂ ಸದಸ್ಯ ನಾಗರಾಜ್ ಹಾಗೂ ಇತರರು ಉಪಸ್ಥಿತರಿದ್ದರು.

Be the first to comment on "60 ಕೆರೆಗಳಿಗೆ ನೀರು ತುಂಬಿಸೋ ಯೋಜನೆ ಹಿಂದಿನ ಬಿಜೆಪಿ ಸರ್ಕಾರದ ಯೋಜನೆ : ಜಿ.ಎಂ.ಸಿದ್ದೇಶ್ವರ್"

Leave a comment

Your email address will not be published.


*