ದಾವಣಗೆರೆಯಲ್ಲಿ ಉನ್ನತ ಎಸ್‌ಎಸ್ ಮೂತ್ರರೋಗಶಾಸ್ತ್ರ ಕೇಂದ್ರ ಆರಂಭಿಸಿದ ಫೋರ್ಟಿಸ್ ಆಸ್ಪತ್ರೆ

Share
  • 112
    Shares

ದಾವಣಗೆರೆ-ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆ ಇಂದು ಕರ್ನಾಟಕದ ದಾವಣಗೆರೆಯಲ್ಲಿ ಉನ್ನತ ಮಟ್ಟದ ಕ್ಲಿನಿಕ್ ಒಂದನ್ನು ಆರಂಭಿಸಿದೆ. ಎಲ್ಲ ರೀತಿಯ ಮೂತ್ರಪಿಂಡ ತೊಂದರೆಗಳಿಗೆ ಬೆಂಗಳೂರಿಗೇ ಹೋಗಬೇಕಾಗಿದ್ದ ಸುತ್ತಮುತ್ತಲ ಪ್ರದೇಶಗಳ ರೋಗಿಗಳಿಗೆ ಈ ಮಧ್ಯ ಕರ್ನಾಟಕದಲ್ಲಿ ಸ್ಥಾಪಿತವಾಗಿರುವ ಎಸ್‌ಎಸ್ ಫೋರ್ಟಿಸ್ ಯೂರೋಲಜಿ ಸೆಂಟರ್ ಹತ್ತಿರದಲ್ಲಿಯೇ ಚಿಕಿತ್ಸಾ ಸಂಪರ್ಕ ಕಲ್ಪಿಸಲಿದೆ.
ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಮೂತ್ರರೋಗ ಶಾಸ್ತ್ರ, ಮೂತ್ರ-ಕ್ಯಾನ್ಸರ್ ರೋಗಶಾಸ್ತ್ರ, ಪುರುಷರೋಗಶಾಸ್ತ್ರ ಮತ್ತು ಅಂಗ ಕಸಿ ಶಸ್ತ್ರಚಿಕಿತ್ಸಾ ವಿಭಾಗಗಳ ನಿರ್ದೇಶಕ ಡಾ. ಮೋಹನ್ ಕೇಶವಮೂರ್ತಿಯವರೊಂದಿಗೆ ಉದ್ಘಾಟಿಸಿದರು.
ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಮಾತನಾಡಿ, ತಮ್ಮ ಹತ್ತಿರದಲ್ಲೇ ಸರಿಯಾದ ಚಿಕಿತ್ಸೆ ಲಭಿಸಲು ಹಾಗೂ ಅವರು ಶೀಘ್ರ ಮತ್ತು ಉತ್ತಮ ರೀತಿಯಲ್ಲಿ ಗುಣಮುಖರಾಗಲು ಈ ವಿಭಾಗದಲ್ಲಿ ವಿಶೇಷ ವೈದ್ಯಕೀಯ ಕ್ಲಿನಿಕ್ ಹೊಂದಿರುವುದು ನೆರವಾಗುತ್ತದೆ. ಇಂತಹ ಉಪಕ್ರಮದ ಭಾಗವಾಗಿರಲು ನಾವು ಸಂತೋಷಗೊಂಡಿದ್ದೇವೆ ಮತ್ತು ಇಲ್ಲಿ ನೀಡಲಾಗುವ ಸೇವೆಗಳಿಂದ ಜನರಿಗೆ ಲಾಭವಾಗಲಿದೆ ಎಂಬ ಭರವಸೆ ನಮ್ಮದಾಗಿದೆ ಎಂದರು.
ಡಾ.ವಿಷ್ಣುವರ್ಧನ್ ಪಿಎಸ್ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Be the first to comment on "ದಾವಣಗೆರೆಯಲ್ಲಿ ಉನ್ನತ ಎಸ್‌ಎಸ್ ಮೂತ್ರರೋಗಶಾಸ್ತ್ರ ಕೇಂದ್ರ ಆರಂಭಿಸಿದ ಫೋರ್ಟಿಸ್ ಆಸ್ಪತ್ರೆ"

Leave a comment

Your email address will not be published.


*