ಉಚ್ಚಂಗಿದುರ್ಗದಲ್ಲಿ ಕಂಪ್ಯೂಟರ್ ಅಂಗಡಿಗೆ ಬೆಂಕಿ : 1ಲಕ್ಷಕ್ಕೂ ಅಧಿಕ ನಷ್ಟ

Share
  • 14
    Shares

ಹರಪನಹಳ್ಳಿ-ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ಜೆರಾಕ್ಸ್, ಕಂಪ್ಯೂಟರ್ ಹಾಗೂ ಗ್ಯಾರೇಜ್ ಬಿಡಿಭಾಗಗಳನ್ನು ಮಾರುತ್ತಿದ್ದ ಅಂಗಡಿಗೆ ಭಾನುವಾರ ರಾತ್ರಿ ಬೆಂಕಿಬಿದ್ದು 1 ಲಕ್ಷಕ್ಕೂ ಅಧಿಕ ನಷ್ಟವಾದ ಘಟನೆ ಜರುಗಿದೆ. ಗ್ರಾಮದ ಬಸವರಾಜರಿಗೆ ಸೇರಿದ್ದ ಅಂಗಡಿ ಬೆಂಕಿಯಿಂದ ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಚ್ಚಿದ್ದಾರೆಂದು ದೂರಿದ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದಾರೆ. ಮೇಲಿಂದ ಮೇಲೆ ಬೆಂಕಿ ಹಚ್ಚುವ ಪ್ರಕರಣ ನಡೆಯುತ್ತಿದ್ದರೂ ಪೊಲೀಸರು ಗಸ್ತು ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ಸಿಪಿಐ ದುರುಗಪ್ಪ ಸ್ಥಳಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿ ಶೀಘ್ರದಲ್ಲೇ ಕಿಡಿಗೇಡಿಗಳನ್ನು ಪತ್ತೆ ಹಚ್ಚುವುದಾಗಿ ಭರವಸೆ ನೀಡಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

Be the first to comment on "ಉಚ್ಚಂಗಿದುರ್ಗದಲ್ಲಿ ಕಂಪ್ಯೂಟರ್ ಅಂಗಡಿಗೆ ಬೆಂಕಿ : 1ಲಕ್ಷಕ್ಕೂ ಅಧಿಕ ನಷ್ಟ"

Leave a comment

Your email address will not be published.


*