ರೈತರ ಹಿತಾಸಕ್ತಿಗೆ ಬದ್ಧ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

Share
  • 75
    Shares

ದಾವಣಗೆರೆ : ದಾವಣಗೆರೆ ತಾಲ್ಲೂಕಿನ ಕೊನೆಭಾಗದ ರೈತರ ಹಿತಾಸಕ್ತಿಯನ್ನು ಕಾಪಾಡಿಕೊಳ್ಳುವ ದೃಷ್ಠಿಯಿಂದಲೇ ಕೊನೆಭಾಗದ ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ತೋಟಗಾರಿಕೆ ಮತ್ತು ಎಪಿಎಂಸಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆ ತಾಲ್ಲೂಕಿನ ಕೊನೆಭಾಗದ ಗ್ರಾಮಗಳ ಸಂಪೂರ್ಣ ಅಭಿವೃದ್ದಿಗಾಗಿ ವಿವಿಧ ಇಲಾಖೆಗಳಿಂದ ಸುಮಾರು 15 ಕೋಟಿ ರೂ.ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗೀರೀಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬೇತೂರು ಕರಿಬಸಪ್ಪ, ಕಡ್ಲೆಬಾಳು ಗ್ರಾಮಪಂಚಾಯಿತಿ ಅಧ್ಯಕ್ಷ ಮಾಗಾನಹಳ್ಳಿ ಪರಶುರಾಮ್, ಮಹಾನಗರ ಪಾಲಿಕೆ ಸದಸ್ಯ ಬಸಪ್ಪ, ಬಾತಿ ಕೆ.ಜಿ.ಉಮೇಶ್, ಆವರಗೊಳ್ಳ ಷಣ್ಮುಖಯ್ಯ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ಆಶಾ ಮುರುಳಿ, ಶ್ರೀಮತಿ ಮಮತಾ ಉಮೇಶ್, ಶ್ರೀಮತಿ ಪುಷ್ಪಾ ಸದಾಶಿವಪ್ಪ, ಶ್ರೀಮತಿ ಗೌರಿಬಾಯಿ, ಮತ್ತಿತರರು ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಜಿ.ಬಸವನಗೌಡ್ರು, ಮೇಕಾ ಮುರುಳಿಕೃಷ್ಣ, ಕಾಡಾ ಸಮಿತಿಯ ಬಸವರಾಜಪ್ಪ, ಎಪಿಎಂಸಿ ಸದಸ್ಯರುಗಳಾದ ಕೆ.ಜಿ.ಶಾಂತರಾಜ್, ಟಿ.ರಾಜಣ್ಣ, ರೇವಣಸಿದ್ದಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಬೇತೂರು ಪ್ರಭು, ದಾವಣಗೆರೆ ವಿ.ವಿ. ಸಿಂಡಿಕೇಟ್ ಸದಸ್ಯ ನಾಗಭೂಷಣ್, ಕಕ್ಕರಗೊಳ್ಳ ಗೀರೀಶ್, ಬೂದಾಳ್ ಬಾಬು, ಗ್ರಾಮಪಂಚಾಯಿತಿ ಅಧ್ಯಕ್ಷರುಗಳಾದ ಶ್ರೀಮತಿ ಶಾಂತಮ್ಮ, ಶ್ರೀಮತಿ ನಾಗರತ್ನಮ್ಮ ಮಂಜಪ್ಪ, ಶ್ರೀಮತಿ ಅನಸೂಯಮ್ಮ ವೀರಭದ್ರಪ್ಪ, ಶ್ರೀಮತಿ ಮಂಜಮ್ಮ ಪರಸಪ್ಪ, ಪಂಚಾಯಿತಿ ಸದಸ್ಯರು, ಮುಖಂಡರುಗಳಾದ ಎ.ಬಿ.ಪ್ರಭಾಕರ, ಭೀಮಾನಾಯ್ಕ, ಕಡ್ಲೆಬಾಳು ಸಿದ್ದೇಶ್, ಬಾತಿ ರಾಮು, ಸಿದ್ದಲಿಂಗಪ್ಪ, ಶಿವಕುಮಾರ್, ಹಳೇಬಾತಿ ಅಂಜಿನಪ್ಪ, ಎಂ.ನಾಗಪ್ಪ, ಎ.ಕೆ.ನಾಗೇಂದ್ರಪ್ಪ, ಬೇತೂರು ಮಂಜುನಾಥ್, ಆವರಗೊಳ್ಳ ವೀರಯ್ಯ, ವಿರೇಶ್, ಸಿದ್ದೇಶ್, ದಾದುಸಾಬ್, ರಿಯಾಜ್, ಅಲ್ಲಾಭಕ್ಷಿ, ದೇವರಹಟ್ಟಿ ಅಯೂಬ್, ಶಮೀವುಲ್ಲಾ, ಸಲೀಂ, ಗ್ರಾಮಸ್ಥರು ಮತ್ತಿತರರಿದ್ದರು.

Be the first to comment on "ರೈತರ ಹಿತಾಸಕ್ತಿಗೆ ಬದ್ಧ : ಸಚಿವ ಎಸ್.ಎಸ್.ಮಲ್ಲಿಕಾರ್ಜುನ್"

Leave a comment

Your email address will not be published.


*