ಶೀಘ್ರ ದಾವಣಗೆರೆಯಲ್ಲಿ ನಿವೇಶನ ವಿತರಣೆಗೆ ಕ್ರಮ: ಡಾ|| ಎಸ್ಸೆಸ್

Share
  • 58
    Shares

ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಭಾರತ್ ಕಾಲೋನಿ ಮತ್ತು ಹೆಚ್.ಕೆ.ಆರ್ ನಗರಗಳಲ್ಲಿ ಕಳೆದ ೩೦-೪೦ ವರ್ಷದಿಂದ ನಗರಪಾಲಿಕೆ ಮತ್ತು ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ವಾಸಿಸುತ್ತಿದ್ದ ನಿವೇಶನದಾರರಿಗೆ ಇಂದು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಮಾಜಿ ಸಚಿವರೂ ಆದ ಡಾ|| ಶಾಮನೂರು ಶಿವಶಂಕರಪ್ಪನವರು ಹಕ್ಕುಪತ್ರಗಳನ್ನು ವಿತರಿಸಿದರು.
ಇಂದು ಬೆಳಿಗ್ಗೆ ನಗರದ ಆರ್ ಎಂಸಿ ರಸ್ತೆಯಲ್ಲಿ ಏರ್ಪಡಿಸಿದ್ದ ಕಾರ್‍ಯಕ್ರಮದಲ್ಲಿ ನಿವೇಶನದಾರರಿಗೆ ಹಕ್ಕುಪತ್ರ ವಿತರಿಸಿ ಶಾಸಕರು ಮಾತನಾಡಿದರು.
ಇದೀಗ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಲಾಗಿದ್ದು, ಹಕ್ಕುಪತ್ರಗಳನ್ನು ತೆಗೆದುಕೊಂಡ ನಿವೇಶನದಾರರು ಮೊದಲು ತಮ್ಮ ಹೆಸರಿಗೆ ಖಾತೆಗಳನ್ನು ಮಾಡಿಸಿ ಮನೆಗಳು ಶೀಥಿಲಾವಸ್ಥೆಯಲ್ಲಿದ್ದರೆ, ಮನೆ ನಿರ್ಮಿಸಿಕೊಳ್ಳಲು ಸಾಮಾನ್ಯ ಜನರಿಗೆ ೨.೭೦ ಲಕ್ಷ ರೂ., ಹಾಗೂ ಪರಿಶಿಷ್ಟ ಜಾತಿ, ವರ್ಗದವರಿಗೆ ೩.೩೦ ಲಕ್ಷ ರೂ.,ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ತಿಳಿಸಿ ಇದನ್ನು ಅರ್ಹರು ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.
ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆಯೂಬ್ ಪೈಲ್ವಾನ್ ,ಉದ್ಯಮಿ ಕೋಗುಂಡಿ ಬಕ್ಕೇಶಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾಪೌರರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್, ಉಪ ಮಹಾಪೌರರಾದ ಶ್ರೀಮತಿ ನಾಗರತ್ನಮ್ಮ, ಹಾಲಿ ಪಾಲಿಕೆ ಸದಸ್ಯರು, ಮಾಜಿ ಮಹಾಪೌರರಾದ ಶ್ರೀಮತಿ ರೇಣುಕಾಬಾಯಿ ವೆಂಕಟೇಶ್ ನಾಯ್ಕ, ಮಹಾನಗರ ಪಾಲಿಕೆ ಸದಸ್ಯ ದಿನೇಶ್ ಕೆ.ಶೆಟ್ಟಿ, ವರ್ತಕ ಕೆಜಿಕೆ ಚಿದಾನಂದ್, ಆಶ್ರಯ ಸಮಿತಿ ಸದಸ್ಯರುಗಳಾದ ಕೆ.ಬಿ.ನಾಗರಾಜ್, ಖಲಂದರ್, ಶ್ರೀಮತಿ ಸೌಭಾಗ್ಯ ಬಂಡಿ ನಾಗರಾಜ್, ಇಟ್ಟಿಗುಡಿ ಮಂಜುನಾಥ್, ಸೊಸೈಟಿ ವೆಂಕಟೇಶ್ ನಾಯ್ಕ, ಬೆಂಡಿಗೇರಿ ರಾಜಶೇಖರ್, ಅನ್ನಪೂರ್ಣಮ್ಮ ಭಾಗವಹಿಸಿದ್ದರು.

Be the first to comment on "ಶೀಘ್ರ ದಾವಣಗೆರೆಯಲ್ಲಿ ನಿವೇಶನ ವಿತರಣೆಗೆ ಕ್ರಮ: ಡಾ|| ಎಸ್ಸೆಸ್"

Leave a comment

Your email address will not be published.


*