ದಾವಣಗೆರೆಯಲ್ಲಿ ಮಾರ್ಚ್ 2ರಿಂದ ಜಯದೇವ ಶ್ರೀಗಳ 61ನೇಸ್ಮರಣೋತ್ಸವ ಮಲ್ಲಿಕಾರ್ಜುನ್‌ಖರ್ಗೆ ಅವರಿಗೆ ಜಯದೇವಶ್ರೀ ಪ್ರಶಸ್ತಿ

Share
  • 36
    Shares

ದಾವಣಗೆರೆ- ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿ ಗಳವರ ಸ್ಮರಣೋತ್ಸವದಅಂಗವಾಗಿ ಲೋಕಸಭಾ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಜಯದೇವಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುವುದು ಎಂದು ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಶರಣರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿಯನ್ನು ಮಾಜಿ ಶಾಸಕರೂ, ನ್ಯಾಯವಾದಿಗಳಾದ ಶ್ರೀಮತಿ ಪ್ರಮೀಳಾ ನೇಸರ್ಗಿ ಅವರಿಗೆ, ಶೂನ್ಯಪೀಠ ಅಲ್ಲಮ ಪ್ರಶಸ್ತಿಯನ್ನು ಹಿರಿಯ ಸಾಹಿತಿಗಳಾದ 

ನಾಡೋಜ ಹಂಪ ನಾಗರಾಜಯ್ಯ ಅವರಿಗೆ, ಶೂನ್ಯಪೀಠ ಚನ್ನಬಸವ ಪ್ರಶಸ್ತಿಯನ್ನು ಸಮಾಜ ಸೇವಕ ಡಾ. ಸಿ.ಆರ್.ನಸೀರ್‌ಅಹಮದ್ ಅವರಿಗೆ ನೀಡಲಾಗುವುದು ಎಂದು ವಿವರಿಸಿದರು.
ಮಾರ್ಚ್ 3 ರಂದು ಸಂಜೆ 60.30 ಗಂಟೆಗೆ ನಗರದ ಶಿವಯೋಗಾಶ್ರಮದ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಾನ್ನಿಧ್ಯವನ್ನು ಶ್ರೀ ನಿಜಗುಣಪ್ರಭು ತೋಂಟದಾರ್ಯ ಸ್ವಾಮೀ ಜಿ ವಹಿಸುವರು.
ಅಧ್ಯಕ್ಷತೆಯನ್ನು ಡಾ. ಶಿವಮೂರ್ತಿ ಶರಣರುವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ರಮೇಶ್ ಜಾರಕಿಹೊಳಿ, ಸಂಸದ ಜಿ.ಎಂ.ಸಿದ್ದೇಶ್ವರ ಮತ್ತಿತರರು ಆಗಮಿಸುವರು ಎಂದರು.ಜಯದೇವ ಮಹಾಸ್ವಾಮಿಗಳವರ ೬೧ನೇಸ್ಮರಣೋತ್ಸವ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ಮತ್ತು ಸಹಜ ಶಿವಯೋಗ ಕಾರ್ಯಕ್ರಮವು ಮಾರ್ಚ್ 2, 3ಮತ್ತು 4 ರಂದು ನಡೆಯಲಿದೆ.

Be the first to comment on "ದಾವಣಗೆರೆಯಲ್ಲಿ ಮಾರ್ಚ್ 2ರಿಂದ ಜಯದೇವ ಶ್ರೀಗಳ 61ನೇಸ್ಮರಣೋತ್ಸವ ಮಲ್ಲಿಕಾರ್ಜುನ್‌ಖರ್ಗೆ ಅವರಿಗೆ ಜಯದೇವಶ್ರೀ ಪ್ರಶಸ್ತಿ"

Leave a comment

Your email address will not be published.


*