ದಾವಣಗೆರೆಯಲ್ಲಿ ಫೆ.21ರಂದು ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ

Share
  • 474
    Shares

ದಾವಣಗೆರೆ-ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾ ಲಯದಿಂದ ಪಾಸ್ ಪೋರ್ಟ್ ವಿತರಣಾ ಕ್ರಿಯೆಯನ್ನು ಸುಗುಮ ಗೊಳಿಸುವ ಹಾಗೂ ವ್ಯಾಪಕತೆಯನ್ನು ವಿಸ್ತರಿಸುವ ಸಲುವಾಗಿ ಕರ್ನಾಟಕದ ದಾವಣಗೆರೆ, ಬೆಳಗಾವಿ, ಹಾಸನ ಮತ್ತು ಗುಲ್ಬರ್ಗಾ ಸೇರಿದಂತೆ ದೇಶದ 56 ಕಡೆ ಅಂಚೆ ಕಛೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲು ಕಳೆದ ವರ್ಷ ಘೋಷಣೆ ಮಾಡಲಾಗಿತ್ತು. ೫೬ ಸ್ಥಳಗಳಲ್ಲಿ ದಾವಣಗೆರೆಯೂ ಒಂದಾಗಿದೆ ಎನ್ನುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದ್ದಾರೆ.
ಅದರಂತೆ ದಾವಣಗೆರೆ ನಗರದ ಗಡಿಯಾರ ಕಂಬದ ಬಳಿಯಿರುವ ಹೆಡ್‌ಪೊಸ್ಟ್ ಆಫೀಸ್‌ನಲ್ಲಿ ಅಂಚೆ ಕಛೇರಿ ಪಾಸ್‌ಪೋಟ್ ಸೇವಾ ಕೇಂದ್ರವನ್ನು ತೆರೆಯಲು ಈಗಾಗಲೇ ಬೆಂಗಳೂರಿನ ರೀಜನಲ್ ಪಾಸ್‌ಪೋರ್ಟ್ ಆಫೀಸರ್ ಭರತ್‌ಕುಮಾರ್ ಕುರ್ತಾಟಿ ಯವರ ಉಸ್ತುವಾರಿಯಲ್ಲಿ ಎಲ್ಲಾ ಸಿದ್ದತೆಗಳು ಪೂರ್ಣಗೊಂಡಿದ್ದು, ಫೆ21 ರ ಬುಧವಾರ ಮಧ್ಯಾಹ್ನ 12 ಗಂಟೆಗೆ ದಾವಣಗೆರೆಯ ಅಂಚೆ ಕಛೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರವನ್ನು ಸಾರ್ವಜನಿಕ ಸೇವೆಗೆ ಸ್ವತ: ನಾನೇ ಸಮರ್ಪಿಸಿಲಿದ್ದೇನೆ ಎಂದು ಸಂಸದರು ತಿಳಿಸಿದರು.

2 Comments on "ದಾವಣಗೆರೆಯಲ್ಲಿ ಫೆ.21ರಂದು ಪಾಸ್‌ಪೋರ್ಟ್ ಸೇವಾ ಕೇಂದ್ರ ಉದ್ಘಾಟನೆ"

  1. Hats off to MP Mr.siddeshwar its very helpful to janatha.Thank you sir.

  2. Hats off to MrDiddeshwar MP of Davanagere.its very help full to for local janatha

Leave a comment

Your email address will not be published.


*