ಆಲದಹಳ್ಳಿಯಲ್ಲಿ ಫೆ.24ರಂದು ಈಶ್ವರ ಬಸವೇಶ್ವರ ದೇವಸ್ಥಾನ ಉದ್ಘಾಟನೆ

Share
  • 371
    Shares

ಹರಪನಹಳ್ಳಿ-ತಾಲೂಕಿನ ಆಲದಹಳ್ಳಿ ಗ್ರಾಮದ ಈಶ್ವರ ಬಸವೇಶ್ವರ ದೇವಸ್ಥಾನದ ಉದ್ಘಾಟನೆ ಕಾರ್ಯಕ್ರಮ ದಿನಾಂಕ: 24.02.2018 ರ ಶನಿವಾರ ಬೆಳಿಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಶಿವಧನ್ಯ ಮಿಲನ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮಕ್ಕೆ ಮದ್ದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ೧೧೦೮ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿ ಬೃಹನ್ಮಠ ಸಿರಿಗೆರೆಯವರು ದಿವ್ಯ ಸಾನಿದ್ಯ ವಹಿಸಲಿದ್ದಾರೆ. ವಿಶೇಷ ಪೂಜೆ ಹಾಗೂ ಅಭಿಷೇಕ ಕಾರ್ಯಕ್ರಮಕ್ಕೆ ಮುಖಂಡರಾದ ಜಿ.ನಂಜನಗೌಡ, ತೋಟಗಾರಿಕೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ್, ಶಾಸಕ ಎಂ.ಪಿ. ರವೀಂದ್ರ, ಮಾಜಿ ಶಾಸಕ ಎಸ್.ವಿ. ರಾಮಚಂದ್ರಪ್ಪ, ಮಾಜಿ ಸಚಿವ ಜಿ.ಕರುಣಾಕರರೆಡ್ಡಿ, ಮುಖಂಡ ಅರಸಿಕೆರೆ ಎನ್.ಕೊಟ್ರೇಶ್, ಸಾಧು ಸದ್ದರ್ಮ ಸಮಾಜದ ಅಧ್ಯಕ್ಷ ಮಂಜುನಾಥ್ ಗುಂಡಗತ್ತಿ, ಕೆ.ಚನ್ನಬಸವನಗೌಡ್ರು, ಬಿ.ಕೆ. ಪ್ರಕಾಶ್, ಹೆಚ್. ಚನ್ನಬಸವನ ಗೌಡ್ರು, ಅಜ್ಜಪ್ಪ ವಕೀಲರು, ರಾಜ್ಯ ಬೀಜ ನಿಗಮದ ನಿರ್ದೇಶಕ ಸಾವಜ್ಜಿ ರಾಜಣ್ಣ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಸದ್ಭಕ್ತರಲ್ಲಿ ಕೆ.ನಾಗರಾಜ್, ದುಶ್ಯಂತ್‌ರಾಜ್, ಹೆಚ್.ಎಂ .ನಾಗರಾಜ್, ಬಿ.ಎಂ.ಶಿವಪ್ರಕಾಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

Be the first to comment on "ಆಲದಹಳ್ಳಿಯಲ್ಲಿ ಫೆ.24ರಂದು ಈಶ್ವರ ಬಸವೇಶ್ವರ ದೇವಸ್ಥಾನ ಉದ್ಘಾಟನೆ"

Leave a comment

Your email address will not be published.


*