ತೋಟಗಾರಿಕೆ ವಿಶ್ವವಿದ್ಯಾಲಯದ 7ನೇ ಘಟೀಕೋತ್ಸವದಲ್ಲಿ ಸಹ ಕುಲಾಧಿಪತಿ ಎಸ್ಸೆಸ್ಸೆಂ ಭಾಗಿ

Share
  • 70
    Shares

ದಾವಣಗೆರೆ: ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾಲಯದ 7ನೇ ಘಟೀಕೋತ್ಸವದಲ್ಲಿ ತೋಟಗಾರಿಕೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿಗಳೂ, ತೋಟಗಾರಿಕೆ ಸಚಿವರೂ ಆದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್.ಎಸ್.ಮಲ್ಲಿಕಾರ್ಜುನ್ ಅವರು ೩೫ ಸ್ನಾತಕೋತ್ತರ ಪದವೀಧರರು, 21 ಸ್ನಾತಕ ಪದವೀಧರರು ಮತ್ತು ಮೂವರು ಪಿಎಚ್.ಡಿ ಪದವೀಧರರಿಗೆ ಪದವಿ ಪ್ರಮಾಣ ಪತ್ರ, ಚಿನ್ನದ ಪದಕಗಳನ್ನು ವಿತರಿಸಿದರು.
ನಂತರ ಮಾತನಾಡಿದ ಅವರು ದೇಶದ ೭೭ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯಗಳ ಪೈಕಿ ೫೧ ವಿಶ್ವವಿದ್ಯಾಲಯಗಳು ಉನ್ನತ ಸಾಧನೆಗಾಗಿ ಮಾನ್ಯತೆ ಪಡೆದಿದ್ದು, ಇದರಲ್ಲಿ ಬಾಗಲಕೋಟೆ ವಿಶ್ವವಿದ್ಯಾಲಯವೂ ಸಹ ಸೇರಿದೆ ಎಂದರು.
ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ ಮಾಜಿ ಅಧ್ಯಕ್ಷರಾದ ಡಾ|| ಸಿ.ಡಿ.ಮಾಯಿ ಅವರು ಘಟೀಕೋತ್ಸವದ ಭಾಷಣ ಮಾಡಿದರು. ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಡಾ||ಡಿ.ಎಲ್.ಮಹೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ರಿಜಿಸ್ಟ್ರಾರ್ ಡಾ|| ಕೆ.ಎಂ.ಇಂದ್ರೇಶ್ ಮತ್ತಿತರರಿದ್ದರು.

Be the first to comment on "ತೋಟಗಾರಿಕೆ ವಿಶ್ವವಿದ್ಯಾಲಯದ 7ನೇ ಘಟೀಕೋತ್ಸವದಲ್ಲಿ ಸಹ ಕುಲಾಧಿಪತಿ ಎಸ್ಸೆಸ್ಸೆಂ ಭಾಗಿ"

Leave a comment

Your email address will not be published.


*