ತುರ್ಚಘಟ್ಟ ಗ್ರಾಮದಲ್ಲಿ 2 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ||ಶಿವಶಂಕರಪ್ಪ ಚಾಲನೆ

Share
  • 79
    Shares

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ತುರ್ಚಘಟ್ಟ ಗ್ರಾಮದಲ್ಲಿ  ಮಾಜಿಸಚಿವರು, ಹಾಲಿ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ ಅವರು ೧ಕೋಟಿ ರೂ. ಮೊತ್ತದ ಗ್ರಾಮ ವಿಕಾಸ ಯೋಜನೆ ಸೇರಿದಂತೆ ಸುಮಾರು ೨ ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಇಂದು ಬೆಳಿಗ್ಗೆ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಿದ ಶಾಸಕರು ನಂತರ ಮಾತನಾಡಿ ತುರ್ಚಘಟ್ಟ ಗ್ರಾಮವನ್ನು ಮುಖ್ಯಮಂತ್ರಿಗಳ ಗ್ರಾಮ ವಿಕಾಸ ಯೋಜನೆಗೆ ಆಯ್ಕೆ ಮಾಡಿದ್ದು, ಈ ಮೂಲಕ ಗ್ರಾಮದ ಅಭಿವೃದ್ಧಿಗೆ ಇನ್ನಷ್ಟು ಕೊಡುಗೆ ನೀಡಲಾಗಿದೆ ಎಂದರು.


ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಸಿ.ನಿಂಗಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ತುರ್ಚಘಟ್ಟದ ಬಸವರಾಜಪ್ಪ, ತಾಲ್ಲೂಕು ಪಂಚಾಯತ್ ಸದಸ್ಯರಾದ ಮೀನಾ ಶ್ರೀನಿವಾಸ್, ಗ್ರಾಮಪಂಚಾಯತ್ ಅಧ್ಯಕ್ಷರಾದ ಹಾಲಮ್ಮ ದುರುಗಪ್ಪ, ಉಪಾಧ್ಯಕ್ಷರಾದ ಪೂರ್ಣಿಮಾ, ಗ್ರಾಮ ಪಂಚಾಯತ್ ಸದಸ್ಯರುಗಳು, ಮುಖಂಡರುಗಳಾದ ಚನ್ನಬಸಜ್ಜ, ರವಿ, ಸತೀಶ್, ಕಲ್ಲಪ್ಪ, ಬಂಗೇರ ಹನುಮಂತಪ್ಪ, ಬಂಗೇರ ತಿಪ್ಪಣ್ಣ, ಲಕ್ಕಪ್ಪ, ಕಲ್ಲೇಶ್, ಮಹಾಂತೇಶ್, ಪಿಡಿಓ ಸುರೇಖಾ, ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್‍ಯಪಾಲಕ ಅಭಿಯಂತರ ಜಿ.ಪರಮೇಶ್ವರ್, ಕಿರಿಯ ಅಭಿಯಂತರರುಗಳಾದ ಹೆಚ್. ವೆಂಕಟೇಶ್, ಸಿಂಧು ಮತ್ತಿತರರು ಹಾಜರಿದ್ದರು.

Be the first to comment on "ತುರ್ಚಘಟ್ಟ ಗ್ರಾಮದಲ್ಲಿ 2 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ||ಶಿವಶಂಕರಪ್ಪ ಚಾಲನೆ"

Leave a comment

Your email address will not be published.


*