ದಾವಣಗೆರೆಗೆ 24 ಗಂಟೆಯೂ ಶುದ್ಧ ಕುಡಿಯುವ ನೀರು…

Share
  • 630
    Shares

ದಾವಣಗೆರೆ-ದಾವಣಗೆರೆ ನಗರಕ್ಕೆ ದಿನದ 24ಗಂಟೆ ನೀರು ಪೂರೈಸುವ ಉದ್ದೇಶದ ‘ಜಲಸಿರಿ’ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಶನಿವಾರ ಫ್ರಾನ್ಸ್‌ನ ‘ಸುಯೆಜ್’ (ನೀರು ಶುದ್ದೀಕರಣ ಮತ್ತು ತ್ಯಾಜ್ಯ ನಿರ್ವಹಣಾ ಸಂಸ್ಥೆ) ಜತೆಗೆ ಒಪ್ಪಂದವಾಗಿದೆ.
ಭಾರತ-ಫ್ರಾನ್ಸ್‌ನ ವಿವಿದ ಕಂಪನಿಗಳ ಮಧ್ಯೆ 1.04 ಲಕ್ಷ ಕೋಟಿ (16ಬಿಲಿಯನ್ ಡಾಲರ್) ಮೌಲ್ಯದ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು ಅದರಲ್ಲಿ ದಾವಣಗೆರೆ ಕುಡಿಯುವ ನೀರಿನ ಯೋಜನೆಯೂ ಒಳಗೊಂಡಿದೆ.
ಎಡಿಬಿ,ರಾಜ್ಯ ಸರ್ಕಾರ ಮತ್ತು ಅಮೃತ್ ಸಿಟಿ ಯೋಜನೆ ಒಳಗೊಂಡಂತೆ 600 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ. ಇದರ ಅಡಿಯಲ್ಲಿ ನೀರು ಪೂರೈಕೆಗೆ ಸಂಬಂಧಿಸಿದಂತೆ ನಿರ್ಮಾಣ ಮತ್ತು ವಿತರಣೆ ಸಾಲ ಸೃಷ್ಟಿಸಲಾಗುವುದು. ನಗರದಲ್ಲಿ 59 ಕಿ.ಮೀ.ಉದ್ದದ ಮುಖ್ಯ ಪೈಪ್‌ಲೈನ್ ಹಾಗೂ 1162ಕಿ.ಮೀ.ಉದ್ದದ ಉಪ ಮಾರ್ಗಗಳನ್ನು ಹೊಸದಾಗಿ ಮಾಡಲಾಗುವುದು. ಹರಿಹರದ ರಾಜನಹಳ್ಳಿ ಬಳಿ 120ಎಂಎಲ್‌ಡಿ ಸಾಮರ್ಥ್ಯದ ಜಾಕ್‌ವೆಲ್ ಅಭಿವೃದ್ಧಿ ಹಾಗೂ ನಗರದಲ್ಲಿ 19 ಓವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣ ಮಾಡಲಾಗುತ್ತದೆ.ಮಾ.13ರಂದು ನಗರಕ್ಕೆ ಭೇಟಿ ನೀಡಲಿರುವ ಸಿಎಂ ಸಿದ್ದರಾಮಯ್ಯ ಈ ಯೋಜನೆಗೆ ಚಾಲನೆ ನೀಡಲಿದ್ದಾರೆಂದು ತಿಳಿದು ಬಂದಿದೆ

Be the first to comment on "ದಾವಣಗೆರೆಗೆ 24 ಗಂಟೆಯೂ ಶುದ್ಧ ಕುಡಿಯುವ ನೀರು…"

Leave a comment

Your email address will not be published.


*