ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ಮುರುಘಾಶರಣರ ಒತ್ತಾಯ

Share
  • 9
    Shares

ಚಿತ್ರದುರ್ಗ : ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ನೀಡಿರುವ ನ್ಯಾಯಮಾರ್ತಿ ನಾಗಮೋಹನ್‌ದಾಸ್ ನೇತೃತ್ವದ ಸಮಿತಿ ವರದಿಯನ್ನು ಸರ್ಕಾರವು ಒಪ್ಪಿ ತಕ್ಷಣವೇ ಕೇಂದ್ರಕ್ಕೆ ಶಿಫಾರಸು ಮಾಡಬೇಕೆಂದು ಡಾ. ಶಿವಮೂರ್ತಿ ಮುರುಘಾ ಶರಣರು ಒತ್ತಾಯಿಸಿದ್ದಾರೆ.
ಶ್ರೀ ಮುರುಘಾಮಠದ ಅಲ್ಲಮಪ್ರಭು ಸಂಶೋಧನಾ ಕೇಂದ್ರದಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯನ್ನುzಶಿಸಿ ಮಾತನಾಡಿದ ಶ್ರೀಗಳು, ೧೨ನೇ ಶತಮಾನ ಬಸವಾದಿ ಶರಣರು ವೈಚಾರಿಕತೆಯಿಂದ ಹೋರಾಟ ಮಾಡಿದರು. ಸಾಮಾಜಿಕ ಅಸಮಾನತೆಯಿಂದ ಕೂಡಿರುವ ಸಮಾಜ ಪರಿವರ್ತನೆಯಾಗಬೇಕು, ಅದು ನಿಂತ ನೀರಾಗಬಾರದು, ಅಪ್ರಬುದ್ಧತೆ ಇರಬಾರದು ಎಂದು ಅವರು ನಡೆಸಿದ ಜನಮುಖಿ ಪ್ರಯೋಗಗಳು ಇಡೀ ಪ್ರಪಂಚ ಒಪ್ಪಿಕೊಳ್ಳುವಂತೆ ಮಾಡಿದವು.
ನಾಗಮೋಹನ್‌ದಾಸ್ ಅವರ ವರದಿ ಸರ್ಕಾರಕ್ಕೆ ಸಲ್ಲಿಸಿದೆ. ಅದು ಚರ್ಚೆಗೆ ಬಂದಿದೆ. ಮುಂದಿನ ಸಂಪುಟದಲ್ಲಿ ಸರ್ಕಾರ ಒಪ್ಪಿಕೊಳ್ಳುವ ಮೂಲಕ ನ್ಯಾಯ ಒದಗಿಸಬೇಕು. ಇಲ್ಲಿ ಯಾವ ಪ್ರತಿಷ್ಟೆಗಳನ್ನು ಮುಂದೆ ಮಾಡಿ ಹೋರಾಟ ಹತ್ತಿಕ್ಕಬಾರದು. ದೋಷಾರೋಪವನ್ನು ಬಿಟ್ಟು ಭಿನ್ನಾಭಿಪ್ರಾಯಗಳನ್ನು ಬಿಟ್ಟು ಕೇಂದ್ರಕ್ಕೆ ಧರ್ಮ ಮಾನ್ಯತೆಗಾಗಿ ಒಮ್ಮತಾಭಿಪ್ರಾಯ ಬರಬೇಕು. ಇಲ್ಲಿ ಯಾರೂ ರಾಜಕೀಯ ಮಾಡಬಾರದು. ಯಾರೂ ರಾಜಿನಾಮೆ ಕೊಡಬಾರದು. ಒಳ್ಳೆಯ ಯೋಚನೆ ಮಾಡಬೇಕು. ರಾಜೀನಾಮೆ ಸಲ್ಲಿಸುವುದರ ಮೂಲಕ ಏನೋ ಆಗುತ್ತದೆ ಎಂಬುದು ಬೇಡ. ಎಲ್ಲರೂ ಒಗ್ಗಟ್ಟಿನಿಂದ ಒಳ್ಳೆಯ ಅಭಿಪ್ರಾಯಕ್ಕೆ ಬರಬೇಕು. ಮುಖ್ಯಮಂತ್ರಿಗಳು ದಿಟ್ಟ ನಿಲುವನ್ನು ತೆಗೆದುಕೊಳ್ಳಬೇಕು. ಈ ಸಮಸ್ಯೆಯನ್ನು ಬಗೆಹರಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು. ರಾಜಿನಾಮೆಯ ರಾಜಕೀಯ ಯಾರೂ ಮಾಡಬಾರದು. ಕೆಲವೇ ತಿಂಗಳಲ್ಲಿ ಚುನಾವಣೆ ಘೋಷಣೆ ಆಗಲಿರುವುದರಿಂದ ಒಕ್ಕೊರಲಿನ ಧ್ವನಿ ಇಲ್ಲಿ ಮೂಡಬೇಕು. ಬಸವಾದಿ ಶರಣರಿಗೆ ಗೌರವ ಸಲ್ಲಿಸಬೇಕು. ನಾವು ನೀವುಗಳು ನಿರೀಕ್ಷೆ ಮಾಡಿದಂತಹ ಸಂದರ್ಭಕ್ಕೆ ನ್ಯಾಯ ಕೊಟ್ಟಂತಾಗುತ್ತದೆ ಎಂದಿದ್ದಾರೆ.

Be the first to comment on "ಲಿಂಗಾಯತ ಪ್ರತ್ಯೇಕ ಧರ್ಮವೆಂದು ಪರಿಗಣಿಸುವಂತೆ ಮುರುಘಾಶರಣರ ಒತ್ತಾಯ"

Leave a comment

Your email address will not be published.


*