ಪಟ್ಟಸಾಲಿ ನೇಕಾರ ಸಮಾಜದಿಂದ ಸಚಿವರಿಗೆ ಅಭಿನಂದನೆ

Share
  • 45
    Shares

ದಾವಣಗೆರೆ : ನಗರದಲ್ಲಿ ಶ್ರೀ ಪಟ್ಟಸಾಲಿ ನೇಕಾರ ಸಮಾಜಕ್ಕೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನವನ್ನು ರಿಯಾಯಿತಿ ದರದಲ್ಲಿ ಮಂಜೂರು ಮಾಡಿಸಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ದಾವಣಗೆರೆ ಶ್ರೀ ಪಟ್ಟಸಾಲಿ ನೇಕಾರ ಸಮಾಜದಿಂದ ಅಭಿನಂದಿಸಲಾಯಿತು. ದಾವಣಗೆರೆ ಶ್ರೀ ಪಟ್ಟಸಾಲಿ ನೇಕಾರ ಸಮಾಜಕ್ಕೆ ದಾವಣಗೆರೆ- ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಮಂಜೂರಾಗಿದ್ದು, ನಿನ್ನೆ ಸಚಿವ ಸಂಪುಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಶಿಫಾರಸ್ಸಿನ ಮೇರೆಗೆ ಮಾನ್ಯ ಮುಖ್ಯಮಂತ್ರಿಗಳು ರಿಯಾಯಿತಿ ದರದಲ್ಲಿ ನಿವೇಶನವನ್ನು ಮಂಜೂರಾತಿಗೆ ಒಪ್ಪಿಗೆ ಸೂಚಿಸಿದ್ದರಿಂದ ದಾವಣಗೆರೆ ಶ್ರೀ ಪಟ್ಟಸಾಲಿ ನೇಕಾರ ಸಮಾಜದವರು ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದಾವಣಗೆರೆ ಶ್ರೀ ಪಟ್ಟಸಾಲಿ ನೇಕಾರ ಸಮಾಜದ ಅಧ್ಯಕ್ಷ ಡಿ.ಸಿ. ಶ್ರೀನಿವಾಸ ಚಿನ್ನಿಕಟ್ಟಿ, ಉಪಾಧ್ಯಕ್ಷ ನಾಗರಾಜ್ ರಾಂಪುರ, ಕಾರ್ಯದರ್ಶಿ ಕೃಷ್ಣಪ್ಪ, ಖಜಾಂಚಿ ಲಿಂಗರಾಜ್, ಹನುಮಂತಪ್ಪ ಗುತ್ತಲ, ಮಮತಾ, ನಾಗರತ್ನಮ್ಮ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಪಟ್ಟಸಾಲಿ ನೇಕಾರ ಸಮಾಜದಿಂದ ಸಚಿವರಿಗೆ ಅಭಿನಂದನೆ"

Leave a comment

Your email address will not be published.


*