ಗರ್ಭಗುಡಿ ಸಂಸ್ಕೃತಿ ಇರುವಲ್ಲಿ ಮಡಿವಂತಿಕೆ ಜೀವಂತಿಕೆಯಾಗಿರುತ್ತದೆ-ಮುರುಘಾ ಶರಣರು

Share
  • 8
    Shares

ಹರಪನಹಳ್ಳಿ: ಅಚಾರವಂತರೂ ಬಸವಣ್ಣ ಪ್ರಯೋಗಶೀಲತೆಯನ್ನು ಅಜ್ಞಾನದಿಂದ ಮೂಲೆಗುಂಪು ಮಾಡಿದರು. ಪ್ರಜ್ಞಾವಂತರೆನಿಸಿ ಕೊಂಡವರು ಕೂಡ ಪ್ರಯೋಗಶೀಲತೆಯ ಸ್ಪರ್ಶ ಮಾಡುತ್ತಿಲ್ಲ. ಪುಸ್ತಕ, ಬರೆಯುತ್ತಾರೆ ಆದರೆ ಪ್ರಯೋಗಶೀಲತೆ ಮರೆಯುತ್ತಿದ್ದಾರೆ ಎಂದು ಚಿತ್ರದುರ್ಗ ಮುರುಘಾ ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.
ಪಟ್ಟಣದ ಪೃಥ್ವಿ ರಂಗ ಶಾಲೆಯಲ್ಲಿ ಶನಿವಾರ ಶರಣರ ಚಾವಡಿ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಕೆಲವೊಂದು ದೇವಸ್ಥಾನಗಳಲ್ಲಿ ಮನುಷ್ಯರನ್ನು ಅರೆಬೆತ್ತಲೆಗೊಳಿಸುವ ಮೂಲಕ ಅಸ್ಪೃಶ್ಯತೆ ಕಾಣಬಹುದಾಗಿದೆ. ಗರ್ಭಗುಡಿ ಸಂಸ್ಕೃತಿ ಇದೆಯೋ ಅಲ್ಲಿ ಮಡಿವಂತಿಕೆ ಜೀವಂತಿಕೆಯಾಗಿರುತ್ತದೆ. ಆಚಾರ ಎಂದಕ್ಷಣವೇ ಅಲ್ಲಿ ಮಡಿವಂತಕೆ ಇರುತ್ತದೆ. ಮಡಿವಂತಿಕೆಯಲ್ಲಿ ಯಾವುದನ್ನು ಆಚರಿಸಬೇಕು, ಬೇಡ ಎನ್ನುವ ವಿವೇಚನೆಯೂ ಕೂಡ ಇರುವುದಿಲ್ಲ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನವದೆಹಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕಲಾ ಮತ್ತು ಸೌಂದರ್ಯಶಾಸ್ತ್ರ ಮುಖ್ಯಸ್ಥ ಡಾ.ಎಚ್.ಎಸ್.ಶಿವಪ್ರಕಾಶ್ ಮಾತನಾಡಿ, ಜಗತ್ತಿನಲ್ಲಿ ದೊಡ್ಡ ಕೆಲಸಗಳು ಸಣ್ಣದಾಗಿ ಶುರುವಾಗುತ್ತವೆ. ಶರಣರ ಚಾವಡಿಯೂ ಕೂಡ ದೊಡ್ಡ ಮಟ್ಟದಲ್ಲಿ ಚಿಂತನೆ, ತತ್ವಗಳನ್ನು ಮುಟ್ಟಿಸುವಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ಪಾತ್ರವಹಿಸಲಿದೆ ಎಂದು ಹೇಳಿದರು.
ದಾವಣಗೆರೆ ವಿರಕ್ತಮಠ ಬಸವಪ್ರಭು ಸ್ವಾಮೀಜಿ ಮಾತನಾಡಿ, ೧೨ನೇ ಶತಮಾನದಂತೆ ಅಧುನಿಕ ಯುಗದಲ್ಲಿಯೂ ಹಿಂದುಳಿದ ಸಮುದಾಯಗಳಿಗೆ ಗುರುಗಳನ್ನು ನೀಡುವ ಮೂಲಕ ಹಿಂದುಳಿದ ಸಮಾಜಗಳಿಗೆ ಗುರು ಮತ್ತು ಗುರಿಯನ್ನು ಮುರುಘಾ ಶರಣರು ತೋರಿದ್ದಾರೆ ಎಂದರು. ಕೆಪಿಸಿಸಿ ಸದಸ್ಯ ಕೋಡಿಹಳ್ಳಿ ಭೀಮಪ್ಪ ಮಾತನಾಡಿದರು.
ಮಲ್ಲೂರಹಟ್ಟಿ ತಿಪ್ಪೇರುದ್ರ ಮಠದ ತಿಪ್ಪೇರುದ್ರ ಸ್ವಾಮೀಜಿ, ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್, ರಂಗಕರ್ಮಿ ಬಿ.ಪರ ಶುರಾಮ ಮಾತನಾಡಿದರು. ವೀರಶೈವ ಮಹಾಸಭಾದ ಅಧ್ಯಕ್ಷ ಎಂ.ರಾಜಶೇಖರ್, ಸಹಕಾರಿ ಬ್ಯಾಂಕ್ ರಾಜ್ಯ ನಿರ್ದೇಶಕ ಜಿ.ನಂಜನಗೌಡ, ಮುಖಂಡರಾದ ವೈ.ದೇವೇಂದ್ರಪ್ಪ, ರಂಗಕರ್ಮಿ ಪೂಜಾರ ಚಂದ್ರಪ್ಪ, ಯರಬಳ್ಳಿ ಉಮಾಪತಿ, ಪುಣಬಗಟ್ಟಿ ನಿಂಗಪ್ಪ, ಅಲ್ಮರಸೀಕೆರೆ ರಾಜಪ್ಪ, ಈಶ್ವರನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Be the first to comment on "ಗರ್ಭಗುಡಿ ಸಂಸ್ಕೃತಿ ಇರುವಲ್ಲಿ ಮಡಿವಂತಿಕೆ ಜೀವಂತಿಕೆಯಾಗಿರುತ್ತದೆ-ಮುರುಘಾ ಶರಣರು"

Leave a comment

Your email address will not be published.


*