ದಾವಣಗೆರೆಯಲ್ಲಿ ಮಾ.13 ರಂದು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ

Share
  • 157
    Shares

ದಾವಣಗೆರೆ -ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯ ಇವರು ಮಾ.13 ರಂದು ದಾವಣಗೆರೆಯಲ್ಲಿ ಕೈಗೊಳ್ಳಲಿರುವ ಪ್ರವಾಸ ಕಾರ್ಯಕ್ರಮದ ವಿವರ ಇಂತಿದೆ.
ಮಾ. 13 ರ ಮಧ್ಯಾಹ್ನ 1.50 ಕ್ಕೆ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹುಲಿಹಳ್ಳಿ ಕ್ರಾಸ್ ಹೆಲಿಪ್ಯಾಡಿನಿಂದ ಹೆಲಿಕ್ಯಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 2.10 ಕ್ಕೆ ದಾವಣಗೆರೆಯ ಎಂಬಿಎ ಕಾಲೇಜು ಮೈದಾನದಲ್ಲಿರುವ ಹೆಲಿಪ್ಯಾಡ್ ತಲುಪುವರು. ನಂತರ ಮಧ್ಯಾಹ್ನ 2.3೦ ಕ್ಕೆ ನಗರದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ ದಾವಣಗೆರೆ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಸಂಜೆ 4.30ಕ್ಕೆ ಕ್ಕೆ ಎಂಬಿಎ ಕಾಲೇಜು ಮೈದಾನ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣವನ್ನು ತಲುಪಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

Be the first to comment on "ದಾವಣಗೆರೆಯಲ್ಲಿ ಮಾ.13 ರಂದು ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮ"

Leave a comment

Your email address will not be published.


*