ದಾವಣಗೆರೆಯ ನೂತನ ಎಸ್‌ಪಿಯಾಗಿ ಆರ್.ಚೇತನ್  ನೇಮಕ

Share
  • 127
    Shares

 ದಾವಣಗೆರೆ- ಎಸ್‌ಪಿ ಆರ್.ಚೇತನ್ ಅವರು ದಾವಣಗೆರೆ ಜಿಲ್ಲೆಯ ಎಸ್‌ಪಿ ಸ್ಥಾನಕ್ಕೆ ನೇಮಕಗೊಂಡು ವರ್ಗಾವಣೆಯಾಗಿದ್ದಾರೆ. ಈ ಕುರಿತು ರಾಜ್ಯ ಸರ್ಕಾರದ ಸಿಬ್ಬಂದಿ ಹಾಗೂ ಆಡಳಿತ ಸುಧಾರಣಾ ಇಲಾಖೆಯ ಆಧೀನ ಕಾರ್ಯದರ್ಶಿ ಎಸ್.ಆರ್.ಬಸವರಾಜಯ್ಯ ಅವರು ಆರ್.ಚೇತನ್ ಅವರ ವರ್ಗಾವಣೆ ಕುರಿತು ಅಧಿಸೂಚನೆ ಹೊರಡಿಸಿ, ದಾವಣಗೆರೆ ಜಿಲ್ಲೆಯ ಎಸ್‌ಪಿಯಾಗಿ ಕೂಡಲೇ ಅಧಿಕಾರ ವಹಿಸಿ ಕಾರ್ಯನಿರ್ವಹಿಸುವಂತೆ ರಾಜ್ಯಪಾಲರ ಪರವಾಗಿ ಸೂಚನೆ ನೀಡಿದ್ದಾರೆ.

ಆರ್.ಚೇತನ್2010ರ ಐಪಿಎಸ್ ಬ್ಯಾಚ್‌ನ ಅಧಿಕಾರಿ. 2015ರ ಮೇ.1ರಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಿದ್ದರು.ಇದೇ ವೇಳೆ, ದಾವಣಗೆರೆ ಎಸ್‌ಪಿ ಆಗಿದ್ದ ಡಾ.ಬೀಮಾಶಂಕರ್ ಗುಳೇದ್ ಅವರು ಬೆಂಗಳೂರು ಗ್ರಾಮಾಂತರ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ.

Be the first to comment on "ದಾವಣಗೆರೆಯ ನೂತನ ಎಸ್‌ಪಿಯಾಗಿ ಆರ್.ಚೇತನ್  ನೇಮಕ"

Leave a comment

Your email address will not be published.


*