ದಾವಣಗೆರೆ ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ- ಜಿಲ್ಲಾಧಿಕಾರಿ ರಮೇಶ್

Share
  • 100
    Shares

ದಾವಣಗೆರೆ- ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018 ರ ವೇಳಾಪಟ್ಟಿಯನ್ನು ಚುನಾವಣಾ ಆಯೋಗ ಇಂದು ಪ್ರಕಟಿಸಿದ್ದು, ವೇಳಾಪಟ್ಟಿಯಂತೆ ಮೇ.12 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಮೇ.೧೫ ಕ್ಕೆ ಮತಗಳ ಎಣಿಕೆ ಕಾರ್ಯ ನಡೆಯಲಿದ್ದು ಮೇ.೧೮ ಕ್ಕೆ ಚುನಾವಣೆ ಪ್ರಕ್ರಿಯೆಗಳು ಮುಗಿಯಲಿವೆ ಎಂದು ಜಿಲ್ಲಾಧಿಕಾರಿ ಡಿ.ಎಸ್ ರಮೇಶ್ ಅವರು ಹೇಳಿದರು.
ಇಂದು ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿನಿಂದಲೇ(ಮಾರ್ಚ್ ೨೭) ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿದೆ. ಏಪ್ರಿಲ್ ೧೭ ರಿಂದ ಏಪ್ರಿಲ್ ೨೪ ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಹಾಗೂ ಏಪ್ರಿಲ್ ೨೫ ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುವುದು. ಏಪ್ರಿಲ್ ೨೭ ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ ಎಂದರು.

ಜಿಲ್ಲೆಯಲ್ಲಿ ಒಟ್ಟು ಮತದಾರರು 16,03,722
ಪುರುಷ ಮತದಾರರು 8,11,692
ಮಹಿಳಾ ಮತದಾರರು 7,92,30
ವಿಶೇಷ ಚೇತನ ಮತದಾರರು 12,875
ಒಟ್ಟು ಮತಗಟ್ಟೆಗಳು 1,946
ಬ್ಯಾಲೆಟ್ ಯುನಿಟ್ 2,968
ಕಂಟ್ರೋಲ್ ಯುನಿಟ್ 2,498
ವಿವಿ ಪ್ಯಾಟ್ 2,417
ಫ್ಲೈಯಿಂಗ್ ಸ್ಕ್ವಾಡ್ ತಂಡಗಳು 24
ಚೆಕ್ ಪೋಸ್ಟ್‌ಗಳು 47
ಮತಗಟ್ಟೆವಾರು ಜಾಗೃತಿ ಸಮಿತಿ 1946
ಚುನಾವಣಾ ದೂರು ನಿರ್ವಹಣಾ ಹಾಗೂ
ನಿಯಂತ್ರಣ ಕೇಂದ್ರದ ಸಹಾಯವಾಣಿ:1077  ಮತ್ತು ದೂರವಾಣಿ ಸಂಖ್ಯೆ: 234034

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿನ ಸರ್ಕಾರಿ, ಸಾರ್ವಜನಿಕ, ವೈಯಕ್ತಿಕ ಸ್ಥಳಗಳಲ್ಲಿ ರಾಜಕೀಯ ಪಕ್ಷಗಳ, ಪ್ರತಿನಿಧಿಗಳ ಮುಖ ಚಹರೆಗಳನ್ನು ತೆಗೆಯಲು ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ ಎಂದರು. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರ್ಕಾರಿ ವಾಹನಗಳನ್ನು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ನೀಡಿದ ವಾಹನಗಳನ್ನು ವಾಪಸ್ಸು ಪಡೆಯಲು ಆದೇಶ ಹೊರಡಿಸಲಾಗಿದೆ.
ಜಿಲ್ಲೆಯಲ್ಲಿ ೧೬ ಲಕ್ಷ ಮತದಾರರು ನೋಂದಾಯಿಸಿ ಕೊಂಡಿದ್ದು, ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ೮ ವಿಧಾನಸಭಾ ಕ್ಷೇತ್ರಗಳಿವೆ. ೧,೯೦೪ ಮತಗಟ್ಟೆಗಳಿದ್ದು, ಹೆಚ್ಚುವರಿ ೪೨ ಮತಗಟ್ಟೆಗಳನ್ನೊಳಗೊಂಡಂತೆ ೧,೯೪೬ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
೧೨,೫೦೦ ಮತಗಟ್ಟೆ ಅಧಿಕಾರಿಗಳು ಕರ್ತವ್ಯ ನಿರ್ವಹಿಸಲಿದ್ದಾರೆ. ಎಲ್ಲ ಮತಗಟ್ಟೆಗಳ ಜಿಯೋ ಕೋಆರ್ಡಿನೇಟ್ಸ್‌ಅನ್ನು ಶೇಖರಿಸಲಾಗಿದ್ದು ತಂತ್ರಾಂಶದಲ್ಲಿ ಸಂಗ್ರಹಿಸಲಾಗಿದೆ. ಅಲ್ಲದೇ ಪ್ರತಿ ಮತಗಟ್ಟೆಯ ಡಿಜಿಟಲ್ ಮ್ಯಾಪ್, ಕೀ ಮ್ಯಾಪ್, ಸೆಟ್‌ಲೈಟ್ ಮ್ಯಾಪ್ ಹಾಗೂ ನಕ್ಷೆಗಳನ್ನು ಸಿದ್ಧಪಡಿಸಲಾಗಿದೆ.
ಮೊದಲನೇ ಹಂತದಲ್ಲಿ ಇವಿಎಂ ಮತ್ತು ವಿವಿ ಪ್ಯಾಟ್‌ಗಳ ಪರಿಶೀಲನೆ ಕಾರ್ಯ ಅಂತಿಮ ಹಂತದಲ್ಲಿದ್ದು, ಸದ್ಯದಲ್ಲಿಯೇ ಸಾರ್ವಜನಿಕರಿಗೆ ಹಾಗೂ ಮಾಧ್ಯಮದವರಿಗೆ, ರಾಜಕೀಯ ಪಕ್ಷ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆ ನೀಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಚುನಾವಣಾ ತಹಶೀಲ್ದಾರ್ ಸಂತೋಷ್ ಕುಮಾರ್ ಉಪಸ್ಥಿತರಿದ್ದರು.

Be the first to comment on "ದಾವಣಗೆರೆ ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ- ಜಿಲ್ಲಾಧಿಕಾರಿ ರಮೇಶ್"

Leave a comment

Your email address will not be published.


*