ರಾಜ್ಯದ ಅತ್ಯುನ್ನತ ಏಕಲವ್ಯ ಕ್ರೀಡಾ ಪ್ರಶಸ್ತಿ ಸಿದ್ಧಗಂಗೆಯ ಈಜು ಬಾಲೆ ರೇವತಿ ನಾಯಕಳ ಮಡಿಲಿಗೆ

Share
  • 273
    Shares

ದಾವಣಗೆರೆ-ಕರ್ನಾಟಕ ಸರ್ಕಾರವು ಕ್ರೀಡಾಕ್ಷೇತ್ರದಲ್ಲಿ ಮಹೋನ್ನತವಾದಗಣನೀಯ ಸಾಧನೆಗೈದಕ್ರೀಡಾ ಪಟುಗಳಿಗೆ ರಾಜ್ಯದಅತ್ಯುನ್ನತಕ್ರೀಡಾ ಪ್ರಶಸ್ತಿಯಾದ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಿ ಪುರಸ್ಕರಿಸುತ್ತದೆ. ಈ ಬಾರಿರಾಜ್ಯದ 13 ಕ್ರೀಡಾಪಟುಗಳಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ದಾವಣಗೆರೆಜಿಲ್ಲೆಯ ಸಿದ್ಧಗಂಗಾ ಪದವಿ ಪೂರ್ವಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವಅಂತರಾಷ್ಟ್ರೀಯಈಜುಪಟುರೇವತಿ ನಾಯಕ ಏಕಲವ್ಯ ಪ್ರಶಸ್ತಿ ಪಡೆದು ಸಂಸ್ಥೆಗೆ, ಜಿಲ್ಲೆಗೆಕೀರ್ತಿ ತಂದಿದ್ದಾಳೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿರೇವತಿಗೆ ಈ ಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಮಹಿಳೆಯರ ಸಂತಸ ಇಮ್ಮಡಿಗೊಳಿಸಿದೆ.


ತಂದೆ ಹುಚ್ಚವ್ವನಹಳ್ಳಿ ಮಂಜುನಾಥ್ ಮತ್ತುತಾಯಿ ಸುನಂದ ಹಾಗೂ ಬಂಧುಗಳು ರೇವತಿಯುತನ್ನಜೀವಮಾನದ ಸಾಧನೆಗಾಗಿ ಪಡೆದ ಏಕಲವ್ಯ ಪ್ರಶಸ್ತಿ ಸಮಾರಂಭವನ್ನು ಕಣ್ತುಂಬಿಸಿಕೊಂಡರು.

ದಾವಣಗೆರೆಯ ಸಿದ್ಧಗಂಗಾ ಸಂಸ್ಥೆಯಲ್ಲಿರೇವತಿ ನಾಯಕಳನ್ನು ಸಹಪಾಠಿಗಳು ಮತ್ತು ಹಿರಿ ಕಿರಿಯ ವಿದ್ಯಾರ್ಥಿಗಳು, ಬೋಧಕ, ಬೋಧಕೇತರ ಸಿಬ್ಬಂದಿಯವರು ಅಭಿಮಾನಪೂರ್ವಕವಾಗಿ ಸ್ವಾಗತಿಸಿದರು. ಏಕಲವ್ಯ ಪ್ರಶಸ್ತಿಯ ಕಂಚಿನ ಪ್ರತಿಮೆ ನೋಡಿ ಪುಳಕಿತಗೊಂಡರು. ಸಿದ್ಧಗಂಗೆಯ ಇತಿಹಾಸದಲ್ಲಿ ಮೇರು ಸಾಧನೆ ಮಾಡಿದರೇವತಿಯನ್ನು ಪ್ರಾಚಾರ್ಯರಾದ ಪ್ರಸಾದ್ ಬಂಗೇರ ಮತ್ತು ಮುಖ್ಯ ಶಿಕ್ಷಕಿ ಜಸ್ಟಿನ್ ಡಿಸೋಜರವರು ಸನ್ಮಾನಿಸಿದರು.

Be the first to comment on "ರಾಜ್ಯದ ಅತ್ಯುನ್ನತ ಏಕಲವ್ಯ ಕ್ರೀಡಾ ಪ್ರಶಸ್ತಿ ಸಿದ್ಧಗಂಗೆಯ ಈಜು ಬಾಲೆ ರೇವತಿ ನಾಯಕಳ ಮಡಿಲಿಗೆ"

Leave a comment

Your email address will not be published.


*