ಕಲಾನಿಕೇತನ ಕಾಲೇಜು ವತಿಯಿಂದ ‘ಕಲಾ ಕೃತಿಕಾ 2018’ ಫ್ಯಾಷನ್‌ಶೋ

Share
  • 16
    Shares

ದಾವಣಗೆರೆ : ನಗರದ ಕಲಾನಿಕೇತನ ಕಾಲೇಜು ಮತ್ತು ವಿಜಯ ಕರ್ನಾಟಕ ಸಹಯೋಗದಲ್ಲಿ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಕಲಾ ಕೃತಿಕಾ 2018’ ಫ್ಯಾಷನ್ ಶೋ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರೇ ಅಷ್ಟೇ ಅಲ್ಲ, ಚಿಣ್ಣರು ಕೂಡ ರ್‍ಯಾಂಪ್ ಮೇಲೆ ಕ್ಯಾಟ್ ವಾಕ್ ಮಾಡಿ ಒಂದು ಫ್ಲಯಿಂಗ್ ಕಿಸ್ ಎಸೆದು ನೋಡುಗರಲ್ಲಿ ಕಿಚ್ಚು ಹಚ್ಚಿದರು. ಈ ಪುಟಾಣಿಗಳು ಮಾರ್ಜಾಲ ನಡಿಗೆಯಲ್ಲಿ ರ್‍ಯಾಂಪ್‌ನ ತುದಿಗೆ ಬಂದು ಪೋಜ್ ಕೊಟ್ಟು, ಕಿಸ್ ಬಿಸಾಕಿದಾಗ ಜನತೆ ಕೂಡ ಕೇಕೆ, ಚಪ್ಪಾಳೆ ತಟ್ಟಿ ಖುಷಿ ಪಟ್ಟರು.


ವಿದ್ಯಾರ್ಥಿನಿಯರು ಡ್ರೆಸ್, ಹೇರ್‌ಸ್ಟೈಲ್, ನಡಿಗೆ ಹೀಗೆ ಫ್ಯಾಷನ್‌ನ ಒಟ್ಟು ಅಂದಕ್ಕೆ ಒತ್ತು ಕೊಟ್ಟು ಶೋನಲ್ಲಿ ಪಾಲ್ಗೊಂಡಿದ್ದರೆ, ವಿದ್ಯಾರ್ಥಿಗಳು ಕೂಡ ಸಾಂಪ್ರದಾಯಿಕ ಡ್ರೆಸ್‌ನ ಜತೆ ಹೊಸ ವಿನ್ಯಾಸದ ಶರ್ಟ್‌ಗಳನ್ನು ತೊಟ್ಟು, ಇಂದಿನ ಟ್ರೆಂಡ್‌ಸೆಟ್ಟಾದ ಫಂಕ್ ಹೇರ್ ಕಟಿಂಗ್, ದಾಡಿಯ ಮೂಲಕವೂ ಗಮನ ಸೆಳೆದರು. ವೆಸ್ಟರ್ನ್ ವೇರ್, ಕ್ಯೂಟಿ ಪೀ, ಮಡ್ ಆಡ್ ಹೀಗೆ ನಾನಾ ವಿಭಾಗದಲ್ಲಿ ಮಿಸ್ಟರ್ ಕ್ಯಾಂಪಸ್, ಮಿಸ್ ಕ್ಯಾಂಪಸ್ ಆಯ್ಕೆ ನಡೆಯಿತು. ಫ್ಯಾಷನ್ ಶೋ ಮಧ್ಯೆ ನೃತ್ಯ ಸ್ಪರ್ಧೆಯೂ ನಡೆಯಿತು. ಚೈತ್ರಾ ಗ್ರೂಪ್, ಶ್ರೇಯಾ, ಅಕ್ಷಿತಾ, ವಿಜಯ್ ಸೋಲೋ, ಅರ್ಪಿತಾ, ಅಕ್ಷಿತಾ, ಮಧು ಸೋಲೋ ಗ್ರೂಪ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಹೆಜ್ಜೆ ಹಾಕಿದರು.


ಮೇಯರ್ ಅನಿತಾಬಾಯಿ ಮಾತನಾಡಿ, ನಾನೂ ಚಿಕ್ಕ ಹುಡುಗಿಯಿಂದ ಫ್ಯಾಷನ್ ಮಾಡಿದ್ದೇನೆ, ಆದರೆ ಇಷ್ಟೊಂದು ಅಲ್ಲ, ಇದನ್ನು ನೋಡಿದರೆ ನನಗೆ ತುಂಭಾ ಖುಷಿ ಆಯಿತು. ಒಮ್ಮೆ ಇದೇ ಕಾಲೇಜಿಗೆ ಫ್ಯಾಷನ್ ಡಿಸೈನಿಂಗ್ ಕಲಿಯಲು ಹೋಗಿದ್ದೆ, ಶೈಕ್ಷಣಿಕ ಕಾರಣದಿಂದ ಕಲಿಯಲು ಆಗಲಿಲ್ಲ.ಮೇಯರ್ ಆದನಂತರ ಬೆಳಗ್ಗೆ ಒಂದಲ್ಲ ಒಂದು ಕಾರ್ಯಕ್ರಮಕ್ಕೆ ಹೋಗಬೇಕು, ಆಗ ಡ್ರೆಸ್ ಬಗ್ಗೆ ಎಚ್ಚರ ವಹಿಸುತ್ತೇನೆ, ಹತ್ತಾರು ಸೀರೆಗಳ ಹೊರ ತೆಗೆದು ಹುಡುಕಾಡಿ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದರು.
ಅಕಾಡೆಮಿ ಆಫ್ ಕ್ರಿಯೇಟಿವ್ ಎಜುಕೇಷನ್ ಕಾರ್ಯದರ್ಶಿ ಅಶೋಕ ರಾಯಭಾಗಿ,ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸದಾನಂದ ಹೆಗಡೆ , ಕಲಾ ನಿಕೇತನ ಕಾಲೇಜಿನ ಪ್ರಾಚಾರ್ಯ ಕೆ.ಎಸ್.ಜಗದೀಶ್, ಎಸ್‌ಎಸ್‌ಐಎಂ ಪ್ರೊಫೆಸರ್ ಜಯಸಿಂಹ ಇತರರು ಇದ್ದರು.

Be the first to comment on "ಕಲಾನಿಕೇತನ ಕಾಲೇಜು ವತಿಯಿಂದ ‘ಕಲಾ ಕೃತಿಕಾ 2018’ ಫ್ಯಾಷನ್‌ಶೋ"

Leave a comment

Your email address will not be published.


*