ಹೊಸಪೇಟೆ-ಕೊಟ್ಟೂರು-ದಾವಣಗೆರೆ ರೈಲು ಸಂಚಾರಕ್ಕೆ ಒಪ್ಪಿಗೆ

Share
  • 154
    Shares

ಜೂನ್ ತಿಂಗಳಿನಲ್ಲಿ ರೈಲು ಸಂಚಾರ

ಬಳ್ಳಾರಿ-ಹೊಸಪೇಟೆ-ಕೊಟ್ಟೂರು-ದಾವಣಗೆರೆ ಭಾಗದ ಜನರ ಬಹು ವರ್ಷಗಳ ಬೇಡಿಕೆ ಈಡೇರಿದೆ. ಈ ಮಾರ್ಗದಲ್ಲಿ ರೈಲು ಸಂಚಾರ ನಡೆಸಲು ನೈರುತ್ಯ ರೈಲ್ವೆ ಹಸಿರು ನಿಶಾನೆ ತೋರಿದೆ. ನೈರುತ್ಯ ರೈಲ್ವೆ ವಲಯದ ಉಪ ಪ್ರಾದೇಶಿಕ ವ್ಯವಸ್ಥಾಪಕ ರಾಜೀಶ್ ಮೋಹನ್ ಹಗರಿಬೊಮ್ಮನಹಳ್ಳಿಯಲ್ಲಿ ಬುಧವಾರ ಮಾಧ್ಯಮಗಳ ಜೊತೆ ಮಾತನಾಡಿದರು. ‘ಹೊಸಪೇಟೆ-ಕೊಟ್ಟೂರು-ದಾವಣಗೆರೆ ಮಾರ್ಗದಲ್ಲಿ ಜೂನ್ ತಿಂಗಳಿನಲ್ಲಿ ರೈಲು ಸಂಚಾರ ಆರಂಭವಾಗಲಿದೆ’ ಎಂದರು. ಆಲಮಟ್ಟಿ-ಚಿತ್ರದುರ್ಗ ನೂತನ ರೈಲು ಮಾರ್ಗಕ್ಕೆ ಕೇಂದ್ರದ ಒಪ್ಪಿಗೆ ‘ರೈಲ್ವೆ ಮಾರ್ಗದಲ್ಲಿ ತಾಂತ್ರಿಕ ಪರೀಕ್ಷೆ ನಡೆಸಲಾಗುತ್ತಿದೆ. ತಾಂತ್ರಿಕವಾಗಿ ಮಾರ್ಗವು ಪ್ರಯಾಣಿಕರ ಸಂಚಾರಕ್ಕೆ ಸುರಕ್ಷಿತವಾಗಿದೆ. ಕೇಂದ್ರದ ಅಧಿಕಾರಿಗಳಿಗೆ ವರದಿ ಸಲ್ಲಿಸಿ, ರೈಲು ಸಂಚಾರಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ’ ಎಂದು ಹೇಳಿದರು. ‘

ಮರಿಯಮ್ಮನಹಳ್ಳಿ-ಕೊಟ್ಟೂರು ಮಾರ್ಗದಲ್ಲಿಯ ೩೫ ರೈಲ್ವೆ ಗೇಟ್‌ಗಳಲ್ಲಿ ಖಾಯಂ ನೌಕರರನ್ನು ನೇಮಕ ಮಾಡಬೇಕಿದೆ. ಎಲ್ಲಾ ರೈಲ್ವೆ ನಿಲ್ದಾಣಗಳಲ್ಲಿ ಕುಡಿಯುವ ನೀರು, ವಿಶ್ರಾಂತ್ರಿ ಗೃಹ, ಶೌಚಾಲಯ ಹೀಗೆ ಇನ್ನಿತರ ಮೂಲ ಸೌಕರ್ಯಕಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ’ ಎಂದರು.
ಪ್ರಯಾಣಿಕರ ಸಮಸ್ಯೆಗೆ ಪರಿಹಾರ: ರೈಲಿನಲ್ಲಿ ಶೀಘ್ರ ಸರ್ವೀಸ್ ಕ್ಯಾಪ್ಟನ್ ಗೂಡ್ಸ್ ರೈಲನ್ನು ಹೊಸಪೇಟೆಯಿಂದ ಹರಿಹರಕ್ಕೆ ಮಾತ್ರ ಓಡಿಸಲಾಗುತ್ತಿದೆ. ನಮ್ಮ ಭಾಗದಿಂದ ಮೆಕ್ಕೆಜೋಳ, ಜೋಳ, ರಾಗಿ, ತೊಗರಿ ಬೇಳೆ, ಭತ್ತ, ಅಲಸಂದೆ, ಮೆಣಸಿನಕಾಯಿ ಹೀಗೆ ಹತ್ತಾರು ಧಾನ್ಯಗಳನ್ನು ಲಾರಿಗಳ ಮೂಲಕ ಹೊರ ರಾಜ್ಯಗಳಿಗೆ ಕಳುಹಿಸುತ್ತಿದ್ದೇವೆ ಎಂದು ಹೇಳಿದ ಛೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್‌ನ ಅಧ್ಯಕ್ಷ ಎಸ್.ಎಂ. ಚಂದ್ರಯ್ಯ, ನಮಗೂ ಸಹ ಗೂಡ್ಸ್ ರೈಲು ಸೇವೆ ಬಳಸಲು ಅನುಕೂಲ ಮಾಡಿಕೊಡಿ ಎಂದು ಮನವಿ ಸಲ್ಲಿಸಿದರು.

Be the first to comment on "ಹೊಸಪೇಟೆ-ಕೊಟ್ಟೂರು-ದಾವಣಗೆರೆ ರೈಲು ಸಂಚಾರಕ್ಕೆ ಒಪ್ಪಿಗೆ"

Leave a comment

Your email address will not be published.


*