ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ-ಕೆ.ಸಿ.ಕೊಂಡಯ್ಯ

Share

ಹರಿಹರ : ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ. ಅನ್ನ ಹಾಗೂ ಬಟ್ಟೆ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗ ಎಂದು ರಾಜ್ಯಸಭಾ ಸದಸ್ಯ ಕೆ.ಸಿ.ಕೊಂಡಯ್ಯ ಬಣ್ಣಿಸಿದರು.
ಪದ್ಮಶಾಲಿ ಸೇವಾ ಸಮಾಜ ಹಮ್ಮಿಕೊಂಡಿದ್ದ ಮಾರ್ಕಾಂಡೇಶ್ವರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾಗರಿಕ ಸಮಾಜ ನಿರ್ಮಾಣದಲ್ಲಿ ನೇಕಾರ ಸಮುದಾಯದ ಕೊಡುಗೆ ಅನನ್ಯ. ಜಾಣ್ಮೆ, ಸಹನೆ,ತಾಳ್ಮೆ ಹಾಗೂ ನಿಪುಣತೆಯಿಂದ ಬದುಕಿಗೆ ಅಗತ್ಯವಾದ ಬಟ್ಟೆಗಳನ್ನು ನೇಯ್ದ ನೇಕಾರರ ಬದುಕು ಅನಕ್ಷರತೆಯಿಂದ ದುರ್ಬರವಾಗಿದೆ ಎಂದು ವಿಷಾದಿಸಿದರು.
ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಗಮನ ನೀಡಬೇಕು. ಸಮಾಜದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಅರ್ಥಿಕ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ ಮಹನೀಯರ ಹಾಗೂ ದಾರ್ಶನಿಕರ ಜಯಂತ್ಯುತ್ಸವ ಮತಗಳಿಕೆಯ ಕಾರ್ಯಕ್ರಮಗಳಾಗದೇ ಸಣ್ಣ ಸಮಾಜಗಳ ಸಂಘಟನೆಗೆ ಈ ರೀತಿಯ ಪೂರಕವಾಗಿರಲಿ.ಸಮಾಜದ ಅಭಿವೃದ್ಧಿಗೆ ಶಾಸಕರ ನಿಧಿಯಿಂದ ೫ಲಕ್ಷ ರೂ. ಅನುದಾನ ಬಿಡುಗಡೆ ಮಾಡಿದ್ದೇನೆ ಎಂದರು.
ಬಿಜೆಪಿ ಮುಖಂಡ ಬಿ.ಪಿ.ಹರೀಶ್ ಮಾತನಾಡಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಣ್ಣ ಸಮಾಜಗಳು ಮತ್ತು ಮಠ-ಮಾನ್ಯಗಳ ಅಭಿವೃದ್ಧಿಗೆ ಅನುದಾನ ನೀಡುವ ಮೂಲಕ ಶೋಷಿತ ವರ್ಗಗಳ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಯಿತು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಎಸ್.ರಾಮಪ್ಪ,ಚಿತ್ರನಟ ಡಾ.ವಿ.ನಾಗೇಂದ್ರಪ್ರಸಾದ್, ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎನ್.ಗೋಪಿ,ವಕೀಲರ ಸಂಘದ ಅಧ್ಯಕ್ಷ ಬಸವರಾಜ ಓಂಕಾರಿ,ಮುಖಂಡ ಎಚ್.ಕೊಟ್ರಪ್ಪ ಮತ್ತಿತರರಿದ್ದರು.

Be the first to comment on "ದೇಶಕ್ಕೆ ರೈತ ಹಾಗೂ ನೇಕಾರ ಅನಿವಾರ್ಯ-ಕೆ.ಸಿ.ಕೊಂಡಯ್ಯ"

Leave a comment

Your email address will not be published.


*