ವಿದ್ಯಾತಪಸ್ವಿಯೊಬ್ಬನ ಸಾಹಸಗಾಥೆ : ಸಿದ್ಧಗಂಗೆಯಸಿರಿ

Share
  • 55
    Shares

48 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಈ ಸಂಸ್ಥೆಯಲ್ಲಿ ಕಲಿತ ಹಿರಿಯ ವಿದ್ಯಾರ್ಥಿಗಳನೇಕರು ಸಮಾಜದ ವಿವಿಧಸ್ತರಗಳಲ್ಲಿ ಗೌರವ ಸಂಪಾದಿಸಿಕೊಂಡು ಉನ್ನತ ಹುದ್ದೆಯಲ್ಲಿದ್ದಾರೆ 20 ವರ್ಷ ಬಾಡಿಗೆ ಕಟ್ಟಡದಲ್ಲಿ 28 ವರ್ಷಗಳಿಂದ ಸ್ವಂತ ಕಟ್ಟಡದಲ್ಲಿ ಸಿದ್ದಗಂಗೆಯಯ ಇತಿಹಾಸ ರೂಪುಗೊಂಡಿದೆ. ದಾವಣಗೆರೆಯಲ್ಲಿ ಸಿದ್ದಗಂಗೆಯನ್ನು ತಂದ ಭಗೀರಥ ಲೆನಿನ್ ನಗರವನ್ನು ಸಿದ್ದಲಿಂಗೇಶ್ವರ ನಗರವನ್ನಾಗಿ ಮಾರ್ಪಡಿಸಿದ ಮಹಾ ಸಾಹಸಿ ಶಿವಣ್ಣನ ಅಧ್ಯಯನ ಯೋಗ್ಯಪುಟಗಳು ಈ ಪುಸ್ತಕದಲ್ಲಿವೆ.


ಇತ್ತೀಚೆಗೆ ಬಿಡುಗಡೆಯಾದ ಸಿದ್ದಗಂಗೆಯ ಸಿರಿ ಹೆಸರಿನ ಪುಸ್ತಕದ ಪೀಠಿಕೆಯ ಮಾತುಗಳು ಮೇಲಿನಂತಿವೆ
ಒಬ್ಬ ವಿದ್ಯಾವಂತ ಸಾಮಾನ್ಯ ವ್ಯಕ್ತಿಯ ಬೋಧನೆಯನ್ನೆ ಬಂಡವಾಳ ಮಾಡಿಕೊಂಡು ಪುಟ್ಟದಾಗಿ ಶಾಲೆಯೊಂದರ ಆರಂಭಕ್ಕೆ ಮುಂದಾಗುವುದು, ಆರಂಭದ ವರ್ಷಗಳಲ್ಲಿ ಸಹನೆಯನ್ನು ಪರೀಕ್ಷಿಸುವಂತಹ ಕಷ್ಟದ ಸಂದರ್ಭಗಳನ್ನು ಧೈರ್ಯದಿಂದ ಎದುರಿಸಿ ವಿದ್ಯಾಸಂಸ್ಥೆಗೊಂದು ಗಟ್ಟಿನೆಲೆಯನ್ನು ಕೊಡುವಲ್ಲಿನ ಸಾಹಸಮಯ ಪ್ರಯತ್ನ ಇಲ್ಲಿ ಅಕ್ಷರಗಳ ಮೂಲಕ ದಾಖಲುಗೊಂಡಿದೆ.
ಹೊಟ್ಟೆಪಾಡಿಗೆಂದು ಶಿಕ್ಷಕಿವೃತಿಯನ್ನು ಹುಡುಕಿಕೊಂಡು ಬಂದು ಸಂಸ್ಥೆಯ ಬೆಳವಣಿಗೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಲ್ಲದೇ ಆ ಸಂಸ್ಥಾಪಕರ ಬದುಕಿಗೂ ಆಸರೆಯಾಗಿ ನಿಲ್ಲುವಲ್ಲಿ ಜಾತಿ, ಧರ್ಮದ ಆತಂಕಗಳನ್ನು ದಿಟ್ಟವಾಗಿ ಎದುರಿಸಿದ ಶಿಕ್ಷಕಿ/ಹೆಡ್ ಮಿಸ್ ಆದ ಜಸ್ಟಿನ್ ಡಿಸೌಜ ಅವರೇ ಈ ಸಾಹಸಗಾಥೆಯ ನಿರೂಪಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ : ಸುಮಾರು ಐದು ದಶಕಗಳ ಕಾಲಾವಧಿಯಲ್ಲಿ ಕಣ್ಣೆದುರೇ ಮಹತ್ವದ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿರುವುದನ್ನು ಎಂ.ಎಸ್.ಶಿವಣ್ಣಮತ್ತವರ ಭೋದಕ ಪತ್ನಿ ಡಿಸೌಜ ಅವರು ಸಾಕ್ಷೀಕರಿಸಲು ಸಾಧ್ಯವಾಗಿದೆ ಶ್ರಮದ ಫಲ ಈಗ ಬೃಹತ್ತಾಗಿ ಬೆಳೆದುನಿಂತಿದೆ. ಈಗಲೂ ನಿತ್ಯವೂ ಐದು ಸಾವಿರ ಸಂಖ್ಯೆಯ ವಿದ್ಯಾರ್ಥಿಗಳ ಸಂಗಮ ನೋಡುಗರನ್ನು ಚಕಿತಗೊಳಿಸುವಂತಿರುತ್ತದೆ.
ಫಲಿತಾಂಶದಲ್ಲಿ, ಕ್ರೀಡೆ ಮತ್ತು ಸಾಂಸೃತಿಕ ಕಾರ್ಯಕ್ರಮಗಳು ಹಾಗೂ ರಾಷ್ಟ್ರಿಯ ದಿನಾಚರಣೆಗಳ ಸಂದರ್ಭದಲ್ಲಿ ಇಲ್ಲಿನ ವಿದ್ಯಾರ್ಥಿವೃಂದದ ಪ್ರತಿಭಾಪ್ರದರ್ಶನ ಜನಮನವನ್ನು ಸೂರೆಗೊಂಡಿದೆ. ಗಣ್ಯರ ಮುಕ್ತಕಂಠದ ಪ್ರಶಂಸೆಯನ್ನು ಪಡೆದುಕೊಂಡಿದೆ.
ಬೋಧನೆಯೆ ನನ್ನ ಪ್ರಾಣ ಎಂಬ ಸಂಕಲ್ಪದಾರಿಯಾದ ಶಿವಣ್ಣ ಈಚಿನ ವರ್ಷಗಳವರೆಗೆ ಅಕ್ಷರಶ: ಪಾಲಿಸಿಕೊಂಡು ಬಂದರು. ಎಪ್ಪತೆಂಟನ್ನು ದಾಟಿರುವ ವಯೋಮಾನ ಆ ಉತ್ಸಾಹ ಮತ್ತು ಖಡಕ್‌ಗೆ ಕಡಿವಾಣ ಹಾಕಿದ ಡಿಸೌಜ ಮಿಸ್ ಕೈಂಕರ್ಯ ಕಾರ್ಯದಿಂದ ಬಿಡುವನ್ನು ಹೊಂದಿಲ್ಲ ಇವರೊಂದಿಗೆ ಪುತ್ರರಾದ ಹೇಮಂತ್, ಡಾ, ಜಯಂತ್ ಮತ್ತು ಇವರಿಬ್ಬರ ಪತ್ನಿಯರು ಕೂಡ ಬೋಧನೆಯನ್ನು ಇಷ್ಟಪಟ್ಟು ಮಾಡುತ್ತಿರುವುದರಿಂದಲೇ ಇತರೆ ಭೋಧಕ ಸಿಬ್ಬಂದಿಗೆ ಉತ್ತಮ ಮಾದರಿ ಕಣ್ಣೆದುರಿಗೆ ಇರುವಂತಾಗಿದೆ. ಶಿವಣ್ಣ ಗಣಿತ ಪಾಠ ಹೇಳುತ್ತಿದ್ದರು. ಅವರು ಪಾಠಕ್ಕೆ ಕಾಲದ ಮಿತಿ ಇರುತ್ತಿರಲಿಲ್ಲ. ಕೆಲವೊಮ್ಮೆ ೪೫ನಿಮಿಷಗಳ ಅವಧಿ ಎರಡೂವರೆ ಗಂಟೆಗೂ ವಿಸ್ತಾರವಾಗುತ್ತಿತ್ತು. ಪಠ್ಯದ ಜೊತೆಗೆ ಕಥೆಗಳನ್ನು ಹೇಳಿ ವಿದ್ಯಾರ್ಥಿಗಳನ್ನು ಆಕರ್ಷಿಸುವುದು ಅವರ ವೈಶಿಷ್ಟವಾಗಿತ್ತು (ಪು-೧೬೬) ಅವರು ಮನೆಪಾಠದ ತೀವ್ರ ವಿರೋಧಿ, ಮಕ್ಕಳು ತಮ್ಮ ಎಲ್ಲಾ ಸಂಶಯ ಹಾಗೂ ತಾಲೀಮನ್ನು ಶಾಲೆಯಲ್ಲಿಯೇ ಪಡೆಯಬೇಕು ಎಂಬುದು ಅವರ ಒತ್ತಾಸೆ ಮೊದಲಿಗೆ ಹತ್ತನೇ ತರಗತಿಯವರೆಗೆ ದೊರೆಯುತ್ತಿದ್ದ ಶಿಕ್ಷಣ ಈಗ ಪಿಯುಸಿವರೆಗೂ ವಿಸ್ತಾರಗೊಂಡಿದೆ. ಆಯ್ದಮೆರಿಟ್ ವಿದ್ಯಾರ್ಥಿಗಳಿಗಿಲ್ಲ ಉಚಿತ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಹಸ್ರಾರು ವಿದ್ಯಾರ್ಥಿಗಳ ಸಮೂಹ ನೂರಾರು ಸಂಖ್ಯೆಯ ಸಿಬ್ಬಂಧಿ ವರ್ಗದ ನಿರ್ವಹಣೆ ಸುಲಭ ಸಾಧ್ಯದ ಮಾತಲ್ಲ. ಗಟ್ಟಿಗ ಶಿವಣ್ಣ ಸರ್ಕಾರದ ಅನುದಾನದ ಗೋಜಿಗೆ ಹೋಗಿಲ್ಲ ಎಂಬುದು ಅವರ ಸಾಹಸದ ಮತ್ತೊಂದು ಮುಖ ಎನ್ನಬಹುದು. ವಿದ್ಯಾಸಂಸ್ಥೆಯ ೧೯೯೭ರಲ್ಲಿ ಅದ್ದೂರಿಯಾಗಿ ರಜತ ಮಹೋತ್ಸವವನ್ನು ಆಚರಿಸಿಗೊಂಡಿದೆ. ತುಮಕೂರಿನ ಸಿದ್ಧಗಂಗಾ ಶ್ರೀಗಳು ಆ ಸಮಾರಂಭದ ಸಂಭ್ರಮಕ್ಕೆ ಸಾಕ್ಷಿಯಾಗಿದ್ದುದು ಅವಿಸ್ಮರಣೀಯ ಸಂದರ್ಭ ೨೦೦೮ರ ಜನವರಿ ೨೬ರಂದು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಗ್ರೌಂಡ್‌ನಲ್ಲಿ ಈ ಶಾಲೆಯ ೩೫೦ ಮಕ್ಕಳು ಪ್ರದರ್ಶಿಸಿದ ಸಮರ್ಪಣೆ ನೃತ್ಯರೂಪಕ ಅತ್ಯಂತ ಯಶಸ್ವಿಯನ್ನು ಖಂಡಿತಲ್ಲದೆ ಪ್ರಥಮ ಬಹುಮಾನವನ್ನು ಪಡೆಯುವ ಮೂಲಕ ದೂರದ ರಾಜಧಾನಿಯಲ್ಲೂ ಸಿದ್ಧಗಂಗಾ ಪ್ರತಿಭೆ ಮಿಂಚುವಂತಾಯಿತು.
ವೇತನಕ್ಕಾಗಿ ದಿನ ಎಣಿಸಬೇಡಿ ನಾನು ಮಗುವಿಗೆ ಎಷ್ಟು ಪಾಠ ಕಲಿಸಿದೆ ಎಂಬುವುದರ ಲೆಕ್ಕ ಇಡಿ. ಪಾಠ ಮುಗಿಸುವುದಲ್ಲ, ಪಾಠಕಲಿಸಿ. ಮಕ್ಕಳಲ್ಲಿರುವ ಸಹಜ ಪ್ರತಿಭೆ ಅರಳಲು ನೆರವಾಗಿ ಎಂಬುದು ಶಿಕ್ಷಕರಿಗೆ ಶಿವಣ್ಣನವರ ಹಿತನುಡಿ ಶಿವಣ್ಣನವರ ಶಿಕ್ಷಣದ ತಪಸ್ಸಿಗೆ ಅನೇಕ ಸಂಘಸಂಸ್ಥೆಗಳಿಂದ ಪ್ರಶಸ್ತಿ,ಸನ್ಮಾನಗಳು ಸಂದಿವೆ.
ಸುಮಾರು ೩೦೪ಪುಟಗಳ ಈ ಕೃತಿಯಲ್ಲಿ ಶಿಕ್ಷಕನೊಬ್ಬನ ಸಾಹಸಮಯ ಬದುಕಿನ ಘಟನಾವಳಿ ಎಳೆಎಳೆಯಾಗಿ ಅನಾವರಣಗೊಂಡಿದೆ. ನಿಶ್ಚಿತ ಗುರಿ, ಕಠಿಣ ಪರಿಶ್ರಮ, ಅಸೀಮ ಧೈರ್ಯವಂತಿಕೆಯ ಬಂಡವಾಳದಿಂದ ಬೃಹತ್ ವಿದ್ಯಾಸಂಸ್ಥೆ ನೆಲೆಯಾಗಲು ಸಾಧ್ಯ ಎಂಬುದನ್ನು ದಾವಣಗೆರೆಯ ಎಂ.ಎಸ್.ಶಿವಣ್ಣ ಸಾಬೀತುಪಡಿಸಿರುವುದು ಎಂತಹವರನ್ನು ಚಕಿತಗೊಳಿಸದಿರದು, ಅತ್ರೇಯ ಪ್ರಕಾಶನ, ಸಿದ್ದೇಲಿಂಗೇಶ್ವರನಗರ, ದಾವಣಗೆರೆ ಇವರಿಂದ ಪುಸ್ತಕ ಪ್ರಕಾಶಿತವಾಗಿದೆ. – ವಿ.ಹನುಮಂತಪ್ಪ

Be the first to comment on "ವಿದ್ಯಾತಪಸ್ವಿಯೊಬ್ಬನ ಸಾಹಸಗಾಥೆ : ಸಿದ್ಧಗಂಗೆಯಸಿರಿ"

Leave a comment

Your email address will not be published.


*