ನಾನು ಬಿಜೆಪಿ ಸೇರುವುದಿಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ

Share
  • 64
    Shares

ದಾವಣಗೆರೆ: ಬಿಜೆಪಿ ಸೇರ್ಪಡೆ ಕುರಿತ ವದಂತಿ ಬಗ್ಗೆ ನಗರದ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಶಾಸಕ ಎಸ್ಸೆಸ್ ಮಾತನಾಡಿದರು.
ನಾನು ಬಿಜೆಪಿ ಸೇರಲ್ಲ. ಬಿಜೆಪಿಯಲ್ಲಿ ಯಾರಾದರೂ ಜೈಲಿಗೆ ಹೋಗದೆ ಇದ್ದವರು ಇದ್ದರೆ ಕಾಂಗ್ರೆಸ್‌ಗೆ ಬರಲಿ ಎಂದು ಶಾಸಕ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರೂ ಆದ ಶಾಮನೂರು ಶಿವಶಂಕರಪ್ಪ ಅವರು ಹೇಳಿದರು.
ನಾನು ಅಥವಾ ನನ್ನ ಪುತ್ರ (ಸಚಿವ ಎಸ್.ಎಸ್.ಮಲ್ಲಿಕಾರ್ಜುನ) ಬಿಜೆಪಿ ಸೇರುವುದು ಸುಳ್ಳು. ಯಾರು ಏನಾದರೂ ಹೇಳಿಕೊಳ್ಳಲಿ ಎಂದು ಅವರು ತೀಕ್ಷ್ಣವಾಗಿ ನುಡಿದರು.ನನಗೆ ಯಾರಿಂದಲೂ ಒತ್ತಡ ಇಲ್ಲ ಎಂದರು.

Be the first to comment on "ನಾನು ಬಿಜೆಪಿ ಸೇರುವುದಿಲ್ಲ: ಶಾಸಕ ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ"

Leave a comment

Your email address will not be published.


*