ದಾವಣಗೆರೆ ಜಿಲ್ಲೆಯ 89 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ

Share
  • 46
    Shares

ಮಾ. 23 ರಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ದಾವಣಗೆರೆ-ಮಕ್ಕಳು ವಿಭಿನ್ನ ರೀತಿಯ ಸಸಿಗಳಿದ್ದಂತೆ. ಯಾವ ಸಸಿಗೆ ಹೇಗೆ ನೀರು, ಗೊಬ್ಬರ ಹಾಕಿ ಆರೈಕೆ ಮಾಡಬೇಕೆಂದು ತಿಳಿದು ಪೋಷಿಸಿದಲ್ಲಿ ಉತ್ತಮ ಫಲ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ಹೇಳಿದರು.
೨೦೧೮ ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ವ್ಯವಸ್ಥಿತವಾಗಿ ನಡೆಯುವ ಸಂಬಂಧ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಅಭಿರಕ್ಷಕರಿಗೆ ನಗರದ ಡಯಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಕೆ ಕೋದಂಡ ರಾಮ ಮಾತನಾಡಿ ೨೦೧೮ ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಜಿಲ್ಲೆಯಲ್ಲಿ ಒಟ್ಟು ೮೯ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಈ ಕೇಂದ್ರಗಳು ಕ್ಲಸ್ಟರ್ ಕೇಂದ್ರಗಳಾಗಿರುತ್ತವೆ. ಪ್ರತಿ ಕೇಂದ್ರದಲ್ಲಿ ಸಿಸಿ ಟಿವಿ ಅಳವಡಿಸಲಾಗಿದೆ. ಮಾರ್ಚ್ ೨೩ ರಿಂದ ಏಪ್ರಿಲ್ ೬ ರವರೆಗೆ ಪರೀಕ್ಷೆಗಳು ನಡೆಯಲಿವೆ.
ಚನ್ನಗಿರಿ ೧೬, ದಾವಣಗೆರೆ ಉತ್ತರ ೧೧, ದಾವಣಗೆರೆ ದಕ್ಷಿಣ ೨೧, ಹರಪನಹಳ್ಳಿ ೧೨, ಹರಿಹರ ೧೦, ಹೊನ್ನಾಳಿ ೧೦ ಮತ್ತು ಜಗಳೂರು ೯ ಸೇರಿದಂತೆ ಒಟ್ಟು ೮೯ ಪರೀಕ್ಷಾ ಕೇಂದ್ರಗಳಿವೆ. ಜಿಲ್ಲೆಯಲ್ಲಿ ಒಟ್ಟು ೪೧ ಸರ್ಕಾರಿ, ೩೯ ಅನುದಾನಿತ ಹಾಗೂ ೦೯ ಅನುದಾನರಹಿತ ಶಾಲೆಗಳಿವೆ. ಚನ್ನಗಿರಿ ತಾಲ್ಲೂಕಿನಲ್ಲಿ ೩೬೨೬, ದಾವಣಗೆರೆ ಉತ್ತರ ೩೨೪೦, ದಾವಣಗೆರೆ ದಕ್ಷಿಣ ೬೧೩೨, ಹರಪನಹಳ್ಳಿ ೩೬೦೩, ಹರಿಹರ ೩೨೮೭, ಹೊನ್ನಾಳಿ ೨೭೮೪ ಮತ್ತು ಜಗಳೂರು ತಾಲ್ಲೂಕಿನಲ್ಲಿ ೨೧೬೩ ಸೇರಿದಂತೆ ೨೪೯೩೫ ವಿದ್ಯಾರ್ಥಿಗಳಿದ್ದು ಪುನರಾವರ್ತಿತ ೧೬೬೦ ಸೇರಿ ಒಟ್ಟು ೨೬೫೯೫ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದಾರೆ.
ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಈ ವ್ಯಾಪ್ತಿ ಪ್ರದೇಶದಲ್ಲಿ ಯಾವುದೇ ಪ್ರಿಂಟರ್ ಜೆರಾಕ್ಸ್ ಮಶೀನ್ ಉಪಯೋಗಿಸದಂತೆ ಕ್ರಮ ವಹಿಸಲಾಗುವುದು. ಬೆಳಿಗ್ಗೆ ೯.೧೫ ಕ್ಕೆ ಪ್ರಥಮ ಲಾಂಗ್ ಬೆಲ್, ೯.೨೫ ಕ್ಕೆ ಎರಡನೇ ಬೆಲ್, ೯.೩೦ ಕ್ಕೆ ಮೂರನೇ ಬೆಲ್ ಮಾಡಲಾಗುವುದು. ಮೂರನೇ ಬೆಲ್ ಆದ ನಂತರ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.
ಸಭೆಯಲ್ಲಿ ಡಯಟ್ ಪ್ರಾಚಾರ್ಯರಾದ ಲಿಂಗರಾಜು, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾಗಳು, ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.

Be the first to comment on "ದಾವಣಗೆರೆ ಜಿಲ್ಲೆಯ 89 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ"

Leave a comment

Your email address will not be published.


*