ಕೆಂಡತುಳಿದು ಭಕ್ತಿ ಸಮರ್ಪಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್

Share
  • 259
    Shares

ದಾವಣಗೆರೆ-ಇಲ್ಲಿನ ಹಳೇಪೇಟೆಯ ವೀರಭದ್ರೇಶ್ವರ ದೇವರ ಕೆಂಡೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.,ಮಲ್ಲಿಕಾರ್ಜುನ್ ಕೆಂಡ ತುಳಿಯುವ ಮೂಲಕ ಭಕ್ತಿ ಸಮರ್ಪಿಸಿದರು. ಕೆಂಡೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪ್ರತಿವರ್ಷದಂತೆ ಈ ವರ್ಷವೂ ಕೂಡ ಕುಟುಂಬ ಸಮೇತರಾಗಿ ವೀರಭದ್ರೇಶ್ವರ ದೇವಸ್ಥಾನಕ್ಕೆ ಆಗಮಿಸಿ ಪೂಜಾ ಕಾರ್ಯ ನೆರವೇರಿಸಿದರು. ಪೂಜೆ ಬಳಿಕೆ ಸಚಿವರು ಹಾಗೂ ಸಹೋದರ ಎಸ್.ಎಸ್.ಗಣೇಶ್ ದೇವಸ್ಥಾನದ ಮುಂಭಾಗದಲ್ಲಿದ್ದ ಕೆಂಡದ ಕುಂಡವನ್ನು ಹಾಯ್ದರು. ಅವರೊಂದಿಗೆ ನೂರಾರು ಭಕ್ತರು ಕೆಂಡವನ್ನು ತುಳಿದು ಹರಕೆ ತೀರಿಸಿದ್ದು ವಿಶೇಷವಾಗಿತ್ತು.

Be the first to comment on "ಕೆಂಡತುಳಿದು ಭಕ್ತಿ ಸಮರ್ಪಿಸಿದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್"

Leave a comment

Your email address will not be published.


*