ಜಿ.ಎಂ.ಐ.ಟಿ ಯಲ್ಲಿ ಮಹಿಳಾ ದಿನಾಚರಣೆ

Share
  • 36
    Shares

ದಾವಣಗೆರೆ-ನಗರದ ಜಿ.ಎಂ ತಾಂತ್ರಿಕ ಮಹಾವಿಧ್ಯಾಲಯದ ಜಿಎಂ ಹಾಲಮ್ಮ ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನ ವನ್ನು ಆಚರಿಸಲಾಯಿತು. ಈ ಉದ್ಘಾಟನಾ ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿನಿಯರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಮತಿ. ಸಂಗೀತಾ ಸದಾಫುಲೆ, ನಿರ್ದೆಶಕರು ಆಪರೇಷನ್ಸ್, ಆರಾಧ್ಯ ಸ್ಟೀಲ್ಸ್ ಪ್ರೈವೇಟ್ ಲಿಮಿಟೆಡ್, ದಾವಣಗೆರೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿದ ಅವರು ಮಹಿಳೆಯರಿಗೆ ಇಂದಿನ ದಿನಗಳಲ್ಲಿ ಹಲವು ತಾಂತ್ರಿಕ ರಂಗಗಳಲ್ಲಿ ಹೆಚ್ಚು ಅವಕಾಶಗಳಿದ್ದು ಅದರ ಸದುಪಯೋಗವನ್ನು ಮಹಿಳೆಯರು ಪಡೆಯಬೇಕಾಗಿದೆ ಮತ್ತು ಮಹಿಳೆ ತನ್ನ ಜೀವನದಲ್ಲಿ ಹಲವು ಪ್ರಮುಖ ಪಾತ್ರಗಳನ್ನು ವಹಿಸುತ್ತಾಳೆ ಹಾಗು ಸಂಸಾರದ ನಿರ್ವಹಣೆಯ ಜೋತೆಗೆ ವೃತ್ತಿ ಯನ್ನು ನಿಭಾಯಿಸುತ್ತಾಳೆ ಎಂದು ಹೆಮ್ಮೆಯಿಂದ ತಿಳಿಸಿ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಮಹಿಳೆಯರಿಗೂ ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯವನ್ನು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಶ್ರೀಮತಿ ಗಾಯತ್ರಿ ಸಿದ್ದೇಶ್ವರ್ ರವರು ಮಾತನಾಡಿ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆ ಇರುತ್ತಾಳೆ ಎಂಬುದರ ಬಗ್ಗೆ ತಿಳಿಸಿದರು ಮತ್ತು ಸರ್ಕಾರ ಮಹಿಳೆಯರಿಗೆ ನೀಡಿರುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು ಹಗು ಎಲ್ಲರಿಗೂ ಮಹಿಳಾ ದಿನಾಚರಣೆಯ ಶುಭಾಶಯವನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಢಳಿತಾಧಿಕಾರಿಗಳಾದ ವೈ.ಯು.ಸುಭಾಷ್‌ಚಂದ್ರ, ಪ್ರಾಂಶುಪಾಲರಾದ ಡಾ||.ಪಿ.ಪ್ರಕಾಶ್, ಶ್ರೀಮತಿ. ಪ್ರೇಮಾ.ಜಿ.ಎಮ್., ಶ್ರೀಮತಿ.ಸುಮಾ ಪ್ರಕಾಶ್, ಡಾ|| ಲತಾ.ಎಮ್.ಎಸ್. ಸಹ ಪ್ರಾಧ್ಯಾಪಕರು ರಸಾಯನಶಾಸ್ತ್ರ ವಿಭಾಗ, ಡಾ||ಮಂಜುಳಾ ಜಿ.ಎಮ್. ಸಹ ಪ್ರಾಧ್ಯಾಪಕರು ಗಣಿತ ವಿಭಾಗ ಹಾಗೂ ಕಾಲೇಜಿನ ಭೋಧಕ ಮತ್ತು ಭೋಧಕೇತರ ಮಹಿಳಾ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾರ್ಥನಾ ಗೀತೆಯನ್ನು ಕು. ಸಂಜನಾ ಕುಲಕರ್ಣೆ, ಸ್ವಾಗತ ಭಾಷಣವನ್ನು ಕು. ರಚೀತಾ .ಬಿ, ಮುಖ್ಯ ಅತಿಥಿಗಳ ಪರಿಚಯವನ್ನು ಕು. ಐಶ್ವರ್ಯ, ವಂದನಾರ್ಪಣೆ ಹಾಗೂ ನಿರೂಪಣೆಯನ್ನು ಕು. ಸೌಮ್ಯಾ ಬೆನ್ನೂರ್ ನೇರವೇರಿಸಿಕೊಟ್ಟರು.

Be the first to comment on "ಜಿ.ಎಂ.ಐ.ಟಿ ಯಲ್ಲಿ ಮಹಿಳಾ ದಿನಾಚರಣೆ"

Leave a comment

Your email address will not be published.


*