ಡಾ. ಬಾಬು ಜಗಜೀವನರಾಂ 111 ನೇ ದಿನಾಚರಣೆ

Share
  • 38
    Shares

ದಾವಣಗೆರೆ -ಇಂದು ಬೆಳಿಗ್ಗೆ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಇವರ 111 ನೇ ದಿನಾಚರಣೆಯನ್ನು ಸಾಂಕೇತಿವಾಗಿ ಡಾ.ಬಾಬು ಜಗಜೀವನರಾಂರವರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಆಚರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಪದ್ಮಾ ಬಸಂವತಪ್ಪ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಮಂಜುಳಮ್ಮ, ಚುನಾವಣಾ ತಹಶೀಲ್ದಾರ್ ಸಂತೋಷ್‌ಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಂಗಪ್ಪ, ಡಾ. ಬಿ ಆರ್ ಅಂಬೇಡ್ಕರ್ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಷ್ಮಾ ಕೌಸರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಸುನೀತಾ, ದಲಿತ ಮುಖಂಡರಾದ ಹನುಮಂತಪ್ಪ, ಮೂರ್ತಿ, ಹೆಂಚಿನಮನೆ ಕೆಂಚಪ್ಪ ಮತ್ತಿತರರು ಹಾಜರಿದ್ದರು.

Be the first to comment on "ಡಾ. ಬಾಬು ಜಗಜೀವನರಾಂ 111 ನೇ ದಿನಾಚರಣೆ"

Leave a comment

Your email address will not be published.


*