ಬಾಬು ಜಗಜೀವನ್ ರಾಮ್ ದೇಶ ಸೇವೆ ಅನನ್ಯ : ಡಿ. ಬಸವರಾಜ್

Share

ದಾವಣಗೆರೆ-ರಾಷ್ಟ್ರದಲ್ಲಿ ಭೂ ಸುಧರಣೆಗೆ ಒತ್ತು ನೀಡಿ ಭಾರತೀಯ ಕೃಷಿಗೆ ಆಧುನೀಕ ಸ್ಪರ್ಶ ನೀಡಿ ದೇಶ ಸಂಪೂರ್ಣ ಆಹಾರ ಸ್ವಾವಲಂಬನೆ ಹೊಂದಲು ಹಸಿರು ಕ್ರಾಂತಿಯನ್ನೇ ಸಾರಿದ ದಿ|| ಮಾಜಿ ಉಪಪ್ರದಾನಿ ಮಂತ್ರಿ ಡಾ|| ಬಾಬು ಜಗಜೀವನ್‌ರಾಮ್‌ರವರು ದೇಶಕ್ಕೆ ಸಲ್ಲಿಸಿದ ಸೇವೆ ಅನ್ಯನ್ಯ ಎಂದು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಕೆ.ಎಸ್.ಐ.ಸಿ. ಮಾಜಿ ಅಧ್ಯಕ್ಷ ಡಿ. ಬಸರಾಜ್ ಸ್ಮರಿಸಿದ್ದಾರೆ. ಅವರಿಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದಿಂದ ಏರ್ಪಡಿಸಲಾಗಿದ್ದ ಬಾಬು ಜಗಜೀವನ್‌ರಾಮ್ ಅವರ ೧೧೧ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ|| ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡುತ್ತಿದ್ದರು. ಬಾಬು ಜಗಜೀವನ್ ರಾಮ್‌ರವರು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿಜಿಯವರೊಡನೆ ದೇಶ ಸ್ವಾತಂತ್ರ್ಯ ಗಳಿಸಲು ಹೋರಾಟ ನಡೆಸಿದರು. ಭಾರತದ ಸ್ವಾತಂತ್ರ್ಯ ನಂತರ ದಿ|| ಪ್ರಧಾನ ಮಂತ್ರಿಗಳಾದ ಪಂಡಿತ್ ಜವಹರಲಾಲ್ ನೆಹರು, ಶ್ರೀಮತಿ ಇಂದಿರಾ ಗಾಂಧಿಯವರ ಸಚಿವ ಸಂಪುಟಗಳಲ್ಲಿ, ಸಂಪರ್ಕ ಸಾರಿಗೆ, ಆಹಾರ, ಕೃಷಿ, ಸಹಕಾರ, ಸಮುದಾಯ ಅಭಿವೃದ್ಧಿ ಹಾಗೂ ರಕ್ಷಣಾ ಸಚಿವರಾಗಿ ಕಾರ್ಮಿಕ ಸಚಿವರಾಗಿ ದೇಶಕ್ಕೆ ಮಹತ್ತರ ಸೇವೆ ಸಲ್ಲಿಸಿದ್ದಾರೆಂದು ಡಿ. ಬಸವರಾಜ್ ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರಾದ ಅಲ್ಲಾವಲ್ಲಿಘಾಜಿಖಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದರು. ಮುಖ್ಯಅತಿಥಿಗಳಾಗಿ ಕೆ.ಪಿ.ಸಿ.ಸಿ. ಲೇಬರ್ ಸೆಲ್ ಕಾರ್ಯದರ್ಶಿಗಳಾದ ಆಶ್ರಪ್ ಅಲಿ, ಕೆ.ಜಿ. ರಹಮತ್‌ವುಲ್ಲಾ, ಲಿಯಾಖತ್ ಅಲಿ ಮತ್ತು ಸಾಧಿಕ್ ಆಗಮಿಸಿದರು. ಸಮಾರಂಭದಲ್ಲಿ ಶ್ರೀಮತಿ ಮಮತಾಜ್ ಬೇಗಂ, ಶ್ರೀಮತಿ ಉಮಾ ತೋಟಪ್ಪ, ನವೀದ್ ಬಾಷಾ, ಹೆಚ್. ಸುಭಾನ್ ಸಾಬ್, ಅಬ್ದುಲ್ ಜಬ್ಬಾರ್, ಡಿ. ಶಿವಕುಮಾರ್, ಅಯಾಜ್, ರಮೇಶ್, ಇತರರು ಭಾಗವಹಿಸಿದ್ದರು.

Be the first to comment on "ಬಾಬು ಜಗಜೀವನ್ ರಾಮ್ ದೇಶ ಸೇವೆ ಅನನ್ಯ : ಡಿ. ಬಸವರಾಜ್"

Leave a comment

Your email address will not be published.


*