ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ-ಜಿಲ್ಲಾಧಿಕಾರಿ ರಮೇಶ್

Share
  • 55
    Shares

ದಾವಣಗೆರೆ -ಇಂದಿನಿಂದ(ಏ.17) ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು ಏಪ್ರಿಲ್ ೨೪ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುತ್ತದೆ. ಏಪ್ರಿಲ್ 25 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು ಏಪ್ರಿಲ್ 27 ರಂದು ಉಮೇದುವಾರಿಕೆಗಳನ್ನು ಹಿಂತೆಗದುಕೊಳ್ಳಬಹುದಾಗಿದೆ.
ಅವಶ್ಯವಿದ್ದರೆ ಮತದಾನ ಮೇ 12 ರ ಶನಿವಾರ ಜರುಗಲಿದ್ದು, ಮತ ಎಣಿಕೆ ಕಾರ್ಯ ಮೇ ೧೫ ರಂದು ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಿ ಎಸ್ ರಮೇಶ್ ತಿಳಿಸಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮೇ.12 ರಂದು ಬೆಳಿಗ್ಗೆ ೭ ರಿಂದ ಸಂಜೆ ೫ ರವರೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ೮ ಕ್ಷೇತ್ರಗಳಿಗೂ ಆಯೋಗ ಚುನಾವಣಾ ವೀಕ್ಷಕರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. ನಾಲ್ಕು ಕ್ಷೇತ್ರಗಳನ್ನು ಚುನಾವಣಾ ವೆಚ್ಚ ಸೂಕ್ಷ್ಮ ಕ್ಷೇತ್ರಗಳು ಎಂದು ಪರಿಗಣಿಸಿ ಹೆಚ್ಚಿನ ನಿಗಾ ವಹಿಸಲಾಗುವುದು.
ಫ್ಲೈಯಿಂಗ್ ಸ್ಕ್ವಾಡ್:
ಎಸ್‌ಎಸ್‌ಟಿ ತಂಡ ಗಳು ಸಮರ್ಪಕ ವಾಗಿ ಕಾರ್ಯ ನಿರ್ವಹಿ ಸುತ್ತಿದ್ದು, ಯಾವುದೇ ದೂರುಗಳಿದ್ದರೆ ೧೦೭೭ ಕ್ಕೆ ಕರೆ ಮಾಡಿ ತಿಳಿಸ ಬಹುದಾಗಿದೆ. ಏಪ್ರಿಲ್ 8 ರಿಂದ 14 ರವರೆಗೆ ನಡೆದ ಮಿಂಚಿನ ನೋಂದಣಿ ಕಾರ್ಯಕ್ರಮದಲ್ಲಿ ೨೮,೭೭೩ ಅರ್ಜಿಗಳು ಬಂದಿದ್ದು ಅವುಗಳನ್ನು ಪರಿಶೀಲಿಸಿ ಏಪ್ರಿಲ್ ೨೪ ರೊಳಗೆ ಕ್ರಮಬದ್ಧವಾಗಿರುವುವನ್ನು ಪರಿಗಣಿಸಿ ಎಪಿಕ್ ಕಾರ್ಡ್ ನೀಡಲಾಗುವುದು ಎಂದರು.

Be the first to comment on "ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ-ಜಿಲ್ಲಾಧಿಕಾರಿ ರಮೇಶ್"

Leave a comment

Your email address will not be published.


*