ದಾವಣಗೆರೆ ನಗರದಲ್ಲಿ ಪ್ರೀಪೇಯ್ಡ್‌  ಆಟೋ ಸರ್ವೀಸ್‌ಗೆ ಡಿಸಿ  ಚಾಲನೆ

Share
  • 150
    Shares

ದಾವಣಗೆರೆ – ನಗರದ ರೈಲ್ವೇ ನಿಲ್ದಾಣದಲ್ಲಿ ಪ್ರೀಪೇಯ್ಡ್‌ಆಟೋ ಸರ್ವೀಸ್‌ಗೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರೀ-ಪೇಯ್ಡ್ ಆಟೋ ಸೇವೆಯಿಂದ ನಗರದ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಶೀಘ್ರವೇ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲೂ ಈ ಸೇವೆ ಆರಂಭಿಸಲಾಗುವುದು ಎಂದು ಹೇಳಿದರು.
ಅನೇಕ ಕಡೆ ಆಟೋ ರಿಕ್ಷಾ ಚಾಲಕರಿಗೂ ಪ್ರಯಾಣಿಕರಿಗೆ ಬಾಡಿಗೆ ದರಕುರಿತಂತೆ ವಾಗ್ವಾದ ಉಂಟಾಗುತ್ತಿತ್ತು. ಆದರೆ ಈ ಸೇವೆಯಿಂದ ಚಾಲಕರು ಹಾಗೂ ಪ್ರಯಾಣಿಕರಿಬ್ಬರಿಗೂ ಅನುಕೂಲವಾಗಲಿದೆ.ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದುಹೇಳಿದರು.
ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್‌ಮಾತನಾಡುತ್ತಾ, ಮಹಿಳೆಯರು, ವೃದ್ದರ ಸುರಕ್ಷತಾ ದೃಷ್ಟಿಯಿಂದ ಪ್ರೀ-ಪೇಯ್ಡ್ ಆಟೋ ಸೇವೆ ಹೆಚ್ಚು ಅನುಕೂಲವಾಗಿದೆ. ಇದೀಗ ನಿರ್ಭೀತಿಯಿಂದ ಯಾವ ಸಂದರ್ಭದಲ್ಲಿ ಬೇಕಾದರೂ ಈ ಆಟೋ ಗಳಲ್ಲಿ ಪ್ರಯಾಣಿಸಬಹುದು. ಆಟೋ ಹಾಗೂ ಚಾಲಕರ ಸಂಪೂರ್ಣ ಮಾಹಿತಿ ಇರುವುದರಿಂದ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಕಾರ್ಯದರ್ಶಿ ವಿ.ಜಿ. ಶ್ರೀನಿವಾಸಯ್ಯ,ಪಾಲಿಕೆ ಆಯುಕ್ತ ಇಸ್ಲಾವುದ್ದೀನ್, ರೈಲ್ವೇನಿಲ್ದಾಣದ ಸ್ಟೇಷನ್ ಮ್ಯಾನೇಜರ್ ಪಿ.ಜಿ.ಆದಿಮನಿ, ಎಸ್ಪಿ ಎಂ.ಎಸ್. ಶರ್ಮಾ, ಎಸ್ಪಿ ಚೇತನ್  ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Be the first to comment on "ದಾವಣಗೆರೆ ನಗರದಲ್ಲಿ ಪ್ರೀಪೇಯ್ಡ್‌  ಆಟೋ ಸರ್ವೀಸ್‌ಗೆ ಡಿಸಿ  ಚಾಲನೆ"

Leave a comment

Your email address will not be published.


*