ಮತಯಂತ್ರಗಳು ವಿಶ್ವಾಸಾರ್ಹ, ಅನುಮಾನ ಬೇಡ : ಡಿಸಿ

Share
  • 28
    Shares

ದಾವಣಗೆರೆ -ಪ್ರಸಕ್ತ ಕರ್ನಾಟಕ ವಿಧಾನಸಭಾ ಚುನಾವಣೆಗಳಿಗೆ ಬಳಸಲಾಗುತ್ತಿರುವ ಮತಯಂತ್ರಗಲು ವಿಶ್ವಾಸಾರ್ಹತೆಯಿಂದ ಕೂಡಿದ್ದು, ಯಾವುದೇ ಅನುಮಾನ-ಆತಂಕಗಳಿಲ್ಲದೇ ಮತದಾನ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ತಿಳಿಸಿದರು.
ಜಿಲ್ಲಾ ಪ್ರಧಾನ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಸ್ವೀಪ್ ಸಮಿತಿ, ಮಹಾನಗರಪಾಲಿಕೆ ಹಾಗೂ ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮತಯಂತ್ರಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಲೋಕಿಕೆರೆ ಸಿದ್ದಪ್ಪ,ಪಾಲಿಕೆ ಆಯುಕ್ತರಾದ ಇಸ್ಲಾವುದ್ದೀನ್ ಗದ್ಯಾಳ್, ನ್ಯಾಯಾಧೀಶರುಗಳಾದ ೧ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ಎಸ್ ಎ ಸದಲಗಿ, ೨ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶರಾದ ನಾಗಶ್ರೀ, ಹಿರಿಯ ಸಿವಿಲ್ ಜಡ್ಜ್ ಸಾಬಪ್ಪ ವೇಮಗಲ್, ಕೌಟುಂಬಿಕ ನ್ಯಾಯಾಧೀಶರಾದ ಜಿನಾಳ್ ಕರ್, ನ್ಯಾಯಾಧೀಶರಾದ ಸೋಮಶೇಕರ್, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ, ಜಿಲ್ಲಾ ಸರ್ಕಾರಿ ವಕೀಲರಾದ ಸುರೇಶ್, ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Be the first to comment on "ಮತಯಂತ್ರಗಳು ವಿಶ್ವಾಸಾರ್ಹ, ಅನುಮಾನ ಬೇಡ : ಡಿಸಿ"

Leave a comment

Your email address will not be published.


*