ಬಂಕಾಪುರದ ಚನ್ನಬಸಪ್ಪರಿಗೆ ‘ಜೆ.ಹೆಚ್.ಪಟೇಲ್’ ಹಾಗೂ ಸಾಲುಮರದ ಉಮೇಶ್‌ಗೆ ‘ಯಂಗ್‌ಸ್ಪ್ರಿಂಗ್ಸ್’ ಪ್ರಶಸ್ತಿ

Share
  • 25
    Shares

ದಾವಣಗೆರೆ-ನಗರದ ಜೆ.ಹೆಚ್.ಪಟೇಲ್ ಕಾಲೇಜು ವತಿಯಿಂದ 2017-18ನೇ ಸಾಲಿಗೆ ಸಮಾಜವಾದಿ ಜೆ.ಹೆಚ್.ಪಟೇಲ್ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ,ಕನ್ನಡಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪರಿಗೆ ಹಾಗೂ ಯಂಗ್‌ಸ್ಪ್ರಿಂಗ್ಸ್ ಪ್ರಶಸ್ತಿಯನ್ನು ಹಾಸನದ ಪರಿಸರ ಹೋರಾಟಗಾರ ಸಾಲುಮರದ ಉಮೇಶ್‌ರಿಗೆ ನೀಡಲಾಗುವುದು ಎಂದು ಜೆ.ಎಚ್.ಪಟೇಲ್ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಪಿ.ದೊಗ್ಗಳ್ಳಿಯವರು ತಿಳಿಸಿದರು.

ಏ.7ರಂದು ಬೆ.11 ಗಂಟೆಗೆ ಪದ್ಮಶ್ರೀ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಆರ್.ಎಸ್.ವೀರೇಶ್,ಪ್ರೊ.ಬಿ.ಎಸ್.ಮಂಜುನಾಥ್,ಆರ್.ಜಿ.ಕರಿಬಸಪ್ಪ ಇದ್ದರು.

Be the first to comment on "ಬಂಕಾಪುರದ ಚನ್ನಬಸಪ್ಪರಿಗೆ ‘ಜೆ.ಹೆಚ್.ಪಟೇಲ್’ ಹಾಗೂ ಸಾಲುಮರದ ಉಮೇಶ್‌ಗೆ ‘ಯಂಗ್‌ಸ್ಪ್ರಿಂಗ್ಸ್’ ಪ್ರಶಸ್ತಿ"

Leave a comment

Your email address will not be published.


*