ಏಪ್ರಿಲ್ 3 ರಂದು ದಾವಣಗೆರೆಗೆ ರಾಹುಲ್‌ಗಾಂಧಿ

Share
  • 200
    Shares

ದಾವಣಗೆರೆ: ಏಪ್ರಿಲ್ 3ರ ಮಂಗಳವಾರದಂದು ಎಐಸಿಸಿ ಅಧ್ಯಕ್ಷರಾದ ರಾಹುಲ್‌ಗಾಂಧಿ ಅವರು ದಾವಣಗೆರೆಗೆ ಆಗಮಿಸಲಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ತಿಳಿಸಿದರು.
ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿ ಡಾ|| ಎಸ್ಸೆಸ್ ಭವನದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಎಐಸಿಸಿ ಅಧ್ಯಕ್ಷರಾದ ರಾಹುಲ್‌ಗಾಂಧಿ ಅವರು ಈಗಾಗಲೇ ರಾಜ್ಯದ ವಿವಿಧ ಕಡೆಗಳಲ್ಲಿ ರೋಡ್ ಷೋ ಮತ್ತು ಬಹಿರಂಗ ಸಭೆ ನಡೆಸಿದ್ದು, ಏಪ್ರಿಲ್ ೩ ರಂದು ದಾವಣಗೆರೆ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ವೀಕ್ಷಕರಾಗಿ ಕೆಪಿಸಿಸಿ ಕಾರ್‍ಯದರ್ಶಿಗಳಾದ ಶ್ರೀಮತಿ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕೆ.ಶೆಟ್ಟಿ, ಪಿ.ರಾಜಕುಮಾರ್, ಮಹಾಪೌರರಾದ ಶ್ರೀಮತಿ ಅನಿತಾಬಾಯಿ ಮಾಲತೇಶ್ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಹೆಚ್.ರಾಮಚಂದ್ರಪ್ಪ, ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷ ಬಿ.ಹೆಚ್.ವೀರಭದ್ರಪ್ಪ, ಕಾಂಗ್ರೆಸ್ ಹಿಂದುಳಿದ ವಿಭಾಗದ ಜಿಲ್ಲಾಧ್ಯಕ್ಷ ನಲ್ಕುಂದ ಹಾಲೇಶ್, ಮುಖಂಡರುಗಳಾದ ಎಸ್.ರಾಮಪ್ಪ, ಸೈಯದ್ ಸೈಪುಲ್ಲಾ, ಎಸ್.ಮಲ್ಲಿಕಾರ್ಜುನ್, ಹೆಚ್.ಜಯಣ್ಣ, ಎ.ನಾಗರಾಜ್ ಮತ್ತಿತರರಿದ್ದರು.

Be the first to comment on "ಏಪ್ರಿಲ್ 3 ರಂದು ದಾವಣಗೆರೆಗೆ ರಾಹುಲ್‌ಗಾಂಧಿ"

Leave a comment

Your email address will not be published.


*