ಜಿ.ಎಂ.ಐ.ಟಿ. ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಪ್ರಬಂಧ ಮಂಡನೆಯಲ್ಲಿ ಪ್ರಶಸ್ತಿ

Share
  • 74
    Shares

ದಾವಣಗೆರೆ-ದಿನಾಂಕ 26-03-2018ರಂದು, ಯು.ಬಿ.ಡಿ.ಟಿ ತಾಂತ್ರಿಕ ಮಹಾವಿದ್ಯಾಯದಲ್ಲಿ ನಡೆದ ತಾಂತ್ರಿಕ ಮೇಳ ಅಸ್ಪಾಯರ್-೨೦೧೮ರಲ್ಲಿ ನಗರದ ಜಿ.ಎಂ.ಐ.ಟಿ. ತಾಂತ್ರಿಕ ಮಹಾವಿದ್ಯಾಲಯದ ಇನ್ಫೊರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ೬ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯರಾದ ಕು|| ಸೌಮ್ಯ ಬೆನ್ನೂರ್ ಮಂಡಿಸಿದ ” Artificial Intelligence ” ತಾಂತ್ರಿಕ ಪ್ರಬಂದ ಎಂಬ ವಿಷಯಕ್ಕೆ ಪ್ರಥಮ ಪ್ರಶಸ್ತಿಯನ್ನು ಹಾಗು ಕು|| ಅನುಷಾ.ಜಿ.ಆರ್ ಮತ್ತು ಕು|| ಅರ್ಪಿತಾ .ಹೆಚ್.ಇ. ಮಂಡಿಸಿದ ತಾಂತ್ರಿಕ ಪ್ರಬಂದ ” Internet of Things ಎಂಬ ವಿಷಯಕ್ಕೆ ದ್ವಿತೀಯ ಪ್ರಶಸ್ತಿಯನ್ನು ಹಾಗು ಕು|| ಸುಷ್ಮಾ .ಎಸ್.ಎಚ್ ಮತ್ತು ಕು|| ಪ್ರಜ್ವಲ್.ಪಿ. ಜೈನ್ “Coding Competition” ನಲ್ಲಿ ದ್ವಿತೀಯ ಮತ್ತು ತೃತೀಯ ಪ್ರಶಸ್ತಿಯನ್ನು ಪಡೆದಿರುತ್ತಾರೆ. ೪ನೇ ಸೆಮಿಸ್ಟರ್‌ನ ವಿದ್ಯಾರ್ಥಿನಿಯರಾದ ಕು|| ಕಾವ್ಯಶ್ರೀ.ಕೆ.ಎಮ್. ಮತ್ತು ಕು|| ಸ್ಪೂರ್ತಿ ಮಂಡಿಸಿದ ತಾಂತ್ರಿಕ ಪ್ರಬಂದ “Traffic Light Detection for Colour Blind Individuals” ಎಂಬ ವಿಷಯಕ್ಕೆ ತೃತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಮತ್ತು ಅಗಡಿ ಕಾಲೇಜ್ ಆಫ್ ಇಂಜಿನೀಯರಿಂಗ್, ಲಕ್ಷ್ಮೇಶ್ವರ್ ನಲ್ಲಿ ನಡೆದ ತಾಂತ್ರಿಕ ಮೇಳ ಇಲ್ಯೂಮಿನಾಟಿ-೨೦೧೮ರಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿನಿಯಾದ ಕು|| ಕಾವ್ಯಶ್ರೀ ಕೆ.ಎಮ್. ಭಾಗವಹಿಸಿ ಮಂಡಿಸಿದ ತಾಂತ್ರಿಕ ಪ್ರಬಂದ ” A Method for Extracting Text from Stone Inscriptions using Character Spotting ” ಎಂಬ ವಿಷಯಕ್ಕೆ ಪ್ರಥಮ ಪ್ರಶಸ್ತಿಯನ್ನು ಪಡೆದು ನಮ್ಮ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ. ಇವರುಗಳು ಇನ್ಫೊರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಪ್ರೂ|| ಫೈರೋಜ್ ಖಾನ್ ಪ್ರೊ|| ಇಮ್ರಾನ್ ಖಾನ್ ಮತ್ತು ಪ್ರೂ|| ಕೀರ್ತಿ ಪ್ರಸಾದ್ ರವರ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದಿರುತ್ತಾರೆ,

ಇವರಿಗೆ ಕಾಲೇಜಿನ ಆಡಳಿತಾಧಿಕಾರಿಗಳಾದ ವೈ.ಯು. ಸುಭಾಶ್‌ಚಂದ್ರ, ಪ್ರಾಂಶುಪಾಲರಾದ ಡಾ|| ಪಿ.ಪ್ರಕಾಶ್, ಇನ್ಫೊರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ|| ಸುನೀಲ್ ಕುಮಾರ್ ಬಿ.ಎಸ್. ಮತ್ತು ಪ್ರೊ|| ನವೀನ್ ಆರ್.ಸಿ.ಎಂ, ಪ್ರಾಧ್ಯಾಪಕ ವರ್ಗದವರು ಹಾಗು ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Be the first to comment on "ಜಿ.ಎಂ.ಐ.ಟಿ. ಕಾಲೇಜಿನ ವಿದ್ಯಾರ್ಥಿಗಳಿಗೆ ತಾಂತ್ರಿಕ ಪ್ರಬಂಧ ಮಂಡನೆಯಲ್ಲಿ ಪ್ರಶಸ್ತಿ"

Leave a comment

Your email address will not be published.


*