ದಾವಣಗೆರೆಯಲ್ಲಿ ಬಿಜೆಪಿಯಿಂದ ಜನಮತ ವಿರೋಧಿ ದಿನ ಆಚರಣೆ

Share
  • 47
    Shares

ದಾವಣಗೆರೆ-ಕಾಂಗ್ರೆಸ್ ಮತ್ತು ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡು ಜನಾದೇಶದ ವಿರುದ್ಧ ಸರ್ಕಾರ ರಚಿಸುತ್ತಿವೆ ಎಂದು ಆರೋಪಿಸಿ ನಗರದಲ್ಲಿಂದು ಜಿಲ್ಲಾ ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಜನಮತ ವಿರೋಧಿ ದಿನ ಆಚರಿಸಿ ಗಾಂಧೀವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ನಗರದ ಗಾಂಧೀವೃತ್ತಕ್ಕೆ ಬಂದು ತಲುಪಿತು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ ರಾಜ್ಯದ ಜನರು ತಿರಸ್ಕರಿಸಿರುವ ಕಾಂಗ್ರೆಸ್ ಜೊತೆಗೆ ಕೇವಲ 37 ಸ್ಥಾನಗಳನ್ನು ಪಡೆದುಕೊಂಡಿರುವ ಜೆಡಿಸ್ ಸೇರಿಕೊಂಡು ಸರ್ಕಾರ ರಚಿಸುತ್ತಿರುವುದು ಅಪವಿತ್ರ. ಈ ಹಿಂದೆ ಆಡಳಿತ ಪಕ್ಷವಾಗಿದ್ದ ಕಾಂಗ್ರೆಸ್ ನ್ನು ರಾಜ್ಯದ ಜನತೆ ತಿರಸ್ಕರಿಸಿದ್ದಾರೆ. ಬಿಜೆಪಿಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದಾರೆ ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರು ಅಪವಿತ್ರ ಮೈತ್ರಿ ಮಾಡಿಕೊಂಡು ಜನರ ತೀರ್ಪಿಗೆ ವಿರುದ್ದವಾಗಿ ನಡೆದುಕೊಳ್ಳಲು ಹೊರಟಿದ್ದಾರೆ.ಈ ಸರ್ಕಾರ ಹೆಚ್ಚುದಿನ ಆಡಳಿತ ಮಾಡುವುದಿಲ್ಲ ಎಂದರು. ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ ಪ್ರಜಾಪ್ರಭುತ್ರವದ ಕಗ್ಗೊಲೆಯಾಗಿದೆ. ರಾಜ್ಯದ ಜನರು ಅಧಿಕಾರ ನಡೆಸಲು ಬಿಜೆಪಿಗೆ ಜನಾದೇಶ ನೀಡಿದ್ದಾರೆ. ಆದರೆ ತಿರಸ್ಕಾರಗೊಂಡಿರುವ ಎರಡು ಪಕ್ಷಗಳು ಸೇರಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದನ್ನು ನೋಡಿ ರಾಜ್ಯದ ಜನರು ನಗುತ್ತಿದ್ದಾರೆ ಎಂದರು.
ಈ ವೇಳೆ ಶಾಸಕರಾದ ಎಸ್.ಎ.ರವೀಂದ್ರನಾಥ್,ಎಂಪಿ,ರೇಣುಕಾಚಾರ್ಯ, ಪೊ,ಲಿಂಗಣ್ಣ, ಎಸ್.ವಿ,ರಾಮಚಂದ್ರ,ಮಾಜಿ ಶಾಸಕ ಬಿ.ಪಿ.ಹರೀಶ್, ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ವಿವಿಧ ಮೋರ್ಚಾಗಳ ಪದಾಧಿಕಾರಿಗಳು,ಜಿಲ್ಲಾ ಪಂಚಾಯತಿ ಸದಸ್ಯರು ಭಾಗವಹಿಸಿದ್ದರು.

Be the first to comment on "ದಾವಣಗೆರೆಯಲ್ಲಿ ಬಿಜೆಪಿಯಿಂದ ಜನಮತ ವಿರೋಧಿ ದಿನ ಆಚರಣೆ"

Leave a comment

Your email address will not be published.


*